ದೆಹಲಿಯಲ್ಲಿ ಮತ್ತೆ ಲಘು ಭೂಕಂಪ: 2.2 ತೀವ್ರತೆ ದಾಖಲು

ನವದೆಹಲಿ, ಮೇ 15: ದೆಹಲಿಯಲ್ಲಿ ಮತ್ತೆ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 2.2 ತೀವ್ರತೆ ದಾಖಲಾಗಿದೆ.

ಬೆಳಗ್ಗೆ 11.28ರ ವೇಳೆಗೆ ಭೂಮಿ ಕಂಪಿಸಿದ ಅನುಭವವಾಗಿದೆ. 8ಕಿ.ಮೀ ಆಳದಲ್ಲಿ ಕಂಪನದ ಕೇಂದ್ರವಿತ್ತು ಎಂದು ಎನ್‌ಸಿಎಸ್ ತಿಳಿಸಿದೆ.ದೆಹಲಿಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಇದು ನಾಲ್ಕನೇ ಭೂಕಂಪವಾಗಿದೆ. ಮೇ 10 ರಂದು 3.5 ತೀವ್ರತೆಯ ಲಘು ಭೂಕಂಪ ಸಂಭವಿಸಿತ್ತು.

ಘಾಜಿಯಾಬಾದ್‌ನಿಂದ 5 ಕಿ.ಮೀ ದೂರದಲ್ಲಿ ಸಂಭವಿಸಿತ್ತು. ಈಗಾಗಲೇ ದೂಳಿನ ಬಿರುಗಾಳಿಯೂ ಬೀಸುತ್ತಿದೆ. ಗುರುವಾರದಿಂದ ಆಲಿಕಲ್ಲು ಮಳೆಯೂ ಆಗಿದ್ದು ನಾಲ್ಕು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

Earthquakes Of Magnitude 2.2 Hits Delhi

ಏಪ್ರಿಲ್ 12 ಹಾಗೂ 13 ರಂದು 3.5 ಹಾಗೂ 2.7 ತೀವ್ರತೆಯ ಭೂಕಂಪ ಸಂಭವಿಸಿದೆ. 1956ರ ಅಕ್ಟೋಬರ್ 10 ರಂದು 6.7 ತೀವ್ರತೆಯ ಭೂಕಂಪ ಸಂಭವಿಸಿತ್ತು. 1966ರಲ್ಲಿ 5.8 ತೀವ್ರತೆಯ ಭೂಕಂಪ ದಾಖಲಾಗಿತ್ತು. ಅದಾದ ಬಳಿಕ 2001 ರಲ್ಲಿ 3.4 , 2004ರಲ್ಲಿ 2.8 ತೀವ್ರತೆಯ ಭೂಕಂಪ ದೆಹಲಿಯಲ್ಲಿ ಸಂಭವಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+