ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂದರ್ಶನ : ದೆಹಲಿಯಲ್ಲಿ ಈ ಬಾರಿ ಆಪ್‌ಗೆ ಸ್ಪಷ್ಟ ಬಹುಮತ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜ. 16 : ನವದೆಹಲಿಯಲ್ಲಿ ವಿಧಾನಸಭೆ ಚುನಾವಣಾ ಕಾವು ಏರುತ್ತಿದೆ. ಈ ಬಾರಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಸ್ಪರ್ಧೆ ಇದ್ದು, ಆಪ್ ಸ್ಪಷ್ಟ ಬಹುಮತಗಳಿಸಲಿದೆ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿಯಲಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಪೃಥ್ವಿ ರೆಡ್ಡಿ ಹೇಳಿದ್ದಾರೆ.

ಒನ್ ಇಂಡಿಯಾಕ್ಕೆ ನೀಡಿರುವ ಸಂದರ್ಶನದಲ್ಲಿ ಫೆಬ್ರವರಿ 7ರಂದು ನಡೆಯಲಿರುವ ದೆಹಲಿ ಚುನಾವಣೆ ಬಗ್ಗೆ ಮಾತನಾಡಿರುವ ಪೃಥ್ವಿ ರೆಡ್ಡಿ, ಚುನಾವಣೆಯಲ್ಲಿ ಆಪ್ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸೇರಿರುವ ಕಿರಣ್ ಬೇಡಿ ಅವರ ಮೇಲೆ ನಮಗೆ ಅಪಾರ ಗೌರವವಿದೆ, ಬೇಡಿ ಅವರು ಬಿಜೆಪಿಯಲ್ಲಿಯೂ ಬದಲಾವಣೆ ತರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಿರಣ್ ಬೇಡಿ ಬಿಜೆಪಿ ಸೇರಿದ್ದರಿಂದ ಆಪ್‌ಗೆ ನಿರಾಸೆ ಆಗಿದೆಯೇ?
ಕಿರಣ್ ಬೇಡಿ ಅವರು ಬಿಜೆಪಿ ಸೇರಿರುವುದರಿಂದ ಪಕ್ಷಕ್ಕೆ ನಿರಾಸೆಯಾಗಿಲ್ಲ. ಅರವಿಂದ್ ಕೇಜ್ರಿವಾಲ್ ಅವರೇ ಹೇಳಿರುವಂತೆ ಪಕ್ಷದಲ್ಲಿ ಎಲ್ಲರೂ ಕಿರಣ್ ಬೇಡಿ ಅವರನ್ನು ತುಂಬಾ ಗೌರವಿಸುತ್ತೇವೆ. ಅವರ ವಿಚಾರಗಳನ್ನು ನಾವು ಗೌರವಿಸುತ್ತೇವೆ. ಬಿಜೆಪಿಯಲ್ಲಿಯೂ ಅವರು ಬದಲಾವಣೆ ತರಬಹುದು ಎಂದು ನಾವು ಭರವಸೆ ಹೊಂದಿದ್ದೇವೆ. [ದೆಹಲಿ ಅಸೆಂಬ್ಲಿ ಚುನಾವಣಾ ವೇಳಾಪಟ್ಟಿ ಘೋಷಣೆ]

Aam Admi Party

ಕೇಜ್ರಿವಾಲ್ ಸಿಎಂ ಸ್ಥಾನ ತೊರೆದಿದ್ದನ್ನು ದೆಹಲಿ ಜನರು ಮರೆತಿದ್ದಾರೆಯೇ?
ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಸ್ಥಾನ ತೊರೆದ ಬಗ್ಗೆ ಜನರಿಗೆ ಆಕ್ರೋಶವಿದೆ. ಸಿದ್ಧಾಂತಕ್ಕೆ ಅನುಗುಣವಾಗಿ ನಾವು ಮಾಡಿದ್ದು ಸರಿ ಎಂದು ನಾವು ನಂಬಿದ್ದೇವೆ. ಈ ವಿಚಾರದಲ್ಲಿ ಜನರೇ ತೀರ್ಮಾನ ತೆಗೆದುಕೊಳ್ಳಲಿದ್ದು, ನಾವು ಮಾಡಿದ್ದು ಸರಿ ಎಂದಾದರೆ ಈ ಬಾರಿ ಸ್ಪಷ್ಟ ಬಹುಮತ ನೀಡಲಿದ್ದಾರೆ. ನಮ್ಮ ಈ ತಪ್ಪಿಗಾಗಿ ಜನರು ಲೋಕಸಭೆ ಚುನಾವಣೆಯಲ್ಲಿ ಶಿಕ್ಷೆ ನೀಡಿದ್ದಾರೆ. [ದೆಹಲಿ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಕಿರಣ್ ಬೇಡಿ]

ದೆಹಲಿಯಲ್ಲಿ ಈ ಬಾರಿ ಸ್ಪಷ್ಟ ಬಹುಮತ ಬರಲಿದೆಯೇ?
ದೆಹಲಿಯ ಈ ಬಾರಿಯ ಚುನಾವಣೆ ಹೆಚ್ಚು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಬಳಿ ಹಣವಿದೆ. ನಾವು ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ದೆಹಲಿಯಲ್ಲಿ ಇತರ ರಾಜ್ಯಗಳಂತೆ ಜನರಿಗೆ ಹೆಚ್ಚಿನ ಆಯ್ಕೆಗಳಿಲ್ಲ. ಆದ್ದರಿಂದ ಪಕ್ಷಗಳ ನಡುವೆ ಪ್ರಬಲ ಸ್ಪರ್ಧೆ ಇದೆ.

ಚುನಾವಣೆ ಚಿತ್ರಣದಿಂದ ಕಾಂಗ್ರೆಸ್ ಮರೆಯಾಗಿದೆಯೇ?
ದೇಶದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಈಗಾಗಲೇ ಸೋತಿದೆ. ದೆಹಲಿಯಲ್ಲಿ ಅಗತ್ಯವಿದ್ದರೆ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ. ಅವರು ಚುನಾವಣೆಗೂ ಮೊದಲೇ ಸೋತಿದ್ದಾರೆ ಎಂಬುದನ್ನು ಇದೇ ಸ್ಪಷ್ಟವಾಗಿ ತಿಳಿಸುತ್ತಿದೆ. ಜನರು ಎಎಪಿಗೆ ಮತ ನೀಡಲಿದ್ದಾರೆ ಎಂಬ ನಂಬಿಕೆ ಇದೆ. ಕಾಂಗ್ರೆಸ್‌ಗೆ ಮತ ನೀಡಿ ಮತವನ್ನು ಏಕೆ ಹಾಳು ಮಾಡಿಕೊಳ್ಳುತ್ತಾರೆ?

Prithvi Reddy

ಸದ್ಯ, ದೆಹಲಿಯಲ್ಲಿ ಏನಾಗುತ್ತಿದೆ?
ಚುನಾವಣೆಗೆ ಕೆಲವು ದಿನಗಳ ಮಾತ್ರ ಬಾಕಿ ಉಳಿದಿವೆ. ನಮ್ಮ ಕಾರ್ಯತಂತ್ರ ಫಲ ನೀಡಲಿದೆ ಎಂಬ ವಿಶ್ವಾಸ ನಮಗಿದೆ. ಬಿಜೆಪಿ ನಮಗೆ ಪ್ರಬಲ ಎದುರಾಳಿ. ಆಮ್ ಆದ್ಮಿ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂಬ ವಿಶ್ವಾಸ ನಮಗಿದೆ.

English summary
The Delhi election will be an extremely interesting one. While it clear that it is a straight fight between the BJP and the Aam Admi Party said, AAP national executive member Prithvi Reddy in interview with oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X