ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಚಿತ್ರವಾಯ್ತು, ಇದೀಗ ವೆಬ್ ಸೀರೀಸ್ ಗೂ ತಡೆ ನೀಡಿದ ಆಯೋಗ

|
Google Oneindia Kannada News

ನವದೆಹಲಿ, ಏಪ್ರಿಲ್ 20: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಚಿತ್ರಣವನ್ನೊಳಗೊಂಡ ವೆಬ್ ಸೀರೀಸ್ ಪ್ರಸಾರಕ್ಕೆ ಚುನಾವಣಾ ಆಯೋಗ ತಡೆ ನೀಡಿದೆ. ಚುನಾವನೆ ಮುಗಿಯುವವರೆಗೂ ಈ ವೆಬ್ ಸೀರೀಸ್ ಅನ್ನು ಪ್ರಸಾರ ಮಾಡದಂತೆ ಅದು ಆದೇಶಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಎರೋಸ್ ನೌ ಎಂಬ ಮನರಂಜನಾ ತಾಣವು "Modi - Journey of a Common Man"ಎಂಬ ವೆಬ್ ಸೀರೀಸ್ ಅನ್ನು ಪ್ರಸಾರ ಮಾಡುತ್ತಿತ್ತು.

ಮೊದಲು 'ಮೋದಿ' ಸಿನಿಮಾ ನೋಡಿ, ಆಮೇಲೆ ನಿರ್ಧರಿಸಿ: ECಗೆ ಸುಪ್ರೀಂ ಸಲಹೆಮೊದಲು 'ಮೋದಿ' ಸಿನಿಮಾ ನೋಡಿ, ಆಮೇಲೆ ನಿರ್ಧರಿಸಿ: ECಗೆ ಸುಪ್ರೀಂ ಸಲಹೆ

"ಈ ವೆಬ್ ಸೀರೀಸ್ ಪ್ರಧಾನಿ ನರೇಂದ್ರ ಮೋದಿಯವರ ಬದುಕನ್ನೇ ಆಧರಿಸಿರುವುದರಿಂದ, ಅವರು ಈ ಬಾರಿ ಚುನಾವಣೆಗೆ ಅಭ್ಯರ್ಥಿಯಾಗಿರುವುದರಿಂದ ಚುನಾವಣೆ ಮುಗಿಯುವವರೆಗೂ ಅದನ್ನು ಪ್ರಸಾರ ಮಾಡುವಂತಿಲ್ಲ. ಪ್ರಸಾರ ಮಾಡಿದರೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತಾಗುತ್ತದೆ" ಎಂದು ಚುನಾವಣಾ ಆಯೋಗ ಹೇಳಿದೆ.

EC Orders Eros Now To Stop Streaming Web Series On PM Modi

ಉಮೇಶ್ ಶುಕ್ಲಾ ಎಂಬುವವರು ಈ ವೆಬ್ ಸೀರೀಸ್ ಅನ್ನು ನಿರ್ದೇಶಿಸಿದ್ದಾರೆ.

ರಾಹುಲ್ ಗಾಂಧಿ ಬಯೋಪಿಕ್ ಗೆ ಹೀರೋಯಿನ್ ಯಾರು? ಉತ್ತರ ಕೇಳಿ... ರಾಹುಲ್ ಗಾಂಧಿ ಬಯೋಪಿಕ್ ಗೆ ಹೀರೋಯಿನ್ ಯಾರು? ಉತ್ತರ ಕೇಳಿ...

ಏಪ್ರಿಲ್ 12 ರಂದು ತೆರೆ ಕಾಣಬೇಕಿದ್ದ ಪ್ರೈಮ್ ಮಿನಿಸ್ಟರ್ ನರೇಂದ್ರ ಮೋದಿ ಚಿತ್ರಕ್ಕೂ ಚುನಾವಣಾ ಆಯೋಗ ತಡೆ ನೀಡಿತ್ತು. ಅದರ ವಿರುದ್ಧ ಚಿತ್ರ ತಂಡ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿತ್ತು. ಇತ್ತೀಚೆಗಷ್ಟೇ ಈ ಸಂಬಂಧ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, 'ಮೊದಲು ಚಿತ್ರವನ್ನು ನೋಡಿ, ನಂತರ ಮುಚ್ಚಿದ ಲಕೋಟೆಯಲ್ಲಿ ನಿಮ್ಮ ಅಂತಿಮ ನಿರ್ಧಾರ ಬರೆದುಕೊಡಿ' ಎಂದು ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು.

ಈ ಚಿತ್ರದಲ್ಲಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ಅವರು ನಟಿಸಿದ್ದು, ಒಮಂಗ್ ಕುಮಾರ್ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಒಮಂಗ್ ಅವರ ಮೇರಿಕೋಮ್ ಮತ್ತು ರಸಬ್ಜಿತ್ ಚಿತ್ರಗಳು ಸಾಕಷ್ಟು ಸುದ್ದಿ ಮಾಡಿದ್ದವು. ಕಳೆದ 2018 ರಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು, ನರೇಂದ್ರ ಮೋದಿ ಆರೆಸ್ಸೆಸ್ ನ ಸಾಮಾನ್ಯ ಪ್ರಚಾರಕರಾಗಿ ನಂತರ ಪ್ರಧಾನಿ ಹುದ್ದೆಯವರೆಗೆ ಬೆಳೆದ ಹಾದಿಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

English summary
The Election Commission today ordered entertainment firm Eros Now to stop streaming online a web series on Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X