ಭೂಕಬಳಿಕೆ : ರಾಬರ್ಟ್ ವದ್ರಾ ಆಪ್ತನ ಮೇಲೆ ಇಡಿ ದಾಳಿ
ನವದೆಹಲಿ, ಏಪ್ರಿಲ್ 12 : ಭೂಕಬಳಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವದ್ರಾ ಅವರ ಆಪ್ತ ಮಹೇಶ್ ನಗರ್ ಮೇಲೆ ಜಾರಿ ನಿರ್ದೇಶನಾಲಯ ಬುಧವಾದ ದಾಳಿ ಮಾಡಿದೆ.
ಬಿಕನೇರ್ ನಲ್ಲಿ ವಿವಾದಾತ್ಮಕ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿ ಹಣ ಗಳಿಸಿದ ಆರೋಪವನ್ನು ಮಹೇಶ್ ನಗರ್ ಮೇಲೆ ಹೊರಿಸಲಾಗಿದೆ. ವದ್ರಾ ಅವರ ಮತ್ತೊಬ್ಬ ಆಪ್ತ ಅಶೋಕ್ ಕುಮಾರ್ ಮೇಲೆಯೂ ದಾಳಿ ನಡೆದಿದೆ.
2016ರ ಜುಲೈನಲ್ಲಿಯೇ ಈ ಭೂಕಬಳಿಕೆಗೆ ಸಂಬಂಧಿಸಿದಂತೆ ರಾಬರ್ಟ್ ವದ್ರಾ ಮತ್ತು ಮಹೇಶ್ ನಗರ್ ಅವರಿಗೆ ಜಾರಿ ನಿರ್ದೇಶನಾಲಯ ನೋಟೀಸ್ ಜಾರಿ ಮಾಡಿತ್ತು. ಫರೀದಾಬಾದ್ ನಲ್ಲಿಯೂ ಇಡಿ ದಾಳಿ ನಡೆಸಿದೆ.













Click it and Unblock the Notifications