ದೆಹಲಿ ಜೂಜು ಅಡ್ಡೆಯಲ್ಲಿ ಪಣಕ್ಕಿಟ್ಟಿದ್ದು 1.36 ಕೋಟಿ ರುಪಾಯಿ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ನವದೆಹಲಿ, ಅಕ್ಟೋಬರ್ 24: ಇನ್ನೇನು ದೀಪಾವಳಿ ಸಂಭ್ರಮಕ್ಕೆ ದಿನಗಣನೆ ಅರಂಭವಾಗಿದೆ. ಆ ಹಿನ್ನೆಲೆಯಲ್ಲಿ ದೆಹಲಿಯ ಫಾರ್ಮ್ ಹೌಸ್ ಒಂದರಲ್ಲಿ ನಡೆಯುತ್ತಿದ್ದ ಕಾನೂನುಬಾಹಿರ ಜೂಜು ಅಡ್ದೆ ಮೇಲೆ ದಾಳಿ ನಡೆಸಿದ ಪೊಲೀಸರು 36 ಪ್ರಭಾವಿ ವ್ಯಾಪಾರಸ್ಥರನ್ನು ವಶಕ್ಕೆ ಪಡೆದಿದ್ದಾರೆ.

ಜೂಜಿಗಾಗಿ ಇಟ್ಟಿದ್ದ 1.36 ಕೋಟಿ ರುಪಾಯಿ ನಗದು, ಹನ್ನೊಂದು ಐಷಾರಾಮಿ ವಾಹನ, 23 ಬಾಟಲ್ ವಿದೇಶೀ ಮದ್ಯ, 250 ಪ್ಯಾಕ್ ಇಸ್ಪೀಟ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ. ಇಲ್ಲಿ ಪ್ರವೇಶ ಶುಲ್ಕವೇ 5 ಲಕ್ಷ ರುಪಾಯಿ, ಒಂದು ಆಟಕ್ಕೆ ಒಂದು ಲಕ್ಷ ಇತ್ತು. ಜೂಜು ಅಡ್ಡೆಯ ಒಳಗೆ ಹಾಗೂ ಹೊರಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು.

Gambling: 36 arrested, 1.36 crore seized

ದೀಪಾವಳಿ ಅಸುಪಾಸಿನಲ್ಲಿ ಹಳ್ಳಿ ಹಾಗೂ ಪಟ್ಟಣಗಳಲ್ಲಿ ಇಸ್ಪೀಟ್ ಆಡುವುದು ರೂಢಿ. ಆದರೆ ಈ ಸ್ಥಳದಲ್ಲಿ ಇಷ್ಟು ದೊಡ್ಡ ಪ್ರಮಾಣದ ಜೂಜು ನಡೆಯುತ್ತಿದ್ದರೂ ಯಾವುದೇ ಬೌನ್ಸರ್ ಗಳನ್ನು ನೇಮಿಸಿರಲಿಲ್ಲ. ಒಂದೇ ರಾತ್ರಿಯಲ್ಲಿ ಕೋಟಿಗಟ್ಟಲೆ ಹಣ ಮಾಡುವ ಉದ್ದೇಶದಿಂದಲೇ ಅಲ್ಲಿನ ಜೂಜುಕೋರರು ಸೇರಿದ್ದರು. ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅದರೆ, ಮುಖ್ಯ ಅರೋಪಿಗಳು ತಪ್ಪಿಸಿಕೊಂಡಿದ್ದಾರೆ. ಹರೇಂದರ್ ಕೌಶಿಕ್ ಮತ್ತು ಕುನಾಲ್ ಚಂದ್ರ ಈ ಸ್ಥಳದ ಮಾಲೀಕರು ಹಾಗೂ ಜೂಜು ಅಡ್ಡೆಯ ಭಾಗೀದಾರರು. ಅವರಿಬ್ಬರನ್ನು ಬಂಧಿಸಬೇಕಿದೆ. ಎಲ್ಲರನ್ನೂ ಅಯೋಜಕರು ವಾಟ್ಸ್ ಅಪ್ ಮೂಲಕ ಸಂಪರ್ಕಿಸಿದ್ದರು. ಆ ತಂಡದ ಸದಸ್ಯರಿಗೆ ಮಾತ್ರ ಜೂಜು ನಡೆಯುವ ಜಾಗ ತಿಳಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Delhi police raid on Gambling den and seized 11 luxury vehicles, 23 bottles of liquor and chips worth Rs 1.36 crore as well as 250 packs of playing cards in South Delhi farm house.
Please Wait while comments are loading...