RCB Vs DC IPL 2026: ಮಿಲ್ಲರ್‌ 'ಕಿಲ್ಲರ್' ಆಟಕ್ಕೆ ಮಣಿದ ಆರ್‌ಸಿಬಿ

RCB Vs DC IPL 2026: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಶನಿವಾರ (ಏಪ್ರಿಲ್‌ 18) ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಸ್ಟಬ್ಸ್‌, ಕನ್ನಡಿಗ ಕೆಎಲ್‌ ರಾಹುಲ್‌ ಸಹ ಈ ಗೆಲುವಿಗೆ ಪ್ರಮುಖ ಕಾರಣಕರ್ತರಾಗಿದ್ದಾರೆ.

ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 175 ರನ್‌ ಕಲೆಹಾಕಿತು. ಆರ್‌ಸಿಬಿ ನೀಡಿದ 176 ರನ್‌ಗಳ ಗುರಿಯನ್ನು ಡೆಲ್ಲಿ 19.5 ಓವರ್‌ಗಳಿಗೆ ಮುಟ್ಟಿ ಜಯ ಸಾಧಿಸಿತು.

David Miller Powers Delhi Capitals to 6-Wicket Win Over RCB in Thrilling IPL 2026 Clash at Bengaluru

ಆರ್‌ಸಿಬಿ ಪಾಲಿಗೆ ಕಿಲ್ಲರ್ ಆದ ಮಿಲ್ಲರ್

ಪಂದ್ಯದ ಅಂತಿಮ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಗೆಲುವಿಗೆ 15 ರನ್‌ಗಳ ಅಗತ್ಯವಿತ್ತು. ಈ ವೇಳೆ ರೊಮಾರಿಯೋ ಶೆಫರ್ಡ್ ಎಸೆದ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಸತತ ಎರಡು ಭರ್ಜರಿ ಸಿಕ್ಸರ್, ಒಂದು ಬೌಂಡರಿ ಸಿಡಿಸಿ ಇನ್ನು ಒಂದು ಎಸೆತ ಬಾಕಿ ಇರುವಂತೆಯೇ ತಂಡಕ್ಕೆ ಜಯ ತಂದುಕೊಟ್ಟರು.

ಮಿಂಚಿದ ರಾಹುಲ್, ಸ್ಟಬ್ಸ್‌, ಮಿಲ್ಲರ್

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನೀಡಿದ 176 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್.ರಾಹುಲ್ 6 ಬೌಂಡರಿ, 2 ಸಿಕ್ಸರ್‌ಗಳ ಸಹಿತ 57 ರನ್‌ಗಳನ್ನು ಕಲೆಹಾಕಿ ಉತ್ತಮ ಆರಂಭ ನೀಡಿದರು. ಟ್ರಿಸ್ಟಾನ್ ಸ್ಟಬ್ಸ್ ಕೊನೆವರೆಗೂ ಜವಾಬ್ದಾರಿಯುತ ಆಟ ಆಡಿ ಅಜೇಯ 60 ರನ್‌ ಸಿಡಿಸಿ ಜಯದ ಹಾದಿ ಸುಗಮಗೊಳಿಸಿದರು. ಮಿಲ್ಲರ್ ಎರಡು ಭರ್ಜರಿ ಸಿಕ್ಸರ್, ಒಂದು ಬೌಂಡರಿ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅವರು, 10 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಿಡಿಸಿ 22 ರನ್‌ ಕಲೆಹಾಕಿ ಅಜೇಯರಾಗಿ ಉಳಿದರು.

ಆರ್‌ಸಿಬಿ ಪರ ಮಾರಕ ಬೌಲಿಂಗ್ ದಾಳಿ ಮಾಡಿದ ಭುವಿ

ಆರ್‌ಸಿಬಿ ಪರ ವೇಗಿ ಭುವನೇಶ್ವರ್ ಕುಮಾರ್ ಅದ್ಭುತವಾಗಿ ಬೌಲಿಂಗ್ ಪ್ರದರ್ಶನ ಮಾಡಿ 4 ಓವರ್‌ಗಳಲ್ಲಿ ಕೇವಲ 26 ರನ್ ನೀಡಿ 3 ವಿಕೆಟ್ ಪಡೆದರು. ಇನ್ನೂ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ, ಆರಂಭಿಕ ಆಟಗಾರ ಫಿಲ್ ಸಾಲ್ಟ್ (63) ಅವರ ಅರ್ಧಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತ್ತು.

ಆರ್‌ಸಿಬಿ ರನ್‌ ವೇಗಕ್ಕೆ ಕಡಿವಾಣ ಹಾಕಿದ ಡಿಸಿ ಬೌಲರ್ಸ್‌

ಡೆಲ್ಲಿ ಕ್ಯಾಪಿಟಲ್ಸ್‌ ಬೌಲರ್‌ಗಳಾದ ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮತ್ತು ಲುಂಗಿ ಎನ್ಗಿಡಿ ತಲಾ 2 ವಿಕೆಟ್ ಪಡೆದು ಆರ್‌ಸಿಬಿಯನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ್ದರು. ಇದರಿಂದ ಬ್ಯಾಟಿಂಗ್ ಪಡೆ ಮೇಲಿನ ಒತ್ತಡ ತಗ್ಗಿದಂತಾಯಿತು. ಡೆಲ್ಲಿ ಪರ ಕೆಎಲ್‌ ರಾಹುಲ್‌ ಉತ್ತಮ ಆರಂಭ ನೀಡಿದರೆ, ಸ್ಟಬ್ಸ್‌ ಕೊನೆಯವರೆಗೆ ಜವಾಬ್ದಾರಿಯುತ ಆಟ ಆಡಿದರು. ಕೊನೆಗೆ ಮಿಲ್ಲರ್ ಅವರೇ ತಮ್ಮ ಸ್ಫೋಟಕ ಇನ್ನಿಂಗ್ಸ್‌ ಆಡಿ ಮ್ಯಾಚ್‌ ವಿನ್ನರ್ ಆದರು. ಈ ಮೂಲಕ ಚೇಸಿಂಗ್ ಕಿಂಗ್ಸ್ ಎನಿಸಿಕೊಂಡಿದ್ದ ಆರ್‌ಸಿಬಿಗೆ ಇಂದು ತವರು ಮೈದಾನದಲ್ಲೇ ನಿರಾಸೆಯಾಗಿದ್ದು, ಮಿಲ್ಲರ್ ಅವರ ಕಿಲ್ಲರ್ ಆಟ ಡೆಲ್ಲಿಗೆ ಸಂಭ್ರಮ ತಂದಿದೆ.

ಬ್ಯಾಟಿಂಗ್‌ನಲ್ಲಿ ಎಡವಿದ ಆರ್‌ಸಿಬಿ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ಫಿಲ್ ಸಾಲ್ಟ್ (63 ರನ್, 38 ಎಸೆತ) ಹೊರತುಪಡಿಸಿ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ವಿರಾಟ್ ಕೊಹ್ಲಿ 19, ರಜತ್ ಪಾಟಿದಾರ್ 8, ದೇವದತ್ ಪಡಿಕ್ಕಲ್‌ 18, ಟಿಮ್ ಡೇವಿಡ್‌ 26, ಜಿತೇಶ್ ಶರ್ಮಾ 14, ಕೃನಾಲ್ ಪಾಂಡ್ಯ 12 ರನ್‌ ಗಳಿಸಿದರು. ಪರಿಣಾಮ ಆರ್‌ಸಿಬಿ 8 ವಿಕೆಟ್ ಕಳೆದುಕೊಂಡು 175 ರನ್ ಗಳಿಸಲಷ್ಟೇ ಶಕ್ತವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+