Women's Reservation Bill: ಮಹಿಳಾ ಪ್ರಾತಿನಿಧ್ಯಕ್ಕೆ ಮತ್ತೆ ಬ್ರೇಕ್: ವ್ಯವಸ್ಥಿತವಾಗಿ ನಡಿತಿದೆಯೇ ಹತ್ತಿಕ್ಕುವ ಪ್ರಯತ್ನ?

ಇದು ಒಂದು ಐತಿಹಾಸಿಕ ರಾತ್ರಿಯಾಗಬೇಕಿತ್ತು. ತಲೆಮಾರುಗಳಿಂದ ಕಾಯುತ್ತಿದ್ದ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಭಾರತವು ನಿರ್ಣಾಯಕ ಹೆಜ್ಜೆ ಇಡುವ ರಾತ್ರಿ ಇದಾಗಬೇಕಿತ್ತು. ಆದರೆ, ಮಹಿಳೆಯರ ಏಳಿಗೆಯನ್ನು ಯಾರು ನಿಜವಾಗಿಯೂ ಬಯಸುತ್ತಾರೆ ಮತ್ತು ಅಧಿಕಾರ ಹಂಚಿಕೊಳ್ಳುವ ಸಮಯ ಬಂದಾಗ ಯಾರು ಹಿಂದೇಟು ಹಾಕುತ್ತಾರೆ ಎಂಬುದನ್ನು ಬಯಲು ಮಾಡಿದ ರಾತ್ರಿಯಾಗಿ ಇದು ಬದಲಾಯಿತು.

ಏಪ್ರಿಲ್ 17 ರಂದು, ಲೋಕಸಭೆಯಲ್ಲಿ ಸಂವಿಧಾನದ (131 ನೇ ತಿದ್ದುಪಡಿ) ಮಸೂದೆ, ಡಿಲಿಮಿಟೇಶನ್ ಮಸೂದೆ 2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆ 2026 ರ ಕುರಿತು ತಡರಾತ್ರಿಯವರೆಗೂ ಚರ್ಚೆ ನಡೆಯಿತು. ಈ ಪ್ರಸ್ತಾವನೆಯ ವಿನ್ಯಾಸ ಮತ್ತು ಉದ್ದೇಶ ಸ್ಪಷ್ಟವಾಗಿತ್ತು. ಲೋಕಸಭೆಯ ಸ್ಥಾನಗಳನ್ನು 543 ರಿಂದ 815 ಕ್ಕೆ ವಿಸ್ತರಿಸುವುದು, 2011 ರ ಜನಗಣತಿ ಆಧಾರದ ಮೇಲೆ ಕ್ಷೇತ್ರಗಳನ್ನು ಮರುವಿಂಗಡಿಸುವುದು ಮತ್ತು ಹಾಲಿ ಸಂಸದರನ್ನು ತೆಗೆದುಹಾಕದೆ 2029 ರಿಂದ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿಯನ್ನು ಜಾರಿಗೆ ತರುವುದು ಇದರ ಪ್ರಮುಖ ಉದ್ದೇಶವಾಗಿತ್ತು.

Women s Reservation Bill

ದಶಕಗಳಿಂದ ಹೇಳಿಕೊಂಡು ಬರುತ್ತಿದ್ದ ಪ್ರತಿಯೊಂದು ನೆಪಗಳಿಗೂ ಇದೊಂದು ಸೂಕ್ತ ಪರಿಹಾರವಾಗಿತ್ತು. ಇದರ ತರ್ಕವು ಸರಳ ಹಾಗೂ ರಾಜಕೀಯವಾಗಿ ಸೂಕ್ಷ್ಮವಾಗಿತ್ತು. ಹೆಚ್ಚು ಸ್ಥಾನಗಳೆಂದರೆ ಹೆಚ್ಚು ಒಳಗೊಳ್ಳುವಿಕೆ ಎಂದರ್ಥ. ಅಸ್ತಿತ್ವದಲ್ಲಿರುವ ಪ್ರತಿನಿಧಿಗಳನ್ನು ಸ್ಥಾನಪಲ್ಲಟಗೊಳಿಸದೆ ಮಹಿಳೆಯರು ಸಂಸತ್ತನ್ನು ಪ್ರವೇಶಿಸುವುದನ್ನು ಇದು ಖಚಿತಪಡಿಸುತ್ತಿತ್ತು. ಆದರೂ, ಮತದಾನ ಮುಕ್ತಾಯಗೊಂಡಾಗ ಅದರ ಫಲಿತಾಂಶವು ನೈಜ ಸ್ಥಿತಿಯನ್ನು ಅನಾವರಣಗೊಳಿಸಿತು. ಮಸೂದೆಯ ಪರವಾಗಿ 298 ಸದಸ್ಯರು ಮತ ಚಲಾಯಿಸಿದರೆ, 230 ಸದಸ್ಯರು ವಿರುದ್ಧವಾಗಿ ಮತ ಹಾಕಿದರು. ಮಸೂದೆಯು ಸರಳ ಬಹುಮತವನ್ನು ಗಳಿಸಿತು, ಆದರೆ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತವನ್ನು ಪಡೆಯುವಲ್ಲಿ ವಿಫಲವಾಯಿತು. 528 ಸದಸ್ಯರು ಹಾಜರಿದ್ದರೆ ಸುಮಾರು 352 ಮತಗಳ ಅಗತ್ಯವಿತ್ತು. ಇದರೊಂದಿಗೆ ತಿದ್ದುಪಡಿಯು ವಿಫಲವಾಯಿತು. ಸರ್ಕಾರವು ಈ ಮಸೂದೆಗೆ ಸಂಬಂಧಿಸಿದ ಇತರ ಎರಡು ಮಸೂದೆಗಳನ್ನು ಹಿಂಪಡೆಯಿತು. ಒಂದು ಮೈಲಿಗಲ್ಲಾಗಬೇಕಿದ್ದ ಘಟನೆಯು ಮತ್ತೊಂದು ವಿಳಂಬವಾಗಿ ಮಾರ್ಪಟ್ಟಿತು.

ಕೇಂದ್ರ ಸರ್ಕಾರಕ್ಕೆ ಬಿಗ್ ಶಾಕ್: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳು ವಿಫಲ
ಕೇಂದ್ರ ಸರ್ಕಾರಕ್ಕೆ ಬಿಗ್ ಶಾಕ್: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳು ವಿಫಲ

ಇದು ಕೇವಲ ಪ್ರತ್ಯೇಕವಾದ ಘಟನೆಯಲ್ಲ; ಬದಲಾಗಿ ದೀರ್ಘಕಾಲದ ಮತ್ತು ಅಹಿತಕರವಾದ ಪರಂಪರೆಯ ಒಂದು ಭಾಗವಾಗಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಮೊದಲು 1996 ರಲ್ಲಿ ಎಚ್.ಡಿ. ದೇವೇಗೌಡರ ಸರ್ಕಾರದ ಅವಧಿಯಲ್ಲಿ ಮಂಡಿಸಲಾಗಿತ್ತು. ಅದನ್ನು ಸಂಸದೀಯ ಸಮಿತಿಗೆ ಕಳುಹಿಸಲಾಯಿತು. ವರದಿ ಬಂತು, ಸರ್ಕಾರ ಬಿತ್ತು, ಮಸೂದೆಯೂ ಮೂಲೆಗುಂಪಾಯಿತು. ಮುಂದಿನ ಹದಿನೆಂಟು ವರ್ಷಗಳ ಕಾಲ ಕಾಂಗ್ರೆಸ್ ಮತ್ತು ಅದರ ವ್ಯವಸ್ಥೆಯು ಇದೇ ವಿಳಂಬದ ಮಾದರಿಯನ್ನು ಅನುಸರಿಸಿಕೊಂಡು ಬಂತು. 1998 ರಿಂದ 2003 ರ ನಡುವೆ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಮಸೂದೆಯನ್ನು ಅಂಗೀಕರಿಸಲು ನಾಲ್ಕು ಗಂಭೀರ ಪ್ರಯತ್ನಗಳನ್ನು ಮಾಡಿತು. ಪ್ರತಿ ಬಾರಿಯೂ ವಿರೋಧ ಬಂದಿದ್ದು ಬಿಜೆಪಿಯಿಂದಲ್ಲ, ಬದಲಾಗಿ ಇಂದು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಪಕ್ಷಗಳಿಂದ.

1998 ರಲ್ಲಿ, ಆರ್‌ಜೆಡಿ ಸಂಸದ ಸುರೇಂದ್ರ ಪ್ರಕಾಶ್ ಯಾದವ್ ಅವರು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಪ್ರತಿಯನ್ನು ಕಸಿದುಕೊಂಡು ಹರಿದು ಹಾಕಿದಾಗ ಪರಿಸ್ಥಿತಿ ತೀರಾ ಕೆಳಮಟ್ಟಕ್ಕೆ ತಲುಪಿತ್ತು. ಇದು ಪ್ರಜಾಸತ್ತಾತ್ಮಕ ವಿರೋಧವಾಗಿರಲಿಲ್ಲ, ಬದಲಾಗಿ ಮಹಿಳಾ ಪ್ರಾತಿನಿಧ್ಯದ ಮೇಲಿನ ನೇರವಾದ ತಿರಸ್ಕಾರವಾಗಿತ್ತು. ಆನಂತರ 2004 ರಿಂದ 2014 ರವರೆಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂತು. 2010 ರಲ್ಲಿ, ಬದ್ಧತೆಯ ಸಂಭ್ರಮಾಚರಣೆಯ ನಡುವೆ ರಾಜ್ಯಸಭೆಯು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿತು. ಆದರೆ ಆ ಮಸೂದೆಯನ್ನು ಲೋಕಸಭೆಯಲ್ಲಿ ಒಮ್ಮೆಯೂ ಮಂಡಿಸಲಿಲ್ಲ. ಸಂಖ್ಯಾಬಲವಿತ್ತು, ಅವಕಾಶವೂ ಇತ್ತು, ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿತ್ತು.

ಏಪ್ರಿಲ್ 17 ರಂದು ನಡೆದ ಘಟನೆಗಳು ಈ ಹಳೆಯ ಮಾದರಿಯನ್ನೇ ಪುನರುಚ್ಚರಿಸುತ್ತವೆ. ವರ್ಷಗಳ ಕಾಲ ಮಸೂದೆಯನ್ನು ತಡೆಹಿಡಿದಿದ್ದ ಆಕ್ಷೇಪಣೆಗಳಿಗೇ ಸರ್ಕಾರದ ಪ್ರಸ್ತಾವನೆ ಪರಿಹಾರ ಒದಗಿಸಿತ್ತು. ಆದಾಗ್ಯೂ, ಕ್ಷೇತ್ರ ಮರುವಿಂಗಡಣೆಯ ಕಳವಳಗಳು ಮತ್ತು ಪ್ರಾದೇಶಿಕ ಸಮತೋಲನದ ವಾದಗಳ ರೂಪದಲ್ಲಿ ಮತ್ತೊಮ್ಮೆ ವಿರೋಧ ವ್ಯಕ್ತವಾಯಿತು. ರಾಷ್ಟ್ರೀಯ ವಿಚಾರವಾಗಿದ್ದ ಈ ವಿಷಯವನ್ನು ಉತ್ತರ ಮತ್ತು ದಕ್ಷಿಣದ ನಡುವಿನ ಚರ್ಚೆಯಾಗಿ ಮಾರ್ಪಡಿಸುವ ಮೂಲಕ ಪ್ರಾದೇಶಿಕ ಸ್ಪರ್ಧೆಯನ್ನಾಗಿ ಮಾಡಲಾಯಿತು. ಇದು ಕೇವಲ ಮಸೂದೆಯೊಂದರ ವೈಫಲ್ಯವಲ್ಲ; ಬದಲಾಗಿ ಸಬಲೀಕರಣವನ್ನು ಒಪ್ಪಿಕೊಂಡರೂ, ಅಧಿಕಾರವನ್ನು ಹಂಚಿಕೊಳ್ಳಲು ಸಿದ್ಧರಿಲ್ಲದ ರಾಜಕೀಯ ಮನಸ್ಥಿತಿಯ ಮುಂದುವರಿಕೆಯಾಗಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಶೇ. 2ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಪುಟ ಅಸ್ತು
ಕೇಂದ್ರ ಸರ್ಕಾರಿ ನೌಕರರಿಗೆ ಶೇ. 2ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಪುಟ ಅಸ್ತು

ನಿಮ್ಮ ಅಜ್ಜಿ ಇದಕ್ಕಾಗಿ ಕಾದಿದ್ದರು. ನಿಮ್ಮ ತಾಯಿ ಇದಕ್ಕಾಗಿ ಭರವಸೆ ಇಟ್ಟುಕೊಂಡಿದ್ದರು. ನಿಮ್ಮ ಹೆಣ್ಣುಮಕ್ಕಳು ಇಂದಿಗೂ ಕಾಯುತ್ತಿದ್ದಾರೆ. ಆದರೂ, ಇದು ಕಥೆಯ ಅಂತ್ಯವಲ್ಲ. ಭಾರತದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಲ್ಲಿ ಮಹಿಳೆಯರಿಗೆ ಅವರ ಹಕ್ಕಿನ ಸ್ಥಾನವನ್ನು ನೀಡುವ ಸಮಯ ಬಂದಾಗ, ಒಂದು ವರ್ಗ ಮುಂದಕ್ಕೆ ಹೆಜ್ಜೆ ಇಟ್ಟರೆ, ಮತ್ತೊಂದು ವರ್ಗ ಹಿಂದೇಟು ಹಾಕಿತು. ಭಾರತದ ಮಹಿಳೆಯರು ಇದನ್ನು ನೋಡಿದ್ದಾರೆ ಮತ್ತು ಅವರು ಇದನ್ನು ಖಂಡಿತವಾಗಿಯೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಏಕೆಂದರೆ ಇದು ಅಂತ್ಯವಲ್ಲ, ಕೇವಲ ಒಂದು ವಿರಾಮವಷ್ಟೇ. ಈ ಕ್ಷಣವು ಮರಳಿ ಬಂದಾಗ, ಅದನ್ನು ಕೇವಲ ಸಂಸತ್ತಿನ ಸಂಖ್ಯಾಬಲ ನಿರ್ಧರಿಸುವುದಿಲ್ಲ, ಬದಲಾಗಿ ಇನ್ನು ಮುಂದೆ ಕಾಯಲು ಒಪ್ಪದ ಕೋಟ್ಯಂತರ ಮಹಿಳೆಯರ ಧ್ವನಿ ನಿರ್ಧರಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+