'ಒಂಟಿಯಾಗಿದ್ದರೆ ಕೆಲಸದಲ್ಲಿ ಏಕಾಗ್ರತೆ ಹೆಚ್ಚು': ಗೂಗಲ್ ಉದ್ಯೋಗಿಯ ಪೋಸ್ಟ್‌ಗೆ ನೆಟ್ಟಿಗರ ಪರ-ವಿರೋಧ ಚರ್ಚೆ

ಬೆಂಗಳೂರು: ಐಟಿ ಹಬ್‌ ಬೆಂಗಳುರಿನಲ್ಲಿರುವ ಗೂಗಲ್‌ ಉದ್ಯೋಗಿಯೊಬ್ಬರು ಒಂಟಿಯಾಗಿ ವಾಸಿಸುವುದರಿಂದ ಕೆಲಸದಲ್ಲಿ ಕಾರ್ಯಕ್ಷಮತೆ ಹೆಚ್ಚಾಗಿದೆ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ಚರ್ಚೆ ಹುಟ್ಟುಹಾಕಿದ್ದಾರೆ. ಒಂಟಿತನವು ನಿಜವಾಗಿಯೂ ಏಕಾಗ್ರತೆಯನ್ನು ಸುಧಾರಿಸುತ್ತದೆಯೇ ಎಂಬ ಬಗ್ಗೆ ಈಗ ನೆಟ್ಟಿಗರು ತಮ್ಮದೇ ಆದ ಪರ-ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಪ್ರಿಯಾನ್ಶ್ ಅಗರ್ವಾಲ್ ಎಂಬ ಟೆಕ್ಕಿ 'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಳೆದ ಒಂದು ವರ್ಷದ ಸಿಂಗಲ್ ಲೈಫ್ ಅನುಭವವನ್ನು ಹಂಚಿಕೊಂಡಿದ್ದಾರೆ. ಒಂಟಿಯಾಗಿ ವಾಸಿಸುವುದನ್ನು ಕೇವಲ ಜೀವನಶೈಲಿಯ ಆಯ್ಕೆಯಾಗಿ ಬಿಂಬಿಸುವ ಬದಲು, ಅದು ತಾವು ಕೆಲಸ ಮಾಡುವ ವಿಧಾನವನ್ನೇ ಸಂಪೂರ್ಣವಾಗಿ ಬದಲಾಯಿಸಿದೆ ಎಂದು ಅವರು ವಿವರಿಸಿದ್ದಾರೆ. ಅವರ ಪ್ರಕಾರ, ಒಬ್ಬರೇ ಇದ್ದಾಗ ಕೆಲಸದ ಮೇಲೆ ಗಮನಹರಿಸುವುದು ಅತ್ಯಂತ ಸುಲಭ. ಏಕೆಂದರೆ ಅಲ್ಲಿ ಯಾವುದೇ ಗೊಂದಲಗಳಿರುವುದಿಲ್ಲ, ಅಡಚಣೆಗಳಿರುವುದಿಲ್ಲ ಮತ್ತು ಬೇರೆಯವರ ದಿನಚರಿ ಅಥವಾ ಜೀವನಶೈಲಿಗೆ ನಾವು ಹೊಂದಿಕೊಳ್ಳುವ ಅನಿವಾರ್ಯತೆ ಇರುವುದಿಲ್ಲ.

Bengaluru

"ನಾನು ಸಂಪೂರ್ಣವಾಗಿ ಒಂಟಿಯಾಗಿದ್ದಾಗ ಹೆಚ್ಚು ಕೆಲಸ ಮಾಡುತ್ತೇನೆ ಎಂಬುದನ್ನು ನಾನು ಈಗ ಅರಿತುಕೊಂಡಿದ್ದೇನೆ. ಇತರರು ಏನು ಮಾಡುತ್ತಿದ್ದಾರೆ, ಅವರ ರೂಟೀನ್ ಏನು ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಹಾಗಾಗಿ ಗೊಂದಲಕ್ಕೊಳಗಾಗದೆ ನನ್ನ ಕೆಲಸದ ಮೇಲೆ ಪೂರ್ಣ ಪ್ರಮಾಣದ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತಿದೆ" ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದರ ಜೊತೆಗೆ ಒಂಟಿಯಾಗಿ ವಾಸಿಸುವಾಗಿನ ಆರ್ಥಿಕ ಲೆಕ್ಕಾಚಾರದ ಬಗ್ಗೆಯೂ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಬೆಂಗಳೂರಿನಂತಹ ದುಬಾರಿ ಮಹಾನಗರದಲ್ಲಿ ಬಾಡಿಗೆ (Rent) ಹೆಚ್ಚಾಗಿದ್ದರೂ, ಒಟ್ಟಾರೆ ಖರ್ಚು ಕಡಿಮೆಯಾಗಿರುವುದರಿಂದ ಆ ಹೆಚ್ಚುವರಿ ವೆಚ್ಚವು ತಮಗೆ ಹೊರೆಯಾಗಿ ಪರಿಣಮಿಸಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ಒಬ್ಬನೇ ಇರುವುದರಿಂದ ಹೆಚ್ಚಿನ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ ಎಂಬುದು ನಿಜ. ಆದರೆ ನಾನು ವಾರಾಂತ್ಯದಲ್ಲಿ ಹೆಚ್ಚಾಗಿ ಹೊರಗೆ ಹೋಗದ ಕಾರಣ, ಅಲ್ಲಿ ಉಳಿಸುವ ಹಣದಿಂದ ಈ ಬಾಡಿಗೆಯ ವೆಚ್ಚ ಸರಿದೂಗುತ್ತದೆ" ಎಂದು ಅವರು ವಿವರಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಇವರ ಈ ಪೋಸ್ಟ್ ಆನ್‌ಲೈನ್‌ನಲ್ಲಿ ಬಹಳ ಬೇಗನೆ ವೈರಲ್ ಆಗಿದ್ದು, ಅನೇಕ ಬಳಕೆದಾರರು ತಮ್ಮದೇ ಆದ ಅನುಭವಗಳನ್ನು ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪಿಜಿ ಅಥವಾ ರೂಮ್‌ ಶೇರ್‌ ಮಾಡಿಕೊಂಡವರಿಗೆ ಕೆಲಸದ ಕಡೆ ಗಮನ ಕೇಂದ್ರೀಕರಿಸಲು ಕಷ್ಟಪಡುವವರಿಗೆ, ತಮ್ಮದೇ ಆದ ಸ್ವಂತ ಸ್ಥಳಾವಕಾಶವಿರುವುದು ವೃತ್ತಿಪರ ಶಿಸ್ತು ಬೆಳೆಸಿಕೊಳ್ಳಲು ಮತ್ತು ಅನಗತ್ಯ ಅಡಚಣೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹಲವರು ಒಪ್ಪಿಕೊಂಡಿದ್ದಾರೆ.

ಅದೇ ಸಮಯದಲ್ಲಿ, ಇದು ಎಲ್ಲರಿಗೂ ಹೊಂದುವ ವಿಚಾರವಲ್ಲ ಎಂದು ಮತ್ತೆ ಕೆಲವರು ವಾದಿಸಿದ್ದಾರೆ. ಕೆಲವರಿಗೆ, ಇತರರೊಂದಿಗೆ ಇರುವುದು ಕೆಲಸ ಮಾಡಲು ಹೆಚ್ಚು ಪ್ರೇರಣೆಯನ್ನು ನೀಡುತ್ತದೆ ಮತ್ತು ಒಂಟಿತನ ಹಾಗೂ ಖಿನ್ನತೆಯನ್ನು ತಡೆಯುತ್ತದೆ. ಉತ್ಪಾದಕತೆಯು ವಾಸಿಸುವ ವ್ಯವಸ್ಥೆಗಿಂತ ವೈಯಕ್ತಿಕ ಅಭ್ಯಾಸಗಳ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಶಾಂತ ಅಥವಾ ಗದ್ದಲದ ಪರಿಸರಕ್ಕೆ ಜನರು ವಿಭಿನ್ನವಾಗಿ ಹೊಂದಿಕೊಳ್ಳುತ್ತಾರೆ ಎಂದು ಕೆಲವು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಐಟಿ ಉದ್ಯೋಗಿಯ ಈ ಪೋಸ್ಟ್ ಈಗ ನೆಟ್ಟಿಗರ ನಡುವೆ ಬಿಸಿಬಿಸಿ ಚರ್ಚೆಗೆ ವೇದಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+