ಫೆಬ್ರವರಿ ಒಂದಕ್ಕೆ ಕೇಂದ್ರದ ಕೊನೆಯ ಬಜೆಟ್ ಮಂಡನೆ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 05 : ಜಿಎಸ್‌ಟಿ ನಂತರದ ಮೊದಲ ಹಾಗೂ ಪ್ರಸ್ತುತ ಸರ್ಕಾರದ ಕೊನೆಯ ಬಜೆಟ್‌ ಅನ್ನು ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಲಿದ್ದಾರೆ.

6.3ಕ್ಕೇರಿದ ಜಿಡಿಪಿ ಹಿಂದೆ ಜಿಎಸ್ಟಿ, ಅಪನಗದೀಕರಣದ ಕೊಡುಗೆ: ಅರುಣ್ ಜೇಟ್ಲಿ

ಜಿ.ಎಸ್.ಟಿ ಜಾರಿಯ ನಂತರದ ಮೊದಲ ಬಜೆಟ್ ಇದಾಗಿದ್ದು, ಆ ಕಾರಣದಿಂದಲೇ ದೇಶದ ಗಮನ ವಿಶೇಷವಾಗಿ ಸೆಳೆದಿದೆ. ಜಿಎಸ್‌ಟಿ ಇಂದ ಈ ವರೆಗೆ ಆಗಿರುವ ಲಾಭ, ನಷ್ಟಗಳ ಲೆಕ್ಕಾಚಾರವೂ ಬಜೆಟ್‌ನಲ್ಲಿ ಪ್ರತಿಫಲಿತವಾಗಲಿದೆ.

First Post-GST budget likely on February 1

ಪ್ರಸ್ತುತ ಕೇಂದ್ರ ಸರ್ಕಾರದ ಕೊನೆಯ ಬಜೆಟ್‌ ಕೂಡ ಇದಾಗಿದ್ದು, ಬಜೆಟ್‌ನ ನಂತರ ಚುನಾವಣೆಗೆ ತೆರಳಬೇಕಿರುವ ಕಾರಣ ಮತದಾರರನ್ನು ಸೆಳೆಯುವ ಜನಪ್ರಿಯ ಬಜೆಟ್ ಮಂಡನೆಯಾಗಲಿದೆ ಎಂಬ ಊಹೆ ಇದೆ.

ನವೆಂಬರ್ ತಿಂಗಳಿನಲ್ಲಿ ಜಿಎಸ್ಟಿ ಗಳಿಕೆಯಲ್ಲಿ ಭಾರಿ ಕಡಿತ!

2018ರ ಜನವರಿ 30ರಂದು ರಾಷ್ಟ್ರಪತಿ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದು, ಅಧಿವೇಷನಕ್ಕೆ ಚಾಲನೆ ನೀಡಲಿದ್ದಾರೆ. ಅದರ ಎರನೇ ದಿನವೇ ಅರುಣ್ ಜೇಟ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಅರುಣ್ ಜೇಟ್ಲಿ ಅವರ 5ನೇ ಬಜೆಟ್ ಆಗಲಿದೆ.

2017 ರಲ್ಲಿಯೂ ಕೂಡ ಅರುಣ್ ಜೇಟ್ಲಿ ಅವರು ಆಯವ್ಯಯವನ್ನು ಫೆಬ್ರವರಿ 1 ಮಂಡಿಸಿದ್ದರು. ಬಜೆಟ್ ಸಾಮಾನ್ಯವಾಗಿ ಫೆಬ್ರವರಿ ಕೊನೆಯ ವೇಳೆಗೆ ಬಜೆಟ್ ಮಂಡನೆಯಾಗುತ್ತಿತ್ತು. ಇದಲ್ಲದೆ ಮುಂಚೆ ಬೇರೆಯಾಗಿ ಮಂಡನೆಯಾಗುತ್ತಿದ್ದ ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್‌ ಒಳಗೆ ಸೇಪರ್ಡೆ ಗೊಳಿಸಿದ ಖ್ಯಾತಿಯೂ ಅರುಣ್ ಜೇಟ್ಲಿ ಅವರ ಹೆಸರಲ್ಲೇ ಇದೆ.

ನೋಟ್‌ಬ್ಯಾನ್ ಮತ್ತು ಜಿಎಸ್‌ಟಿ ಅಂತಹಾ ಕ್ರಾಂತಿಕಾರಿ ನಿರ್ಧಾರಗಳನ್ನು ತಳೆದಿದ್ದ ಕೇಂದ್ರ, ತಮ್ಮ ನಿರ್ಧಾರಗಳು ದೇಶದ ಆರ್ಥಿಕತೆಗೆ ಉಂಟು ಮಾಡಿರುವ ಲಾಭ ಹಾಗೂ ಅದು ಸಾಮಾನ್ಯ ಜನ ಜೀವನದ ಮೇಲೆ ಮಾಡಿದ ಧನಾತ್ಮಕ ಪರಿಣಾಮವನ್ನು ತೋರಿಸಲು ಫೆಬ್ರವರಿ 1ರ ಬಜೆಟ್‌ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿದೆ ಎನ್ನಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Finance Minister Arun Jaitley is likely to present India's first post-GST and the current government's last full Budget on February 1 next year.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ