ದುರಹಂಕಾರಿಗಳಂತೆ ಈ ರಾಶಿಯವರು!ತಾವು ಹೇಳಿದ್ದೇ ನಡೆಯಬೇಕು ಎನ್ನುವ ಹಠಮಾರಿಗಳು ಇವರು!

ಜ್ಯೋತಿಷ್ಯದ ಪ್ರಕಾರ, ನಮ್ಮ ಜನ್ಮ ಸ್ಥಾನ ಮತ್ತು ರಾಶಿಯ ಪ್ರಕಾರ ಪ್ರತಿಯೊಬ್ಬರ ವ್ಯಕ್ತಿತ್ವವನ್ನು ರೂಪುಗೊಳ್ಳುತ್ತದೆ. ಇದರ ಅನುಗುಣವಾಗಿ ಕೆಲವರು ಸ್ವಭಾವತಃ ಶಾಂತವಾಗಿರುತ್ತಾರೆ. ಆದರೆ, ಇನ್ನು ಕೆಲವರು ತಾವು ಹೇಳಿದ್ದೇ ಸರಿ ಎನ್ನುವುದನ್ನು ಸಾಬೀತುಪಡಿಸಲು ಯಾವ ಹಂತಕ್ಕೆ ಬೇಕಾದರೂ ಹೋಗಲು ಸಿದ್ದರಿರುತ್ತಾರೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಐದು ರಾಶಿಯವರು ವಾದಿಸುವುದರಲ್ಲಿ ನಿಸ್ಸೀಮರು. ಪರಿಸ್ಥಿತಿ ಏನೇ ಇದ್ದರೂ ತಮ್ಮ ಮಾತೇ ಮೇಲು ಎನ್ನುವುದನ್ನು ಸುಲಭವಾಗಿ ನಿರೂಪಿಸಿ ಬಿಡುತ್ತಾರೆ. ಇವರ ಆತ್ಮವಿಶ್ವಾಸವೇ ದುರಹಂಕಾರವಾಗಿ ಬದಲಾಗುತ್ತದೆ. ಅವರು ತಮ್ಮದೇ ತಪ್ಪಿದ್ದರೂ ಇತರರ ಮಾತನ್ನು ಕೇಳಲು ಇಷ್ಟಪಡುವುದಿಲ್ಲ. ಇದಲ್ಲದೆ, ಸಣ್ಣ ಸಾಧನೆ ಮಾಡಿದರೂ ತಮ್ಮನ್ನು ಮೀರಿಸುವವರು ಯಾರೂ ಇಲ್ಲ ಎನ್ನುವಂತೆ ಆಡುತ್ತಾರೆ.

ಮೇಷ ರಾಶಿ:

ಮೇಷ ರಾಶಿಯವರು ಸ್ವಭಾವತಃ ಸ್ಪರ್ಧಾತ್ಮಕ ಮನೋಭಾವದವರು. ರಾಶಿಚಕ್ರದ ಮೊದಲ ರಾಶಿ ಇದಾಗಿರುವುದರಿಂದ ಅವರು ಸದಾ ನಂಬರ್ ಒನ್ ಆಗಬೇಕೆಂಬ ಬಯಕೆಯನ್ನು ಹೊಂದಿರುತ್ತಾರೆ. ಅವರು ತಮ್ಮನ್ನು ತಾವು ಅತ್ಯುತ್ತಮರೆಂದು ಸಾಬೀತುಪಡಿಸಲು ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಅವರ ಆಕ್ರಮಣಶೀಲತೆ ಮತ್ತು ನೇರ ದಾಳಿಯು ಅವರ ಎದುರಾಳಿಗಳನ್ನು ಸೋಲಿಸಿ ಬಿಡುತ್ತದೆ. ಅವರಿಗೆ ಸೋಲು ಇಷ್ಟವೇ ಇರುವುದಿಲ್ಲ. ಹಾಗಾಗಿ ಯಾವುದೇ ಕೆಲಸ ಇರಲಿ ಗೆಲುವು ಸಾಧಿಸುವವರೆಗೆ ಸುಮ್ಮನೆ ಕೂರುವುದಿಲ್ಲ.

Zodiac Signs with Arrogant Traits

ಮಿಥುನ ರಾಶಿ:

ಮಿಥುನ ರಾಶಿಯವರು ಚುರುಕುಬುದ್ಧಿಯನ್ನು ಹೊಂದಿರುತ್ತಾರೆ. ಅವರ ಗಮನಾರ್ಹ ವೀಕ್ಷಣಾ ಕೌಶಲ್ಯವು ಪ್ರತಿಯೊಂದು ವಿಷಯದ ಬಗ್ಗೆಯೂ ಸಂಪೂರ್ಣ ಜ್ಞಾನವನ್ನು ಹೊಂದಿರುವಂತೆ ಮಾಡುತ್ತದೆ. ಅವರು ದೈಹಿಕ ಬಲಕ್ಕಿಂತ ಹೆಚ್ಚಾಗಿ ತಮ್ಮ ಮಾತಿನ ಮೂಲಕವೇ ಜಗಳ ಗೆಲ್ಲುತ್ತಾರೆ. ಅವರ ವಾಕ್ಚಾತುರ್ಯ ಮತ್ತು ಬುದ್ಧಿವಂತಿಕೆಯಿಂದ, ಎದುರಿಗಿರುವವರನ್ನು ಗೊಂದಲಕ್ಕೆ ದೂಡುತ್ತಾರೆ. ಜಾಣತನದಿಂದ ಚರ್ಚೆಯನ್ನು ತಮ್ಮ ಪರವಾಗಿ ತಿರುಗಿಸುತ್ತಾರೆ.

ಮಂಗಳ ಗೋಚರದಿಂದ ರಾಜಯೋಗ:ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು
ಮಂಗಳ ಗೋಚರದಿಂದ ರಾಜಯೋಗ:ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರು ಯಾವಾಗಲೂ ತಾವು ಅಂದುಕೊಂಡಂತೆಯೇ ನಡೆಯಬೇಕು ಎಂದು ಬಯಸುತ್ತಾರೆ. ಅವರು ಯಾವುದಾದರೂ ಒಂದು ವಿಷಯವನ್ನು ಸಾಧಿಸಬೇಕು ಅಂದುಕೊಂಡರೆ ಅದನ್ನು ಸಾಧಿಸಿಯೇ ತೀರುತ್ತಾರೆ. ಇವರ ನಿರ್ಧಾರ ಅಚಲವಾದಾಗ, ಅವರನ್ನು ಸೋಲಿಸುವುದು ಕಷ್ಟ. ಅವರು ಪೂರ್ಣ ಶಕ್ತಿ ಮತ್ತು ಆತ್ಮವಿಶ್ವಾಸದಿಂದಲೇ ವಾದಕ್ಕಿಳಿಯುತ್ತಾರೆ. ಒಮ್ಮೊಮ್ಮೆ ಅವರ ಅತಿಯಾದ ಆತ್ಮವಿಶ್ವಾಸವೇ ದುರಹಂಕಾರವಾಗಿ ಬದಲಾಗುತ್ತದೆ. ಅವರ ದುರಹಂಕಾರಿ ಸ್ವಭಾವದಿಂದಾಗಿ, ಅವರು ಸ್ನೇಹವನ್ನು ಕಾಪಾಡಿಕೊಳ್ಳಲು ಅಥವಾ ಸಂತೋಷದ ದಾಂಪತ್ಯ ಜೀವನವನ್ನು ಹೊಂದಲು ಸಾಧ್ಯವಾಗುವುದಿಲ್ಲ.

ತುಲಾ ರಾಶಿ:

ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯ ಅಡಿಯಲ್ಲಿ ಜನಿಸಿದವರಿಗೆ ತಮ್ಮ ನಿರ್ಧಾರದ ಬಗ್ಗೆ ಅಪಾರ ವಿಶ್ವಾಸವಿರುತ್ತದೆ. ಆದರೆ ಈ ಆತ್ಮವಿಶ್ವಾಸವು ಹೆಚ್ಚಾಗಿ ದುರಹಂಕಾರವಾಗಿ ಬದಲಾಗುತ್ತದೆ. ಇವರು ತಮ್ಮ ಬುದ್ಧಿವಂತಿಕೆ ಮತ್ತು ಸೌಂದರ್ಯವನ್ನು ಇತರರ ಮುಂದೆ ಪ್ರದರ್ಶಿಸುತ್ತಾರೆ. ಎಲ್ಲರೂ ತಾವು ಹೇಳಿದಂತೆಯೇ ಕೇಳಬೇಕು ಅದರಂತೆಯೇ ನಡೆದುಕೊಳಳಬೇಕು ಎಂದು ಬಯಸುತ್ತಾರೆ. ಇದಲ್ಲದೆ, ಅವರು ತುಂಬಾ ದುರಹಂಕಾರಿಗಳಾಗಿದ್ದು, ತಾವು ಮಾಡಿದ ತಪ್ಪುಗಳನ್ನು ಕೂಡಾ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ತಮ್ಮ ಅಭಿಪ್ರಾಯಗಳಿಗೆ ಬೆಲೆ ಸಿಗುತ್ತಿಲ್ಲ ಎಂದಾದಾಗ ಹಠಮಾರಿಗಳಾಗುತ್ತಾರೆ. ಈ ರಾಶಿಯವರು ತಮ್ಮ ದುರಹಂಕಾರದಿಂದಾಗಿಯೇ ಸಂಬಂಧಗಳನ್ನು ಹಾಳುಮಾಡಿಕೊಳ್ಳುತ್ತಾರೆ.

ಸೂರ್ಯ ಸಂಕ್ರಮಣದಿಂದ ಈ ರಾಶಿಯವರಿಗೆ ಅಶುಭ ಫಲ:ವೃತ್ತಿ ಜೀವನದಲ್ಲಿ ಎದುರಾಗುವುದು ತೊಂದರೆ
ಸೂರ್ಯ ಸಂಕ್ರಮಣದಿಂದ ಈ ರಾಶಿಯವರಿಗೆ ಅಶುಭ ಫಲ:ವೃತ್ತಿ ಜೀವನದಲ್ಲಿ ಎದುರಾಗುವುದು ತೊಂದರೆ

ಕುಂಭ ರಾಶಿ:

ಕುಂಭ ರಾಶಿಯವರು ತಮ್ಮ ಪರಾಕ್ರಮಕ್ಕೆ ಹೆಸರುವಾಸಿ. ಆದರೆ ಅವರು ಬೇರೆಯವರು ಏನು ಹೇಳುತ್ತಾರೆ ಎನ್ನುವುದನ್ನು ಯಾವುದೇ ಕಾರಣಕ್ಕೂ ಕೇಳುವುದಿಲ್ಲ. ಮಾತುಕತೆ ವೇಳೆ ತಮ್ಮದೇ ಆದ ದೃಷ್ಟಿಕೋನಕ್ಕೆ ಆದ್ಯತೆ ನೀಡುತ್ತಾರೆ. ಇತರರ ವಾದಗಳನ್ನು ನಿರ್ಲಕ್ಷಿಸುತ್ತಾರೆ. ಅವರ ಬಂಡಾಯದ ಸ್ವಭಾವ ಮತ್ತು ತಾರ್ಕಿಕ ಸಾಮರ್ಥ್ಯವು ಯಾವುದೇ ಚರ್ಚೆಯಲ್ಲಿ ಪ್ರಾಬಲ್ಯ ಸಾಧಿಸಲು ಅವರಿಗೆ ಸಹಾಯ ಮಾಡುತ್ತದೆ. ತಮ್ಮ ದೃಷ್ಟಿಕೋನವನ್ನು ಅವರು ಬಲವಾಗಿ ಪ್ರತಿಪಾದಿಸುತ್ತಾರೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+