ಬೇಡಿ ಸಕ್ರಿಯ ರಾಜಕೀಯಕ್ಕೆ; ದೆಹಲಿ ಮುಂದಿನ ಸಿಎಂ?
ನವದೆಹಲಿ, ಮೇ 21: ಸಮಾಧಾನಕರ ಬೆಳವಣಿಗೆಯೊಂದರಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಎರಡೂ ಮತ್ತೆ ಪರಸ್ಪರ ಕೈಜೋಡಿಸಲು ಹಿಂದೇಟು ಹಾಕಿದ್ದು, ದಿಲ್ಲಿ ವಿಧಾನಸಭೆಗೆ ಮತ್ತೆ ಚುನಾವಣೆ ನಡೆಯಲಿ ಎಂದು ಆಶಿಸಿದ್ದಾರೆ. ದಿಲ್ಲಿಯ ಹಿಂದಿನ ಮುಖ್ಯಮಂತ್ರರಿ ಅರವಿಂದ್ ಕೇಜ್ರಿವಾಲ್ ಅವರಂತೂ 'ಅಧಿಕಾರದಿಂದ ಕೆಳಗಿಳಿದು ತಪ್ಪು ಮಾಡಿಬಿಟ್ಟೆ. ಸಾರಿ' ಎಂದು ಕೈ ಕೈ ಹಿಸುಕಿಕೊಂಡಿದ್ದಾರೆ.
ಅದೇನೇ ಇರಲಿ ದಿಲ್ಲಿ ವಿಧಾನಸಭೆಗೆ ಮತ್ತೆ ಚುನಾವಣೆ ನಡೆಯುವುದಂತೂ ದಿಟವಾಗಿದೆ. ಈ ಮಧ್ಯೆ, ಲೋಕಸಭಾ ಚುನಾವಣೆಯಲ್ಲಿ ಎಎಪಿ ಪೊರಕೆಯನ್ನು ಬಳಸಿ ಅಷ್ಟೂ ಸ್ಥಾನಗಳನ್ನು ಬಾಚಿಕೊಂಡಿರುವ ಬಿಜೆಪಿ ಈ ಬಾರಿ ಮತ್ತಷ್ಟು ಹುಮ್ಮಸ್ಸಿನೊಂದಿಗೆ ದಿಲ್ಲಿ ಗದ್ದುಗೆಗೇರಲು ಸರ್ವಸಿದ್ಧತೆ ನಡೆಸಿದೆ. ಒಂದೆಡೆ ಚಾಂದಿನಿ ಚೌಕ್ ಸಂಸದ ಡಾ. ಹರ್ಷವರ್ಧನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಉತ್ಸುಕತೆ ತೋರಿದೆ.
Indian Police Service to Indian Political Service:

ಆದರೆ ಗಮನಾರ್ಹ ಬೆಳವಣಿಗೆಯೊಂದರಲ್ಲಿ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರು ತಾವು ಸಕ್ರಿಯ ರಾಜಕೀಯಕ್ಕೆ ಧುಮುಕುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು, ತಮ್ಮ ಮನದಿಂಗಿತ ಹೊರಹಾಕಿದ್ದಾರೆ.
I no more rule out entering indian political service on capability basis. I am moving towards some flexibility in this. @FeminaIndia
— Kiran Bedi (@thekiranbedi) May 20, 2014 ಕಳೆದೆರಡು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಮೋದಿಯ ಬಿಜೆಪಿಗೆ ಕಿರಣ್ ಬೇಡಿ ನಮೋ ನಮಃ ಅಂದಿದ್ದರು. ಲೋಕಸಭೆ ಚುನಾವಣೆಯಲ್ಲಿಯೇ ಬಿಜೆಪಿ ಅಭ್ಯರ್ಥಿಯಾಗಿ ದಿಲ್ಲಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಅಗಿನ್ನೂ ಗಟ್ಟಿಮನಸ್ಸು ಮಾಡದಿದ್ದ ಕಿರಣ್ ಬೇಡಿ ಇದೀಗ ಸಂಪೂರ್ಣ ಮೋದಿಮಯವಾದ ಬಳಿಕ ತಾವೂ ಬಿಜೆಪಿಯತ್ತ ಹೆಜ್ಜೆಹಾಕಲು ಸಿದ್ಧತೆ ನಡೆಸಿದ್ದಾರೆ. ಮೋದಿನ ಗೆಲುವಿನ ನಂತರ ಮೇ 16ರಿಂದ ನಿರಂತರವಾಗಿ ಟ್ವೀಟ್ ಮಾಡುತ್ತಾ ಮೋದಿ ಆಯ್ಕೆ ಬಗ್ಗೆ ಹರ್ಷ ವ್ಯಕ್ತಡಿಸಿದ್ದಾರೆ.
ದಿಟ್ಟ ಐಪಿಎಸ್ ಅಧಿಕಾರಿಯೂ ಆಗಿದ್ದ ಕಿರಣ್ ಬೇಡಿ ಅವರು ಅಣ್ಣಾ ಹಜಾರೆ ನೇತೃತ್ವದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಬಳಿಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ.












Click it and Unblock the Notifications