GT Vs SCK: ಸಾಯಿ ಸುದರ್ಶನ್ ಅಬ್ಬರದ ಬ್ಯಾಟಿಂಗ್; ಗುಜರಾತ್ ಟೈಟಾನ್ಸ್‌ ವಿರುದ್ಧ ತವರಿನಲ್ಲೇ ಸಿಎಸ್‌ಕೆ ಹಿನಾಯ ಸೋಲು

GT Vs CSK IPL 2026: ಚೆನ್ನೈನ ಎಂ.ಎ.ಚಿಂದಂಬರಂ ಕ್ರೀಡಾಂಗಣದಲ್ಲಿ ಭಾನುವಾರ (ಏಪ್ರಿಲ್‌ 26) ನಡೆದ ಐಪಿಎಲ್ 2026ರ ರೋಚಕ ಹಣಾಹಣಿಯಲ್ಲಿ ಸಾಯಿ ಸುದರ್ಶನ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಟಾಸ್‌ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್‌ಮನ್ ಗಿಲ್‌ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ ಕೇವಲ 158 ರನ್‌ಗಳನಷ್ಟೇ ಕಾಲೆಹಾಕಿತು. ಸಿಎಸ್‌ಕೆ ನೀಡಿದ 159 ರನ್‌ಗಳ ಸಾಧಾರಣ ಮೊತ್ತದ ಗುರಿಯನ್ನು ಗುಜರಾತ್ ಟೈಟಾನ್ಸ್‌ ತಂಡವು ಕೇವಲ 16.4 ಓವರ್‌ಗಳಿಗೆ ತಲುಪಿ ಗೆಲುವಿನ ನಗೆ ಬೀರಿತು.

IPL 2026 Sai Sudharsan Stars as Gujarat Titans Beat Chennai Super Kings by 8 Wickets in Chennai

ಗುಜರಾತ್ ಟೈಟಾನ್ಸ್ ಪರ ಕಗಿಸೊ ರಬಾಡ ಮತ್ತು ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ದಾಳೆ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೇಲವಲ 158 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಪವರ್‌ಪ್ಲೇ ಅವಧಿಯಲ್ಲೇ ಸಿಎಸ್‌ಕೆ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಆಘಾತದ ನಡುವೆಯೂ ನಾಯಕ ರುತುರಾಜ್ ಗಾಯಕ್ವಾಡ್ ಜವಾಬ್ದಾರಿಯುತ ಆಟವಾಡಿದರು. ಈ ಸೀಸನ್‌ನ ತಮ್ಮ ಮೊದಲ ಅರ್ಧಶತಕ ಸಿಡಿಸಿದ ಅವರು, ಪೂರ್ತಿ 20 ಓವರ್‌ಗಳ ಕಾಲ ಕ್ರೀಸ್‌ನಲ್ಲಿದ್ದು ತಂಡದ ಮೊತ್ತವನ್ನು 158ಕ್ಕೆ ತಲುಪಿಸಿದರು.

ರಬಾಡ, ಸಿರಾಜ್‌ ಮಾರಕ ಬೌಲಿಂಗ್ ದಾಳಿ

ಗುಜರಾತ್ ಟೈಟಾನ್ಸ್ ಪರ ಬೌಲಿಂಗ್ ಮಾಡಿದ ಕಗಿಸೊ ರಬಾಡ 4 ಓವರ್‌ ಎಸೆದು 25 ರನ್‌ಗಳನ್ನು ನೀಡಿ 3 ವಿಕೆಟ್‌ ಕಿತ್ತು ಮಿಂಚಿದರು. ಮೊಹ್ಮದ್ ಸಿರಾಜ್‌ ಸಹ 4 ಓವರ್‌ ಎಸೆದು 23 ರನ್‌ ನೀಡಿ 1 ವಿಕೆಟ್‌ ಕಬಳಿಸಿದರು. ಉಳಿದಂತೆ ಮಾನವ್ ಸುತಾರ್ 1, ಅರ್ಷದ್ ಖಾನ್ 2 ವಿಕೆಟ್ ಪಡೆದರು.

ಸಿಎಸ್‌ಕೆ ಪರ ಯಾರು ಎಷ್ಟು ರನ್ ಬಾರಿಸಿದರು?

ಸಿಎಸ್‌ಕೆ ಪರ ಬ್ಯಾಟ್‌ ಬೀಸಿದ ಸಂಜು ಸ್ಯಾಮ್ಸನ್‌ 11(15), ಶಿವಂ ದುಬೆ 22(17), ಕಾರ್ತೀಕ್ ಶರ್ಮಾ 15(9), ಜೇಮಿ ಓವರ್‌ಟನ್‌ 18(6) ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಇದ್ಯಾವುದಕ್ಕೂ ಎದುಗುಂದದೇ ಕೊನೇವರೆಗೂ ಕ್ರೀಸ್‌ನಲ್ಲಿ ನಿಂತ ನಾಯಕ ರುತುರಾಜ್ ಗಾಯಕ್ವಾಡ್ ಜವಾಬ್ದಾರಿಯುವ ಆಟ ಆಡಿ ಅಜೇಯ 74(60) ರಸ್‌ ಸಿಡಿಸಿ ತಂಡದ ಮೊತ್ತವನ್ನು 158ಕ್ಕೆ ಕೊಡೊಯ್ದರು. ಇವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ, 4 ಸಿಕ್ಸರ್‌ಗಳು ಸೇರಿವೆ.

ಗುಜರಾತ್ ಪರ ಮಿಂಚಿದ ಸಾಯಿ ಸುದರ್ಶನ್

ಬಳಿಕ ಚೆನ್ನೈ ಸೂಪರ್ ಕಿಂಗ್ಸ್‌ ನೀಡಿದ 159 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್‌ಗೆ ಶುಭ್‌ಮನ್ ಗಿಲ್ ವೇಗದ ಆರಂಭ ನೀಡಿದರು. ಆನಂತರ, ಆರಂಭಿಕ ಆಟಗಾರ ಸಾಯಿ ಸುದರ್ಶನ್ ಕೇವಲ 46 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸರ್‌ಗಳ ಸಹಿತ 87 ರನ್ ಚಚ್ಚುವ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಅವರಿಗೆ ಜೋಸ್ ಬಟ್ಲರ್ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ಗುಜರಾತ್ ಟೈಟಾನ್ಸ್ ಅತ್ಯಂತ ಸುಲಭವಾಗಿ ಗುರಿ ತಲುಪಿ ಜಯಭೇರಿ ಬಾರಿಸಿತು. ಗುಜರಾತ್ ಟೈಟಾನ್ಸ್ ಪರ ಬ್ಯಾಟ್ ಬೀಸಿದ ಸಾಯಿ ಸುದರ್ಶನ್ 87(46), ನಾಯಕ ಶುಭ್‌ಮನ್ ಗಿಲ್‌ 33(23), ಜೋಶ್ ಬಟ್ಲರ್ ಅಜೇಯ 39(30) ರನ್‌ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+