ದೆಹಲಿಯಲ್ಲಿ ಕಂಪಿಸಿದ ಭೂಮಿ; 3.5ರಷ್ಟು ತೀವ್ರತೆ ದಾಖಲು
ನವದೆಹಲಿ, ಮೇ 10 : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭೂಕಂಪದ ಅನುಭವವಾಗಿದೆ. 3.5ರಷ್ಟು ತೀವ್ರತೆಯು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ ಎಂದು ಎನ್‌ಸಿಎಸ್ ಹೇಳಿದೆ.
ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನವದೆಹಲಿಯ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಸಹ ಭೂಮಿ ನಡುಗಿರುವುದನ್ನು ಖಚಿತಪಡಿಸಿದೆ.

ಎನ್‌ಸಿಎಸ್‌ನಲ್ಲಿರುವ ಮಾಪನ ಕೇಂದ್ರದಲ್ಲಿ 3.5ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಕಂಪನಗಳು ಉಂಟಾಗಿವೆ. ಹಲವು ಪ್ರದೇಶಗಳಲ್ಲಿ ಈ ತರಹದ ಅನುಭವವಾಗಿದೆ ಎಂದು ಜನರು ಹೇಳುತ್ತಿದ್ದಾರೆ.
ಭೂಕಂಪದಿಂದಾಗಿ ಪ್ರಾಣ ಮತ್ತು ಆಸ್ತಿಗಳಿಗೆ ಹಾನಿಯಾದ ಯಾವುದೇ ಮಾಹಿತಿಗಳು ಇಲ್ಲಿವರೆಗೆ ಸಿಕ್ಕಿಲ್ಲ. ದೆಹಲಿ-ಉತ್ತರ ಪ್ರದೇಶ ಗಡಿ ಭೂಕಂಪದ ಕೇಂದ್ರವಾಗಿತ್ತು ಎಂದು ಅಂದಾಜಿಸಲಾಗಿದೆ. ಈ ಕುರಿತು ಪರಿಶೀಲನೆ ನಡೆಯುತ್ತಿದೆ.
ಏಪ್ರಿಲ್ ತಿಂಗಳಿನಲ್ಲಿ ಸತತ ಎರಡು ದಿನ ದೆಹಲಿಯಲ್ಲಿ ಭೂಮಿ ನಡುಗಿದ ಅನುಭವ ಆಗಿತ್ತು. ಏಪ್ರಿಲ್ 12ರಂದು 3.5 ಮತ್ತು ಏಪ್ರಿಲ್ 13ರಂದು 2.7ರಷ್ಟು ತೀವ್ರತೆ ದಾಖಲಾಗಿತ್ತು.












Click it and Unblock the Notifications