• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಮತ್ತೆ ಲಾಕ್‌ಡೌನ್‌ ಮಾಡಲ್ಲ': 'ಕೊರೊನಾ' ಹಾಟ್‌ಸ್ಪಾಟ್‌ ರಾಜ್ಯಗಳೇ ಹಿಂದೇಟು

|

ದೆಹಲಿ, ಜೂನ್ 15: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮತ್ತೊಂದು ಸುತ್ತಿನ ಲಾಕ್‌ಡೌನ್‌ ಮಾಡಲಾಗುತ್ತೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸುದ್ದಿಯಾಗುತ್ತಿದೆ. ಲಾಕ್‌ಡೌನ್‌ ವಿನಾಯಿತಿ ನೀಡಿದ ಬಳಿಕ ದೇಶದಲ್ಲಿ ಸೋಂಕು ಹೆಚ್ಚು ಹರಡಿದೆ. ಈಗಲೂ ಕಠಿಣ ಲಾಕ್‌ಡೌನ್‌ ಮಾಡದೇ ಹೋದರೆ ಮತ್ತಷ್ಟು ಕೇಸ್ ಅಧಿಕವಾಗಬಹುದು ಎಂಬ ಆತಂಕದ ಚರ್ಚೆಯಾಗ್ತಿದೆ.

   Eating Garlic During Pregnancy – Benefits, Risks | Oneindia Kannada

   ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಜೂನ್ 16 ಅಥವಾ 17 ರಂದು ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಈ ದಿನಾಂಕ ಘೋಷಣೆಯಾಗುತ್ತಿದ್ದಂತೆ ದೇಶದಲ್ಲಿ ಮತ್ತೊಂದು ಸುತ್ತಿನ ಲಾಕ್‌ಡೌನ್‌ ಮಾಡುವುದು ಖಚಿತ. ಹಾಗಾಗಿ, ಪ್ರಧಾನಿ ಸಹ ಒಲವು ತೋರುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

   ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಯಾಗುತ್ತಾ?

   ಆದರೆ, ಕೊರೊನಾ ಸೋಂಕಿತರನ್ನು ಹೆಚ್ಚು ಹೊಂದಿರುವ ರಾಜ್ಯಗಳೇ 'ನಾವು ಮತ್ತೆ ಲಾಕ್‌ಡೌನ್‌ ಮಾಡಲ್ಲ' ಎನ್ನುತ್ತಿದ್ದಾರೆ. ದೇಶದ ಕೊರೊನಾ ಹಾಟ್‌ಸ್ಪಾಟ್‌ ರಾಜ್ಯಗಳೇ ಲಾಕ್‌ಡೌನ್‌ಗೆ ವಿರೋಧ ವ್ಯಕ್ತಪಡಿಸಿವೆ. ಅಷ್ಟಕ್ಕೂ, ಲಾಕ್‌ಡೌನ್‌ ಬೇಡ ಎನ್ನುತ್ತಿರುವ ಆ ಐದು ರಾಜ್ಯಗಳು ಯಾವುದು? ಮುಂದೆ ಓದಿ....

   ಲಾಕ್‌ಡೌನ್‌ಗೆ ಮಹಾರಾಷ್ಟ್ರ ಸಿದ್ಧವಿಲ್ಲ

   ಲಾಕ್‌ಡೌನ್‌ಗೆ ಮಹಾರಾಷ್ಟ್ರ ಸಿದ್ಧವಿಲ್ಲ

   ದೇಶದ ಕೊರೊನಾ ಹಾಟ್‌ಸ್ಪಾಟ್‌ ಮಹಾರಾಷ್ಟ್ರ ಸರ್ಕಾರ ಲಾಕ್‌ಡೌನ್‌ ಮಾಡುವ ಚಿಂತನೆ ಮಾಡಿಲ್ಲ. ಸಿಎಂ ಉದ್ಧವ್ ಠಾಕ್ರೆ ಈಗಾಗಲೇ ಅಧಿಕೃತವಾಗಿ ಈ ಕುರಿತು ಹೇಳಿದ್ದಾರೆ. ''ಜನರು ಆತಂಕಕ್ಕೆ ಒಳಗಾಗಬೇಡಿ. ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಆಗಲ್ಲ. ನಾವು ಎಲ್ಲ ರೀತಿ ಸಿದ್ಧತೆ ಮಾಡಿಕೊಂಡಿದ್ದೇವೆ. ಕೊರೊನಾ ಎದುರಿಸಲು ನಾವು ಸಜ್ಜಾಗಿದ್ದೇವೆ'' ಎಂದು ತಿಳಿಸಿದ್ದರು. ಮಹಾರಾಷ್ಟ್ರದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಕೇಸ್ ವರದಿಯಾಗಿದೆ. ಪ್ರತಿದಿನ 3 ರಿಂದ 4 ಸಾವಿರವರೆಗೂ ಹೊಸ ಕೇಸ್ ದಾಖಲಾಗುತ್ತಿದೆ. ಇಂತಹ ಮಹಾರಾಷ್ಟ್ರ ಸಹ ಲಾಕ್‌ಡೌನ್‌ ಆಲೋಚನೆಯಿಂದ ದೂರವಿದೆ.

   ದೆಹಲಿಯಲ್ಲಿ ಲಾಕ್‌ಡೌನ್‌ ಯೋಚನೆ ಇಲ್ಲ

   ದೆಹಲಿಯಲ್ಲಿ ಲಾಕ್‌ಡೌನ್‌ ಯೋಚನೆ ಇಲ್ಲ

   ಮತ್ತೊಮ್ಮೆ ಲಾಕ್‌ಡೌನ್‌ ಮಾಡುವ ಕುರಿತು ಗಂಭೀರ ಚರ್ಚೆಯಾಗುತ್ತಿರುವ ಸಮಯದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ 'ನಾವು ಲಾಕ್‌ಡೌನ್‌ ಮಾಡಲ್ಲ' ಸ್ಪಷ್ಟವಾಗಿ ಹೇಳಿದ್ದಾರೆ. ಈವರೆಗೂ ಎರಡು ಸಲ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ 'ಲಾಕ್‌ಡೌನ್ ಮಾಡಲ್ಲ' ಎಂದಿದ್ದಾರೆ. ದೆಹಲಿಯಲ್ಲಿ 41 ಸಾವಿರಕ್ಕೂ ಅಧಿಕ ಸೋಂಕು ವರದಿಯಾಗಿದೆ. ಪ್ರತಿದಿನವೂ 1000ಕ್ಕಿಂತೂ ಹೆಚ್ಚು ಕೇಸ್ ವರದಿಯಾಗುತ್ತಿದೆ. ಆದರೂ ಲಾಕ್‌ಡೌನ್‌ ಮಾಡಲ್ಲ ಎಂದು ರಾಜ್ಯ ಸರ್ಕಾರ ನಿರ್ಧರಿಸಿದೆ.

   ತಮಿಳುನಾಡು ಸರ್ಕಾರವೂ ಲಾಕ್‌ಡೌನ್ ಮಾಡಲ್ಲ

   ತಮಿಳುನಾಡು ಸರ್ಕಾರವೂ ಲಾಕ್‌ಡೌನ್ ಮಾಡಲ್ಲ

   ಮಹಾರಾಷ್ಟ್ರ, ದೆಹಲಿ ಬಿಟ್ಟರೆ ಅತಿ ಹೆಚ್ಚು ಸೋಂಕು ಹೊಂದಿರು ರಾಜ್ಯ ತಮಿಳುನಾಡು. ಅಂತಹ ತಮಿಳುನಾಡು ಸಹ ಲಾಕ್‌ಡೌನ್‌ ಯೋಜನೆಯಿಂದ ಹಿಂದೆ ಸರಿದಿದೆ. ದಿನದಿಂದ ದಿನಕ್ಕೆ ತಮಿಳುನಾಡಿನಲ್ಲಿ 2 ಸಾವಿರವರೆಗೂ ಕೊರೊನಾ ಕೇಸ್ ವರದಿಯಾಗುತ್ತಿದೆ. ಒಟ್ಟು 44 ಸಾವಿರ ಕೇಸ್ ಹೊಂದಿದೆ. ಆದರೂ ಲಾಕ್‌ಡೌನ್‌ ಮಾಡಲ್ಲ ಎಂದು ಸ್ಪಷ್ಟಪಡಿಸಿದೆ. ತಮಿಳುನಾಡಿನಲ್ಲಿ ಸದ್ಯಕ್ಕೆ ಚೆನ್ನೈ ಮತ್ತು ಇತರೆ ಮೂರು ಜಿಲ್ಲೆಗಳಲ್ಲಿ ನಿರ್ಬಂಧಿತ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ.

   ಗುಜರಾತ್‌ನಲ್ಲೂ ಲಾಕ್‌ಡೌನ್ ಇಲ್ಲ

   ಗುಜರಾತ್‌ನಲ್ಲೂ ಲಾಕ್‌ಡೌನ್ ಇಲ್ಲ

   ದೇಶದಲ್ಲಿ ಅತಿ ಹೆಚ್ಚು ಸೋಂಕು ಹೊಂದಿರುವ ನಾಲ್ಕನೇ ರಾಜ್ಯ ಗುಜರಾತ್. ಈ ರಾಜ್ಯದಲ್ಲೂ ಲಾಕ್‌ಡೌನ್‌ ಆಗಲ್ಲ ಎಂದು ಸ್ವತಃ ಸಿಎಂ ವಿಜಯ್ ರೂಪಾನಿ ಮಾಹಿತಿ ನೀಡಿದ್ದಾರೆ. ಗುಜರಾತ್‌ನಲ್ಲಿ 23 ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಮಹಾರಾಷ್ಟ್ರ, ದೆಹಲಿ, ತಮಿಳುನಾಡು ನಂತರ ಗುಜರಾತ್‌ ಡೇಂಜರ್‌ ಜೋನ್‌ನಲ್ಲಿದೆ.

   ಕರ್ನಾಟಕದಲ್ಲೂ ಲಾಕ್‌ಡೌನ್‌ ಇಲ್ಲ

   ಕರ್ನಾಟಕದಲ್ಲೂ ಲಾಕ್‌ಡೌನ್‌ ಇಲ್ಲ

   ದೇಶದ ಟಾಪ್ ನಾಲ್ಕು ಕೊರೊನಾ ಹಾಟ್‌ಸ್ಪಾಟ್‌ ರಾಜ್ಯಗಳ ಜೊತೆ ಕರ್ನಾಟಕ ಸರ್ಕಾರವೂ ಲಾಕ್‌ಡೌನ್ ಮಾಡುವ ಕುರಿತು ಹಿಂದೇಟು ಹಾಕಿದಂತಿದೆ. ರಾಜ್ಯದಲ್ಲೂ ಈ ಹಿಂದಿಗಿಂತ ಹೆಚ್ಚು ಸೋಂಕು ವರದಿಯಾಗುತ್ತಿದೆ. ಲಾಕ್‌ಡೌನ್ ಅಗತ್ಯ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಉಳಿದ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿದೆ. ಆದರೂ, ಲಾಕ್‌ಡೌನ್‌ ಮಾಡುವ ಯೋಜನೆ ಇಲ್ಲ ಎಂದು ವೈದ್ಯಕೀಯ ಸಚಿವ ಡಾ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

   ಪ್ರಮುಖ ರಾಜ್ಯಗಳೇ ಬೇಡ ಅಂದ್ಮೇಲೆ....

   ಪ್ರಮುಖ ರಾಜ್ಯಗಳೇ ಬೇಡ ಅಂದ್ಮೇಲೆ....

   ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್ ಹಾಗೂ ಕರ್ನಾಟಕ ಸರ್ಕಾರವೇ ಲಾಕ್‌ಡೌನ್‌ ಬೇಡ ಎನ್ನುತ್ತಿದೆ. ಅಂದ್ಮೇಲೆ ಉಳಿದ ರಾಜ್ಯಗಳ ಅಭಿಪ್ರಾಯಕ್ಕೆ ಕೇಂದ್ರ ಮನ್ನಣೆ ನೀಡುವುದೇ?. ಒಂದು ವೇಳೆ ಕೇಂದ್ರ ಸರ್ಕಾರವೂ ಲಾಕ್‌ಡೌನ್‌ ಕುರಿತು ಆಸಕ್ತಿ ಹೊಂದಿದ್ದರೂ ಈ ರಾಜ್ಯಗಳಿಂದ ಹೇಗೆ ಒಮ್ಮತದ ನಿರ್ಧಾರ ಪಡೆಯಲಿದೆ? ಬಹುಶಃ ಇದಕ್ಕೆಲ್ಲಾ ಪ್ರಧಾನಿ ಜೊತೆಗಿನ ಸಭೆ ಬಳಿಕ ಸ್ಪಷ್ಟತೆ ಸಿಗಲಿದೆ.

   English summary
   Maharashtra, Tamil Nadu, delhi, karnataka and gujarat state government has said ''we are not planning to do lockdown again.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X