ರಂಜಾನ್: ಲಾಕ್‌ಡೌನ್ ನಿಯಮ ಪಾಲಿಸಲು ಜಮೈತ್ ಮುಸ್ಲಿಂ ಸಂಘಟನೆ ಮನವಿ

ನವದೆಹಲಿ, ಏಪ್ರಿಲ್ 20: ರಂಜಾನ್ ಸಂದರ್ಭದಲ್ಲಿ ಲಾಕ್‌ಡೌನ್ ನಿಯಮ ಪಾಲಿಸುವಂತೆ ಜಮೈತ್ ಉಲೆಮಾ-ಎ-ಹಿಂದ್ ಸಂಘಟನೆ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದೆ.

ರಂಜಾನ್‌ಗೆ ಸಂಬಂಧಿಸಿದಂತೆ ಧಾರ್ಮಿಕ ಕಾರ್ಯಕ್ರಮಗಳು ಇನ್ನೇನಯ ಆರಂಭಗೊಳ್ಳಲಿದೆ. ಮನೆಯಲ್ಲಿಯೇ ಇದ್ದು ರಂಜಾನ್ ಆಚರಣೆ ಮಾಡಿ ಎಂದು ಜಮೈತ್ ಸಂಘಟನೆ ಜನರಲ್ ಸೆಕ್ರೆಟರಿ ಮೊಹಮ್ಮದ್ ಮದಾನಿ ತಿಳಿಸಿದ್ದಾರೆ.

ಬಡವರಿಗೆ ಸಹಾಯ ಮಾಡಿ, ಯಾರೂ ಕೂಡ ಅನಗತ್ಯವಾಗಿ ಮನೆಯಿಂದ ಹೊರಗಡೆ ಹೋಗಬೇಡಿ, ಪ್ರಾರ್ಥನೆ ಹಾಗೂ ಹಬ್ಬವನ್ನು ಮನೆಯೊಳಗಿದ್ದುಕೊಂಡೇ ಆಚರಣೆ ಮಾಡಿ ಎಂದು ಹೇಳಿದ್ದಾರೆ.

During Ramzan Jamiat Ulema E Hind Appeals To Muslims To Follow Lockdown Norms

ಮಾರ್ಚ್ 24ರಿಂದ ಏಪ್ರಿಲ್ 14ರವರೆಗೆ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಆದರೆ ಕೊರೊನಾ ವೈರಸ್‌ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿರುವ ಕಾರಣ ಲಾಕ್‌ಡೌನ್ ಮೇ 3ರವರೆಗೆ ವಿಸ್ತರಿಸಲಾಗಿತ್ತು.

ಗುರುವಾರ ವಕ್ಫ್‌ಮಂಡಳಿಯು ರಂಜಾನ್ ಸಂದರ್ಭದಲ್ಲಿ ಹೇಗಿರಬೇಕು ಎನ್ನುವ ಕುರಿತು ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಸಿದೆ.

ಆರೋಗ್ಯ ಕಾರ್ಯಕರ್ತರು, ಭದ್ರತಾ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿಗೆ ನಾವು ಸಹಕಾರ ನೀಡಬೇಕು.

ಭಾರತದಲ್ಲಿ ಕೊರೊನಾದಿಂದ ಇದುವರೆಗೆ 543 ಮಂದಿ ಮೃತಪಟ್ಟಿದ್ದಾರೆ. 17265 ಮಂದಿಗೆ ಕೊರೊನಾ ಸೋಂಕು ತಗುಲಿದೆ. 2547 ಮಂದಿ ಗುಣಮುಖರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+