ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೆಸ್ ಬ್ಯಾಂಕ್ ಕುರಿತು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಿಷ್ಟು

|
Google Oneindia Kannada News

ನವದೆಹಲಿ, ಮಾರ್ಚ್ 6: ಯೆಸ್ ಬ್ಯಾಂಕ್‌ನಲ್ಲಿರುವ ನಿಮ್ಮ ಹಣ ಸುರಕ್ಷಿತವಾಗಿದೆ ಗ್ರಾಹಕರ್ಯಾರೂ ಕೂಡ ಆತಂಕಗೊಳ್ಳಬೇಕಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಭಯ ನೀಡಿದ್ದಾರೆ.

ನಿಮ್ಮ ಹಣ ಸುರಕ್ಷಿತವಾಗಿರಲಿದೆ. 50 ಸಾವಿರಕ್ಕಿಂತ ಕಡಿಮೆ ಹಣವನ್ನು ನೀವು ಪಡೆದುಕೊಳ್ಳಲು ಈಗಲೇ ಸೂಚನೆ ನೀಡುತ್ತೇನೆ. ಆರ್‌ಬಿಐ ಜೊತೆ ನಿತ್ಯ ಸಂಪರ್ಕದಲ್ಲಿದ್ದೇನೆ. ನಿಮ್ಮ ಹಣ ಏನೂ ಆಗುವುದಿಲ್ಲ ಎನ್ನುವ ಭರವಸೆ ನೀಡುತ್ತೇನೆ ಎಂದು ಹೇಳಿದರು.

ಯೆಸ್‌ ಬ್ಯಾಂಕ್ ಠೇವಣಿದಾರರು 50 ಸಾವಿರಕ್ಕಿಂತ ಹೆಚ್ಚು ಹಣ ವಿತ್‌ ಡ್ರಾ ಮಾಡುವಂತಿಲ್ಲಯೆಸ್‌ ಬ್ಯಾಂಕ್ ಠೇವಣಿದಾರರು 50 ಸಾವಿರಕ್ಕಿಂತ ಹೆಚ್ಚು ಹಣ ವಿತ್‌ ಡ್ರಾ ಮಾಡುವಂತಿಲ್ಲ

ಸುಸ್ಥಿ ಸಾಲಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಯೆಸ್ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಸುಪರ್ದಿಗೆ ತೆಗೆದುಕೊಂಡು, ಬ್ಯಾಂಕ್ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಆಗಿ ಮಾಡಿದೆ. ನಗದು ಚಿತ್‌ ಡ್ರಾ ಮಿತಿಯನ್ನು 50 ಸಾವಿರಕ್ಕೆ ನಿಗದಿಗೊಳಿಸಲಾಗಿದ್ದು, ಸಾವಿರಾರು ಗ್ರಾಹಕರು ಹಣ ತೆಗೆದುಕೊಳ್ಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

Nirmala Sitharaman Assures Depositors

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಗುರುವಾರದಂದು ಯೆಸ್ ಬಾಂಕ್ ನಲ್ಲಿ ವಿಥ್ ಡ್ರಾ ಮಿತಿಯನ್ನು 50 ಸಾವಿರಕ್ಕೆ ನಿಗದಿಗೊಳಿಸಿತ್ತು. ದೇಶದ ನಾಲ್ಕನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಯೆಸ್ ಬ್ಯಾಂಕ್ ಗೆ ಹೇಗೆ ನೆರವಾಗಬಹುದು ಎಂಬ ಬಗ್ಗೆ 30 ದಿನದೊಳಗೆ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಆರ್ ಬಿಐ ಮತ್ತು ಸರ್ಕಾರವು ಯೆಸ್ ಬ್ಯಾಂಕ್ ನ ಸಮಸ್ಯೆಯನ್ನು ಕೂಲಂಕಷವಾಗಿ ಗಮನಿಸುತ್ತಿದೆ. ಎಲ್ಲರ ಹಿತಾಸಕ್ತಿಯನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡು ಮುಂದೆ ಏನು ಮಾಡಬೇಕು ಎಂದು ನಿರ್ಧರಿಸಲಾಗುತ್ತದೆ.

ಯೆಸ್ ಬ್ಯಾಂಕ್ ಸ್ಥಗಿತ, 3 ಲಕ್ಷ ಕೋಟಿ ನಷ್ಟ, ಡಿಜಿಟಲ್ ಪೇಮೆಂಟ್ ಡೌನ್ಯೆಸ್ ಬ್ಯಾಂಕ್ ಸ್ಥಗಿತ, 3 ಲಕ್ಷ ಕೋಟಿ ನಷ್ಟ, ಡಿಜಿಟಲ್ ಪೇಮೆಂಟ್ ಡೌನ್

ಸದ್ಯಕ್ಕೆ ಯೆಸ್ ಬ್ಯಾಂಕ್ ಗ್ರಾಹಕರು 50 ಸಾವಿರ ರುಪಾಯಿಯೊಳಗಿನ ಮೊತ್ತವನ್ನು ವಿಥ್ ಡ್ರಾ ಮಾಡಲು ಸಾಧ್ಯವಾಗುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸುವುದು ಆದ್ಯತೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್‌ ಬ್ಯಾಂಕ್ ಆಡಳಿತ ಮಂಡಳಿಯನ್ನು ವಜಾಗೊಳಿಸಿರುವ ಆರ್‌ಬಿಐ, ವಿತ್‌ಡ್ರಾ ಮಿತಿಯನ್ನು ತಕ್ಷಣವೇ ಜಾರಿಗೆ ಬರುವಂತೆ 50 ಸಾವಿರ ರುಪಾಯಿಗೆ ನಿಗದಿ ಮಾಡುವ ಮೂಲಕ ಬ್ಯಾಂಕ್ ಗ್ರಾಹಕರಿಗೆ ಆಘಾತ ನೀಡಿದೆ. ಈ ಮೂಲಕ ಗ್ರಾಹಕರು ಕೇವಲ 50 ಸಾವಿರ ಮಾತ್ರ ವಿತ್‌ಡ್ರಾ ಮಾಡಿಕೊಳ್ಳಬಹುದು.

English summary
People's money with Yes Bank is safe, Finance Minister Nirmala Sitharaman has said after the central bank on Thursday night took control of India’s fourth-largest private lender, while a rescue plan is devised within 30 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X