ಕೇಂದ್ರ ಬಜೆಟ್ 2019: ಪೆಟ್ರೋಲ್-ಡೀಸೆಲ್ ದರದಲ್ಲಿ ಏರಿಕೆ ಸಾಧ್ಯತೆ

ನವದೆಹಲಿ, ಜುಲೈ 05: ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಗೆ ತಲಾ ರೂ. 1 ರಷ್ಟು ಅಬಕಾರಿ ಸುಂಕ ಮತ್ತು ರಸ್ತೆ-ಮೂಲಸೌಕರ್ಯ ಸೆಸ್ ಅನ್ನು ಹೆಚ್ಚಿಸಬೇಕಾಗಿರುವುದರಿಂದ ಇಂಧನ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ಕಚ್ಚಾ ತೈಲದ ಬೆಲೆ ಪ್ರತಿ ಟನ್ ಗೆ 1 ರುಪಾಯಿ ಜಾಸ್ತಿ ಆಗಲಿದ್ದು, ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈಗಾಗಲೇ ಪೆಟ್ರೋಲ್ ಬೆಲೆ 70 ರ ಗಡಿ ದಾಟಿದ್ದು, ಮುಂಬೈಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 76.15 ಇದೆ. ಡೀಸೆಲ್ ದರ ಲೀಟರ್ ಗೆ 67.20 ರೂ. ಇದೆ.

Excise Duty And Cess On Petrol And Diesel To Be Hiked By Rs 1 per litre each

ಈಗಾಗಲೇ ಪೆಟ್ರೋಲ್, ಡಿಸೆಲ್ ಬೆಲೆಯಲ್ಲಿ ಏರಿಕೆಯಾಗಿರುವುದರಿಂದ ಪರಿತಪಿಸುತ್ತಿರುವ ಶ್ರೀಸಾಮಾನ್ಯನಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತದ ಮೊಟ್ಟಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವರಾಗಿ ಶುಕ್ರವಾರ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದು, ಆ ಸಂದರ್ಭದಲ್ಲಿ ಅಬಕಾರಿ ಸುಂಕ ಹೆಚ್ಚಿಸುವ ಬಗ್ಗೆ ಪ್ರಸ್ತಾವ ಮುಂದಿಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+