ಅವಧಿಗೆ ಮುನ್ನ ಡಿಆರ್‌ಡಿಒ ಮುಖ್ಯಸ್ಥ ಅವಿನಾಶ್ ವಜಾ
ನವದೆಹಲಿ, ಜ.14: ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಮುಖ್ಯಸ್ಥ ಅವಿನಾಶ್ ಚಂದರ್ ರನ್ನು ಕೇಂದ್ರ ಸರ್ಕಾರ ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ. ಅವಿನಾಶ್ ಚಂದರ್ ಅವರ ಸೇವಾವಧಿ ಇನ್ನೂ 15 ತಿಂಗಳು ಕಾಲ ಬಾಕಿ ಇತ್ತು. ಅದರೆ, ಪ್ರಧಾನಮಂತ್ರಿ ನೇತೃತ್ವದ ನೇಮಕಗಳ ಸಮಿತಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ದೇಶದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ (ಡಿಆರ್‌ಡಿಒ)ದ ಮುಖ್ಯಸ್ಥ ಅವಿನಾಶ್ ಚಂದರ್ ಅವರನ್ನು ಕೇಂದ್ರ ಸರ್ಕಾರ ಮನೆಗೆ ಕಳುಹಿಸಿದೆ. ಅವಿನಾಶ್ ಅವರ ಒಪ್ಪಂದದ ಅವಧಿ ಮುಗಿಯಲು ಇನ್ನೂ 15 ತಿಂಗಳ ಕಾಲಾವಧಿ ಬಾಕಿ ಇದೆ ಎನ್ನುವಾಗಲೇ ಪ್ರಧಾನಮಂತ್ರಿ ನೇತೃತ್ವದ ನೇಮಕಗಳ ಸಮಿತಿ ಈ ನಿರ್ಧಾರ ತೆಗೆದುಕೊಂಡಿವೆ. [ಮತ್ತಷ್ಟು ಶಕ್ತಿ ತುಂಬಲಿರುವ ಬೆಂಗಳೂರ ಕ್ಷಿಪಣಿ]

ಅವಿನಾಶ್ ಚಂದರ್ ಅವರು ಜ.31ಕ್ಕೆ ಕಚೇರಿ ತೆರವು ಮಾಡಬೇಕು. ಚಂದರ್ ಅವರು 64ವರ್ಷವಾದ ಹಿನ್ನೆಲೆಯಲ್ಲಿ ವಯೋಮಿತಿ ಆಧಾರದ ಮೇಲೆ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಸ್ಥಾನಕ್ಕೆ ನ.30,2014ರಂದು ರಾಜೀನಾಮೆ ಸಲ್ಲಿಸಿದ್ದರು. ಅದರೆ, ಡಿಆರ್‌ಡಿಒದಲ್ಲಿ ಅವರ ಸೇವಾವಧಿಯನ್ನು 18 ತಿಂಗಳು ಹೆಚ್ಚಿಸಿ ಮೇ, 31,2016ರ ತನಕ ಅಧಿಕಾರ ನೀಡಲಾಗಿತ್ತು. [ಇಡೀ ಚೀನಾ ಕ್ರಮಿಸಬಲ್ಲ ಅಗ್ನಿ-V]
ಡಿಆರ್‌ಡಿಒ ಮುಖ್ಯಸ್ಥರಾಗಿ ಅವರು ಸಂಶೋಧನಾ ಕ್ಷೇತ್ರಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಸರ್ಕಾರದ ಕ್ರಮ ಹಲವಾರು ಪ್ರಶ್ನೆಗಳನ್ನು ಮುಂದಿಡುತ್ತದೆ. ಪ್ರಧಾನಿ ಅವರು ಕಳೆದ ಬಾರಿ ಡಿಆರ್ ಡಿಒಗೆ ಭೇಟಿ ನೀಡಿದ್ದಾಗಲೇ ಈ ಬಗ್ಗೆ ಸುಳಿವು ಸಿಕ್ಕಿತ್ತು. ಚಂದರ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. [ಮೋದಿ ಸಲಹೆ: ಡಿಆರ್ ಡಿಓ ನಡೆ ಏನು?]
ಅಗ್ನಿ ಕ್ಷಿಪಣಿಯ ಪ್ರಮುಖ ರೂವಾರಿಗಳಲ್ಲೊಬ್ಬರಾದ ಚಂದರ್ ಅವರ ಸ್ಥಾನವನ್ನು ಬಾಬಾ ಅಣುಶಕ್ತಿ ಕೇಂದ್ರದ ಮಾಜಿ ಮುಖ್ಯಸ್ಥ ಶೇಖರ್ ಬಸು ನೇಮಕವಾಗೋ ಸಾಧ್ಯತೆ ಇದೆ. ಐಐಟಿ ದೆಹಲಿಯಲ್ಲಿ ವ್ಯಾಸಂಗ ಮಾಡಿರುವ ಚಂದರ್ ಅವರು 1972ರಲ್ಲಿ ಡಿಆರ್ ಡಿಒಗೆ ಸೇರ್ಪಡೆಗೊಂಡಿದ್ದರು.(ಪಿಟಿಐ)












Click it and Unblock the Notifications