ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದುಗಳ ವಿರುದ್ಧ ಹೇಳಿಕೆ, ಸೀತಾರಾಮ್ ಯೆಚೂರಿ ವಿರುದ್ಧ ಎಫ್ಐಆರ್

|
Google Oneindia Kannada News

ನವದೆಹಲಿ, ಮೇ 04: 'ಹಿಂದೂಗಳು ಕೂಡ ಹಿಂಸಾಚಾರಿಗಳಾಗಬಲ್ಲರು' ಎಂಬ ಹೇಳಿಕೆ ನೀಡಿದ್ದ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ವಿರುದ್ಧ ಹರಿದ್ವಾರ ಪೊಲೀಸರು ಎಫ್ಐಆರ್ ದಾಖಲಾಗಿದೆ.

ಸೀತಾರಾಮ್ ಯೆಚೂರಿ ವಿರುದ್ಧ ಬಾಬಾ ರಾಮದೇವ್ ಅವರು ಹರಿದ್ವಾರದ ಪೊಲೀಸರಿಗೆ ದೂರು ನೀಡಿದ್ದರು. ಹಿಂದೂಗಳ ಪವಿತ್ರ ಕಾವ್ಯಗಳಾದ ರಾಮಾಯಾಣ ಹಾಗೂ ಮಹಾಭಾರತದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ದೂರಿದ್ದರು.

ಹಿಂದೂಗಳೂ ಹಿಂಸಾಚಾರಿಗಳು: ಸೀತಾರಾಂ ಯೆಚೂರಿ ವಿವಾದಹಿಂದೂಗಳೂ ಹಿಂಸಾಚಾರಿಗಳು: ಸೀತಾರಾಂ ಯೆಚೂರಿ ವಿವಾದ

ಚುನಾವಣೆಯ ಆರಂಭಿಕ ಹಂತಗಳು ಮುಕ್ತಾಯಗೊಂಡ ಬಳಿಕ ಅವರು ಕಟು ಹಿಂದುತ್ವ ಅಜೆಂಡಾಕ್ಕೆ ಮರಳಿದ್ದಾರೆ. 35 ಎ ಮತ್ತು 370ನೇ ವಿಧಿಗಳ ರದ್ದತಿ ಬಗ್ಗೆ ಮಾತನಾಡುತ್ತಿದ್ದಾರೆ. ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ, ಏಕಪ್ರಕಾರದ ನಾಗರಿಕ ನೀತಿ ಸಂಹಿತೆ ಮತ್ತು ಎನ್‌ಆರ್‌ಸಿ ಕುರಿತು ಹೇಳುತ್ತಿದ್ದಾರೆ.

FIR against Sitaram Yechury for hurting hindu sentiments

ಇಂಥ ವಿಚಾರಗಳ ಹಿನ್ನೆಲೆಯಲ್ಲಿಯೇ ಜನರ ಭಾವನೆಗಳನ್ನು ಉದ್ರೇಕಿಸುವ ಸಲುವಾಗಿ ಮೂರನೇ ಹಂತದ ಚುನಾವಣೆ ಮುಗಿದ ಬಳಿಕ ಭೋಪಾಲ್‌ನಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ಸ್ಪರ್ಧೆಗೆ ಇಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಯೆಚೂರಿ ಹೇಳಿದ್ದರು.

ಗೋ ಹತ್ಯೆ ಮಾಡುವವರಿಂದ ರಕ್ಷಣೆ ನೀಡಲು ಖಾಸಗಿ ಸೇನೆ ಸ್ಥಾಪಿಸಿರುವುದಕ್ಕೆ ಆರೆಸ್ಸೆಸ್ ವಿರುದ್ಧ ಅವರು ಹರಿಹಾಯ್ದಿದ್ದಾರೆ. ಮೈತ್ರಿಕೂಟ ಜತೆಯಾಗಿ ಸೇರಿ ಮೋದಿ ಅವರನ್ನು ಅಧಿಕಾರದಿಂದ ಇಳಿಸುತ್ತವೆ. ಮೈತ್ರಿಕೂಟ ಅವರಿಗೆ ಪರ್ಯಾಯವನ್ನು ಹೊಂದಿದೆ ಎಂದಿದ್ದಾರೆ.

English summary
Police in Hairdwar booked Communist Party of India-Marxist, general secretary Sitaram Yechury on Saturday for allegedly linking Hinduism with violence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X