ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'20 ಸೈನಿಕರ ಬಲಿದಾನಕ್ಕೆ ನ್ಯಾಯ ಒದಗಿಸಿ': ಮೋದಿಗೆ ಸಿಂಗ್ ಒತ್ತಾಯ

|
Google Oneindia Kannada News

ದೆಹಲಿ, ಜೂನ್ 22: ಚೀನಾ ಮತ್ತು ಭಾರತ ಸೇನೆ ಘರ್ಷಣೆ ವೇಳೆ ಹುತಾತ್ಮರಾದ 20 ಭಾರತೀಯ ಯೋಧರ ಬಲಿದಾನಕ್ಕೆ ನ್ಯಾಯ ದೊರಕಿಸಿಕೊಡಿ ಎಂದು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಲಿ ಪ್ರಧಾನಿ ಮೋದಿಗೆ ಒತ್ತಾಯಿಸಿದ್ದಾರೆ.

Recommended Video

ಜನ ನಿಮ್ಮನ್ನು ನೋಡುತ್ತಿರುತ್ತಾರೆ ಹುಷಾರ್ | Manmohan Singh | Narendra Modi | Oneindia Kannada

''ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ದೇಶದ ಪರ ತಮ್ಮ ಪ್ರಾಣವನ್ನೇ ಅರ್ಪಿಸಿದ 20 ಭಾರತೀಯ ಸೈನಿಕರಿಗೆ ನ್ಯಾಯ ಸಿಗಬೇಕು ಮತ್ತು ಅವರ ಸಾವು ವ್ಯರ್ಥವಾಗದಂತೆ ನೋಡಿಕೊಳ್ಳಬೇಕಿದೆ'' ಎಂದು ಸಿಂಗ್ ಹೇಳಿದ್ದಾರೆ.

ಲಡಾಖ್ ಘರ್ಷಣೆ:'ಶಸ್ತ್ರಾಸ್ತ್ರ' ನಿಯಮವನ್ನು ಬದಲಿಸಿದ ಭಾರತೀಯ ಸೇನೆಲಡಾಖ್ ಘರ್ಷಣೆ:'ಶಸ್ತ್ರಾಸ್ತ್ರ' ನಿಯಮವನ್ನು ಬದಲಿಸಿದ ಭಾರತೀಯ ಸೇನೆ

ಈ ಘಟನೆ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮನಮೋಹನ್ ಸಿಂಗ್ ಸೋಮವಾರ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ''ಪ್ರಧಾನಿ ಸ್ಥಾನದಲ್ಲಿರುವವರ ದೇಶದ ರಕ್ಷಣೆಯ ಜವಾಬ್ದಾರಿ ಹೊಂದಿರುತ್ತಾರೆ. ತಾವು ಬಳಸುವ ಪದಗಳ ಪರಿಣಾಮದ ಬಗ್ಗೆ ಯೋಚಿಸಬೇಕು'' ಎಂದು ಕಿವಿ ಮಾತು ಹೇಳಿದ್ದಾರೆ.

''ಇಂದು ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ನಿಭಾಯಿಸುವ ಕಾರ್ಯ ವಿಧಾನಗಳು ಮುಂದಿನ ಪೀಳಿಗೆಗಳು ಪರಿಶೀಲಿಸುತ್ತದೆ. ಭವಿಷ್ಯದ ಸಮುದಾಯ ನಮ್ಮನ್ನು ಹೇಗೆ ಗ್ರಹಿಸುತ್ತದೆ ಎಂದು ಗಮನದಲ್ಲಿಟ್ಟುಕೊಂಡು ನಿರ್ಧಾರಗಳು ತೆಗೆದುಕೊಳ್ಳಬೇಕು. ನಮ್ಮ ಪ್ರಜಾಪ್ರಭುತ್ವದಲ್ಲಿ, ಅಂತಹ ಜವಾಬ್ದಾರಿಯನ್ನು ಪ್ರಧಾನ ಮಂತ್ರಿಯ ಕಚೇರಿ ಹೊಂದಿದೆ" ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್ಚರಿಸಿದ್ದಾರೆ.

Former Pm Manmohan Singh Released Press Statment On India And China Galwan Valley Fight

''ಏಪ್ರಿಲ್ ತಿಂಗಳಿನಿಂದ ಚೀನಾ ಭಾರತದ ಭೂಪ್ರದೇಶಗಳಾದ ಗಾಲ್ವಾನ್ ವ್ಯಾಲಿ ಮತ್ತು ಪಾಂಗೊಂಗ್ ಸರೋವರದ ಕೆಲವು ಭಾಗಗಳನ್ನು ಆಕ್ರಮಿಸುವ ಉದ್ದೇಶದಿಂದ ನಿರ್ಭಯವಾಗಿ ಮತ್ತು ಕಾನೂನುಬಾಹಿರವಾಗಿ ಪ್ರಯತ್ನಿಸುತ್ತಿದೆ. ನಾವು ಬೆದರಿಕೆಗಳಿಗೆ ಮಣಿಯಲು ಸಾಧ್ಯವಿಲ್ಲ. ನಮ್ಮ ಪ್ರಾದೇಶಿಕ ಸಮಗ್ರತೆ ಉಳಿಸಿಕೊಳ್ಳುವ ಹೋರಾಟದಲ್ಲಿ ರಾಜಿ ಮಾಡಿಕೊಳ್ಳಲು ಸಮ್ಮತಿಸುವುದಿಲ್ಲ'' ಎಂದು ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಚೀನಾ ಮತ್ತು ಭಾರತದ ಗಡಿ ವಿಚಾರ ಸರ್ಕಾರದ ನಿಲುವುಗಳು ಪಾರದರ್ಶಕವಾಗಿರಬೇಕು ಮತ್ತು ಇಡೀ ರಾಷ್ಟ್ರಕ್ಕೆ ತಿಳಿಸಬೇಕು ಎಂದು ಕಾಂಗ್ರೆಸ್ ಪದೇ ಪದೇ ಒತ್ತಾಯಿಸತ್ತಲೇ ಇದೆ.

English summary
'This is a moment where we must stand together as a nation and be united in our response to this brazen threat'- Former PM Dr Manmohan Singh released press statment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X