Jowar Price 2026: ಬೆಂಗಳೂರು ಸೇರಿ ರಾಜ್ಯದಲ್ಲಿ ಜೋಳದ ಬೆಲೆ ಎಷ್ಟಿದೆ? ದರಪಟ್ಟಿ

Jowar Price Today in Karnataka: ರಾಜ್ಯದಲ್ಲಿ ದಿನನಿತ್ಯದ ವಸ್ತುಗಳು, ಇಂಧನ, ವಿದ್ಯುತ್ ಹೀಗೆ ಪ್ರತಿ ವರ್ಷಗಳ ಬೆಲೆ ಏರಿಕೆ ಆಗುತ್ತಿವೆ. ಆದರೆ ರೈತರು ಬೆಳೆಯುವ ದವಸ, ಧಾನ್ಯಗಳಿಗೆ ಉತ್ತಮ ಬೆಲೆ ಸಿಗುವುದು ತೀರಾ ಅಪರೂಪವಾಗಿದೆ. ಜೋಳ, ರಾಗಿ, ಭತ್ತ, ಮೆಕ್ಕೆಜೋಳಗಳಿಗೆ ಋತುವಿನ ಆರಂಭದಲ್ಲಿ ಒಂದೆರಡು ದಿನ ಸಿಗುವ ದರ ನಂತರ ದಿಢೀರ್ ಕಡಿಮೆ ಆಗುತ್ತದೆ. ಅದೇ ರೀತಿ ಜೋಳದ ಬೆಲೆಯು ಸಹ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ ಎನ್ನುವ ದೂರು ರೈತರದ್ದು.

ರಾಜ್ಯದ ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ವಿಜಯಪುರ, ಕಲಬುರಗಿ, ರಾಯಚೂರು ಸೇರಿ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಜೋಳವನ್ನು ಹಿಂಗಾರು ಬೆಳೆಯಾಗಿ ಬೆಳೆಯಲಾಗುತ್ತದೆ. ಅದೆಷ್ಟೋ ರೈತರು ಉತ್ತಮ ಬೆಲೆ ನೋಡಿಕೊಂಡು ಮಾರುವ ಯೋಚನೆಯಲ್ಲಿದ್ದಾರೆ. ಕೆಲವು ರೈತರು ದರ ಹೆಚ್ಚಿದ್ದಾಗ ಮಾರಾಟ ಮಾಡಿದ್ದಾರೆ. ಮಾರುಕಟ್ಟೆಗಳಲ್ಲಿ ಇಂದಿನ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ?

Jowar Prices

2025 ಮತ್ತು 2026ರ ಜೋಳದ ದರ ವಿವರ

2025ರಲ್ಲಿ ಒಂದು ಕ್ವಿಂಟಾಲ್ ಜೋಳ 3000 ರೂ.ನಿಂದ 4000 ರೂ.ವರೆಗೆ ಜೋಳ ಮಾರಾಟವಾಗಿದೆ. 2026ರ ಏಪ್ರಿಲ್‌ ತಿಂಗಳಲ್ಲಿ ಕನಿಷ್ಠ 3800 ರೂ.ನಿಂದ 5,500 ರೂ.ವರೆಗೆ ಮಾರಾಟವಾಗಿದ್ದು, ಈ ವರ್ಷ ಸರಾಸರಿ ದರ 4000 ರೂಪಾಯಿ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಆದರೆ ದರಗಳು ಕೆಲವೆಡೆ ಮಾತ್ರ ಗರಿಷ್ಠ ದರಕ್ಕೆ ಮಾರಾಟವಾದರೆ ಉಳಿದೆಲ್ಲ ಕಡೆ ಕಡಿಮೆ/ಕನಿಷ್ಠ ದರ ನಿಗದಿ ಆಗುವುದು ಹೆಚ್ಚು. ರಾಜ್ಯದಲ್ಲಿ ಏಪ್ರಿಲ್ 18ರ ಶನಿವಾರದ ಜೋಳದ ಪ್ರತಿ ಕ್ವಿಂಟಾಲ್ ಕನಿಷ್ಠ ಮತ್ತು ಗರಿಷ್ಠ ದರವೆಷ್ಟು? ಇಲ್ಲಿದೆ ಮಾಹಿತಿ.

Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್

1 ಕ್ವಿಂಟಾಲ್ ಜೋಳದ ಮಾರುಕಟ್ಟೆಗಳ ದರ

* ಬೆಂಗಳೂರಿನಲ್ಲಿ ಜೋಳದ ಕನಿಷ್ಠ ದರ 3200 ರೂ.ಮತ್ತು ಗರಿಷ್ಠ ದರ 3800 ರೂ.

* ಬೆಳಗಾವಿ ಮಾರುಕಟ್ಟೆಯಲ್ಲಿ ಕನಿಷ್ಠ ಬೆಲೆ 3000ರೂ. ಮತ್ತು ಗರಿಷ್ಠ ಬೆಲೆ 5800 ರೂ.

* ವಿಜಯಪುರ ಕನಿಷ್ಠ ಬೆಲೆ 3229 ರೂ. ಮತ್ತು ಗರಿಷ್ಠ ಬೆಲೆ 3229 ರೂ.

* ರಾಯಚೂರಿನ ಸಿಂಧನೂರಿನಲ್ಲಿ ಕನಿಷ್ಠ ಬೆಲೆ 3100ರೂ. ಮತ್ತು ಗರಿಷ್ಠ ಬೆಲೆ 3100 ರೂ.

* ಗದಗ ಜಿಲ್ಲೆಯ ಲಕ್ಷೇಶ್ವರದಲ್ಲಿ ಕನಿಷ್ಠ ಬೆಲೆ 1510 ರೂ. ಮತ್ತು ಗರಿಷ್ಠ ಬೆಲೆ 3225 ರೂ.

* ಗದಗ ನಗರ ಮಾರುಕಟ್ಟೆಯಲ್ಲಿ ಕನಿಷ್ಠ ಬೆಲೆ 1689 ರೂ. ಮತ್ತು ಗರಿಷ್ಠ ಬೆಲೆ 4463 ರೂ.

* ಬೀದರ್ ನಗರ ಮಾರುಕಟ್ಟೆಯಲ್ಲಿ ಜೋಳದ ಕನಿಷ್ಠ ಬೆಲೆ 3800 ಮತ್ತು ಗರಿಷ್ಠ ಬೆಲೆ 4600 ರೂ.

* ಕೊಪ್ಪಳ ಜಿಲ್ಲೆಯ ಗಂಗಾವತಿ ಮಾರುಕಟ್ಟೆಯಲ್ಲಿನ ಕನಿಷ್ಠ ಬೆಲೆ 2700 ರೂ. ಮತ್ತು ಗರಿಷ್ಠ ಬೆಲೆ
2700 ರೂ.

* ಬೀದರ್‌ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಕನಿಷ್ಠ ಬೆಲೆ 1750 ರೂ.ಮತ್ತು ಗರಿಷ್ಠ ಬೆಲೆ 4250 ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+