ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಸ್‌ಪೋರ್ಟ್‌ನಲ್ಲಿ ಬಿಜೆಪಿಯ ಕಮಲ ಚಿಹ್ನೆ ಬಳಸಿದ್ದೇಕೆ?

|
Google Oneindia Kannada News

ನವದೆಹಲಿ,ಡಿಸೆಂಬರ್ 13: ನೂತನ ಪಾಸ್‌ಪೋರ್ಟ್‌ಗಳಲ್ಲಿ ಪಾಸ್‌ಪೋರ್ಟ್‌ಗಳಲ್ಲಿ ಕಮಲ ಚಿಹ್ನೆ ಬಳಸಿರವುದಕ್ಕೆ ಕೇಂದ್ರ ಸರ್ಕಾರ ಸಮಜಾಯಿಷಿ ನೀಡಿದೆ.

ನಕಲಿ ಪಾಸ್‌ಪೋರ್ಟ್ ಜಾಲದಿಂದ ಮುಕ್ತಿ ಪಡೆಯಲು ಹಾಗೂ ಭದ್ರತಾ ದೃಷ್ಟಿಯಿಂದ ಪಾಸ್‌ಪೋರ್ಟ್ ಮೇಲೆ ಕಮಲದ ಚಿಹ್ನೆ ಬಳಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಈಗಾಗಲೇ ಬಳಸುತ್ತಿರುವ ಚಿಹ್ನೆಗಳನ್ನು ನಕಲಿ ಮಾಡುತ್ತಿರುವ ಸಂಸ್ಥೆಗಳು ದುರುಪಯೋಗಪಡಿಸಿಕೊಂಡಿವೆ. ಹೀಗಾಗಿ ಪರ್ಯಾಯ ಚಿಹ್ನೆಗಳನ್ನು ಹುಡುಕುವುದು ಕೇಂದ್ರಕ್ಕೆ ಅನಿವಾರ್ಯವಾಗಿತ್ತು.

passport

ಆರಂಭದಲ್ಲಿ ಕಮಲದ ಚಿಹ್ನೆ ಬಳಸಲಾಗುವುದು ಭವಿಷ್ಯದಲ್ಲಿ ದೇಶದಲ್ಲಿ ಪ್ರಮುಖ ಇತರೆ ಷಿಹ್ನೆಗಳನ್ನು ರೊಟೇಷನ್ಅಲ್ಲಿ ಬಳಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಕಮಲದ ಹೂವನ್ನು ಬಿಜೆಪಿಯ ಚಿಹ್ನೆಯೆಂದು ನೋಡಬೇಕಿದೆ. ಕಮಲ ರಾಷ್ಟ್ರೀಯ ಹೂವು ಕೂಡ ಆಗಿದೆ. ಹೀಗಾಗಿ ಕಮಲವನ್ನು ಬಳಸಲಾಗಿದೆ.

ಭವಿಷ್ಯದಲ್ಲಿ ಈ ರೀತಿ ರಾಷ್ಟ್ರೀಯ ಚಿಹ್ನೆಗಳಾಗಿರುವ ಇತರೆ ವಸ್ತುಗಳ ಚಿತ್ರಗಳನ್ನು ಪಾಸ್‌ಪೋರ್ಟ್‌ಲ್ಲಿ ಬಳಸಲಾಗುವುದು ಈ ಕುರಿತು ಅನಾವಶ್ಯಕ ವಿವಾದ ಸೃಷ್ಟಿಸುವುದರಲ್ಲಿ ಅರ್ಥವಿಲ್ಲ ಎಂದು ವಿದೇಶಾಂಗ ಇಲಾಖೆ ಸಚಿವಾಲಯದ ವಕ್ತಾರ ಕೆ ರವೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ವಿಚಾರವು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕೂಡ ಪ್ರಸ್ತಾಪವಾಗಿತ್ತು. ದೇಶದ ಪ್ರತಿಷ್ಠಿತ ಪಾಸ್‌ಪೋರ್ಟ್‌ನಲ್ಲಿಯೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಲಾಗಿತ್ತು. ಆದರೆ ಬಿಜೆಪಿ ಇದನ್ನು ನಿರಾಕರಿಸಿದೆ ಸ್ಪಷ್ಟನೆ ನೀಡಿದೆ.

ಕೆಲ ದಿನಗಳ ಹಿಂದೆ ಆಂಧ್ರಪ್ರದೇಶದಲ್ಲಿ ಪಡಿತರ ಚೀಟಿ ಮೇಲೆ ಏಸುವಿನ ಚಿತ್ರ ಬಳಸಿದ್ದು ವಿವಾದವಾಗಿತ್ತು. ಆದರೆ ಇದನ್ನು ಅಲ್ಲಗಳೆದಿದ್ದ ಆಧ್ರಸರ್ಕಾಋ ಸ್ಥಳೀಯ ಪಡಿತರ ಅಂಗಡಿಯ ಮಾಲೀಕರು ಮಾಡಿದ ಎಡವಟ್ಟು ಎಂದು ಹೇಳಿಕೆ ನೀಡಿತ್ತು.

English summary
Foreign Ministry Rejected Congress Claim about usage of Lotus Symbol In Passport. It is the issue of Security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X