ಗಗನವೇ ಬಾಗುವಂತೆ ಮತ್ತೆ ಹೆಚ್ಚಾಯಿತು ಇಂಧನ ದರ

Recommended Video

      ಹೆಚ್ಚಾಗುತ್ತಲೇ ಇದೆ ಇಂಧನ ದರ | Oneindia Kannada

      ನವದೆಹಲಿ, ಅಕ್ಟೋಬರ್ 13 : ಇಂಧನ ಬೆಲೆ ಮತ್ತೆ ಗಗನಕ್ಕೇರಿದೆ, ನವದೆಹಲಿಯಲ್ಲಿ ಶನಿವಾರ ಪೆಟ್ರೋಲ್ ದರ ಲೀಟರ್‌ಗೆ 18 ಪೈಸೆ ಏರಿಕೆಯಾಗಿದ್ದು 82.66 ರೂಗೆ ತಲುಪಿದೆ. ಇನ್ನು ಡೀಸೆಲ್ ದರ ಲೀಟರ್‌ಗೆ 29 ಪೈಸೆ ಏರಿಕೆಯಾಗಿದ್ದು 75.19ರೂ ಆಗಿದೆ.

      ಕೇಂದ್ರ ಸರ್ಕಾರವು ಇಂಧನ ಮೇಲಿನ ದರ 2.50ರೂ ಕಡಿಮೆ ಮಾಡಿದ್ದರೂ ಕೂಡ ದರ ಏರಿಕೆ ಇನ್ನೂ ನಿಂತಿಲ್ಲ, ಮುಂಬೈನಲ್ಲಂತೂ ಗ್ರಾಹಕರ ಜೇಬನ್ನು ಬಿಸಿ ಮಾಡುತ್ತಿದೆ.

      ಪೆಟ್ರೋಲ್ ದರ 18 ಪೈಸೆ ಏರಿಕೆ ಕಂಡಿದ್ದು, 88.12 ರೂ ಆಗಿದೆ. ಇನ್ನು ಡೀಸೆಲ್ 31 ಪೈಸೆ ಏರಿಕೆ ಕಂಡಿದ್ದು ಒಟ್ಟು 78.82 ರೂ ಆಗಿದೆ. ಇದೇ ರೀತಿ ಇನ್ನೊಂದು ತಿಂಗಳು ಮುಂದುವರೆದರೆ ಇಂಧನ ದರ 100ರೂ ದಾಟುವುದರಲ್ಲಿ ಯಾವುದೇವ ಸಂಶಯವಿಲ್ಲ.

      Fuel price increases once again

      ಕಳೆದ ಮೂರು ತಿಂಗಳಿನಿಂದ ಷೇರು ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದಾಗಿ ಇಂಧನ ದರ ಮತ್ತಷ್ಟು ಏರಿಕೆ ಕಾಣುತ್ತಿದೆ. 2.50 ರೂಪಾಯಿ ವ್ಯಾಟ್ ಇಳಿಸಿ, ಕೇಂದ್ರದ 2.50 ಜೊತೆ ಒಟ್ಟು 5 ರೂಪಾಯಿ ಲಾಭವನ್ನು ಜನರಿಗೆ ತಲುಪುವಂತೆ ಮಾಡಿದ್ದರು ಆದರೂ ದಿನದಿಂದ ದಿನಕ್ಕೆ ಪೆಟ್ರೋಲ್ ಡೀಸೆಲ್ ಬೆಲೆ ಏರುತ್ತಲೇ ಇದೆ. ಬೆಂಗಳೂರಲ್ಲಿ ಶನಿವಾರ ಪೆಟ್ರೋಲ್ ಬೆಲೆ 83.21 ರಷ್ಟಿದ್ದು, ಡೀಸೆಲ್ 75.29ರೂಗಳಷ್ಟಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+