ತಮಿಳುನಾಡಿನಿಂದ ಕೇರಳದವರೆಗೆ ಹಬ್ಬಿದ ನಕಲಿ ನೋಟು ಜಾಲ
ನವದೆಹಲಿ,ಮಾರ್ಚ್,೦೪: ಖೋಟಾ ನೋಟು ಜಾಲದ ಬೆನ್ನು ಹತ್ತಿದ ದೆಹಲಿ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದು, ಈತನ ಮೂಲಕ ತಮಿಳುನಾಡಿನ ಶಿವಕಾಶಿ ಎಂಬಲ್ಲಿ ನಕಲಿ ನೋಟಿನ ತಯಾರಿಕೆ ನಡೆಯುತ್ತಿದೆ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.
ನಕಲಿ ನೋಟಿನ ಜಾಲದ ಮುಖ್ಯ ಆರೋಪಿಯೇ ಪ್ರದೀಪ್. ಕೇರಳದ ಪಟ್ಟಾಹ್ ಬಳಿ ದೆಹಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಈತನನ್ನು ತನಿಖೆಗೆ ಒಳಪಡಿಸಿದಾಗ ಈತ ನಕಲಿ ನೋಟಿನ ಜಾಲದ ಸಂಪೂರ್ಣ ವಿವರ ನೀಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.[ನೋಟು ನೋಡದೆ ಕಿಸೆಗೆ ಹಾಕಿದ್ರೆ ಕಥೆ ಮುಗೀತು!

ನಕಲಿ ನೋಟಿನ ಜಾಲ ಭೇದಿಸಿದ್ದು ಹೇಗೆ?
ಪ್ರದೀಪ್ ಎಂಬಾತ ಒಬ್ಬ ವ್ಯಕ್ತಿಯ ಹತ್ತಿರ ಎರಡು ಲಕ್ಷಕ್ಕೆ ನನ್ನ ಕಾರನ್ನು ಅಡವಿಟ್ಟಿದ್ದೇನೆ. ಅದನ್ನು ತೆಗೆದುಕೊಂಡು ಬರಬೇಕು ಎಂದು ಎರಡು ಲಕ್ಷ ನಕಲಿ ನೋಟಿರುವ ಬ್ಯಾಗನ್ನು ತೆಗೆದುಕೊಂಡು ತನ್ನ ಸಹಚರರ ಜೊತೆ ಕೇರಳದ ಪಟಾಹ್ ಎಂಬಲ್ಲಿಗೆ ಹೋಗಿದ್ದಾನೆ.[ಥ್ರೆಡ್ ಇಲ್ಲದೇ ಪ್ರಿಂಟ್: 1000 ರೂಪಾಯಿ ನೋಟಿನಲ್ಲಿ ಭಾರೀ ಎಡವಟ್ಟು!]
ಪ್ರದೀಪ್ ತನ್ನ ಕಾರನ್ನು ಅಡವಿಟ್ಟುಕೊಂಡಿದ್ದ ವ್ಯಕ್ತಿಗೆ ತಂದಿದ್ದ ನಕಲಿ ಹಣವನ್ನು ನೀಡಿದ್ದಾನೆ. ಆ ವ್ಯಕ್ತಿ ಈ ಹಣವನ್ನು ಎಣಿಸುತ್ತಿರುವಾಗ ಇದು ನಕಲಿ ನೋಟುಗಳು ಎಂದು ತಿಳಿದು ಬಂದಿದೆ. ಇದರ ಬಗ್ಗೆ ಪ್ರದೀಪ್ ಹಾಗೂ ಆ ವ್ಯಕ್ತಿಯ ನಡುವೆ ಗಲಾಟೆ ನಡೆದಿದೆ. ಆಗ ಪ್ರದೀಪ್ ಮತ್ತು ಸಹಚರರು ಆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.[ಈ ಎರಡು ಕ್ರಮ ಸಂಖ್ಯೆಯ ಸಾವಿರ ರೂಪಾಯಿ ನೋಟನ್ನು ಸ್ವೀಕರಿಸದಿರಿ!]
ಈ ವಿಚಾರವನ್ನು ಹಲ್ಲೆಗೆ ಒಳಗಾದ ವ್ಯಕ್ತಿಯು ಪೊಲೀಸರಿಗೆ ತಿಳಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪ್ರದೀಪ್ ಮತ್ತು ಆತನ ಸಹಚರರನ್ನು ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ. ಆಗ ಅವರು ತಮಿಳುನಾಡಿನ ಶಿವಕಾಶಿಯಲ್ಲಿ 30,000 ನೈಜ ನೋಟು ನೀಡಿದರೆ, 1 ಲಕ್ಷ ನಕಲಿ ಹಣ ನೀಡುತ್ತಿದ್ದಾರೆ. ಎಲ್ಲ ಹಣವೂ ಸಾವಿರ ನೋಟಿನಿಂದ ಕೂಡಿರುತ್ತದೆ ಎಂದು ತಿಳಿಸಿದ್ದಾರೆ.[ಭಾರತಕ್ಕೆ ಖೋಟಾ ನೋಟು ಬರುವುದು ಎಲ್ಲಿಂದ?]












Click it and Unblock the Notifications