ದೆಹಲಿಯ ಜನನಿಬಿಡ ಭಾಜಂಪುರ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ
ದೆಹಲಿ, ನವೆಂಬರ್ 24: ನವದೆಹಲಿಯ ಭಾಜಂಪುರ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಸಂಭಿವಿಸಿದ್ದು, ಅಗ್ನಿಶಾಮಕ ದಳವು ಬೆಂಕಿ ಆರಿಸುವುದರಲ್ಲಿ ನಿರತವಾಗಿದೆ.
3:25 ರ ವೇಳೆಗೆ ಅಗ್ನಿ ಅವಘಡ ಸಂಭವಿಸಿದ್ದು, ಮಾರುಕಟ್ಟೆ ಪ್ರದೇಶವಾಗಿರುವ ಕಾರಣ ಹೆಚ್ಚಿನ ಹಾನಿ ಆಗಿರುವ ಸಾಧ್ಯತೆ ಇದೆ. ಅಗ್ನಿ ಅವಘಡದಿಂದ ಜೀವ ಹಾನಿ ಆಗಿರುವ ಬಗ್ಗೆ ವರದಿ ಆಗಿಲ್ಲ.

20 ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜನನಿಬಿಡ ಸ್ಥಳದಲ್ಲಿಯೇ ಈ ಅಗ್ನಿಅವಘಡ ಸಂಭವಿಸಿದೆ.
ಕೆಲವು ದಿನಗಳ ಹಿಂದೆ ನವೆಂಬರ್ 19 ರಂದು ದೆಹಲಿಯ ಕರೋಲ್ ಭಾಗ್‌ನ ಫ್ಯಾಕ್ಟರಿ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಇದರಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದರು.












Click it and Unblock the Notifications