2 ಕೋಟಿ ಬಾಕಿ ಸೆಟ್ಲಮೆಂಟಿಗೆ ಮುಂದಾದ ದೇವೇಗೌಡ್ರು

ಅಂದಹಾಗೆ ಗೌಡರು ಈ ಸಂಬಂಧ ಈಗ ಭಾರತೀಯ ವಾಯುಪಡೆಗೆ 2 ಕೋಟಿ ರೂ ಬಿಲ್ ಪಾವತಿಸಬೇಕಿದೆ. ಈ ಸಂಬಂಧ ಬಾಕಿ ಚುಕ್ತಾ ಮಾಡುವಂತೆ ವಾಯುಪಡೆಯು ಅಂದಿನಿಂದಲೂ ಅನೇಕ ಬಾರಿ ಬಾಕಿದಾರರಿಗೆ ಸೂಚಿಸಿತ್ತು. ಆದರೆ ಅವರು ಸುಮ್ಮನಾಗಿದ್ದರು. 2010ರಲ್ಲಿ ಆರ್‌ಟಿಐ (RTI) ಕಾರ್ಯಕರ್ತ ಸುಭಾಷ್ ಚಂದ್ರ ಅಗರ್‌ವಾಲ್ ಅವರು ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದಾಗ ಸಾಲದ ವಿಷಯ ಬಹಿರಂಗವಾಗಿತ್ತು.
ಇದೀಗ ಕೇಸು ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದೆ. ಬಾಕಿ ಪಾವತಿಸುವಂತೆ ಕೋರಿ ಗೌಡರು ವಿರುದ್ಧ ವಾಯುಪಡೆಯು ಅರ್ಜಿ ಹಾಕಿಕೊಂಡಿದ್ದರೆ ಇದಕ್ಕೆ ಉತ್ತರಿಸಿರುವ ಗೌಡರು ಅಷ್ಟೊಂದು ದೊಡ್ಡ ಮೊತ್ತವನ್ನು ತೀರಿಸಲು ತನ್ನಿಂದ ಈಗ ಆಗುವುದಿಲ್ಲ. ಮಧ್ಯಸ್ಥಿಕೆ ಮೂಲಕ ಇಷ್ಟೂ ಅಂತ ಅಮೌಂಟ್ ಫಿಕ್ಸ್ ಮಾಡಿ, ಒಂದೇ ಕಂತಿನಲ್ಲಿ ಸೆಟ್ಲ್ ಮಾಡಿಕೊಳ್ಳುವೆ ಎಂದು ತಿಳಿಸಿದ್ದಾರೆ.
ಅಂದಹಾಗೆ 1996ರಲ್ಲಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಖಾಸಗಿ ಪ್ರಯಾಣಕ್ಕಾಗಿ ದೇವೇಗೌಡರು ವಾಯುಪಡೆ ವಿಮಾನ ಬಳಸಿಕೊಂಡಿದ್ದರು. ಆ ಸಂಬಂಧ 54 ಲಕ್ಷ ರೂ. ಬಿಲ್ ಬಾಕಿಯಿತ್ತು. ಅದೀಗ 18 ವರ್ಷಗಳಲ್ಲಿ ಬಡ್ಡಿ ಸಮೇತ ಬೆಳೆಯುತ್ತಾ, 2 ಕೋಟಿ ರೂ.ಗೆ ತಲುಪಿದೆ!
ಗಮನಾರ್ಹವೆಂದರೆ ಅಂದಿನ 54 ಲಕ್ಷ ರೂ. ಬಿಲ್ ನಲ್ಲಿ 28 ಲಕ್ಷ ರೂ. ಗಳನ್ನು ಅಂದು ತಮ್ಮ ಸಂಪುಟದಲ್ಲಿ ವಿಮಾನಯಾನ ಸಚಿವರಾಗಿದ್ದ ಸಿಎಂ ಇಬ್ರಾಹಿಂ ಅವರು ಪಾವತಿಸಬೇಕಿದೆ. ಆದರೆ ಈ ಹಣವನ್ನೂ ತಮ್ಮ ಲೆಕ್ಕಕ್ಕೇ ಸೇರಿಸಿಬಿಟ್ಟಿದ್ದಾರೆ ಎಂದು ಗೌಡರು ದೂರಿದ್ದಾರೆ. ವಿಚಾರಣೆ ಮೇ 23ಕ್ಕೆ ಮುಂದೂಡಲಾಗಿದೆ.
ಬಾಕಿ ಉಳಿಸಿಕೊಂಡಿರುವುದು ಗೌಡರೊಬ್ಬರೇ ಅಲ್ಲ!:
* ಮಾಜಿ ಪ್ರಧಾನಿ ದಿವಂಗತ ಚಂದ್ರಶೇಖರ್ 5.91 ಕೋಟಿ ರೂ.
* ಮಾಜಿ ಕೇಂದ್ರ ಸಚಿವ ದಿವಂಗತ ವಿಸಿ ಶುಕ್ಲಾ 4.60 ಲಕ್ಷ ರೂ.












Click it and Unblock the Notifications