ವಿಜಯೋತ್ಸವದಲ್ಲಿ ಪಟಾಕಿ ಸಿಡಿಸಬೇಡಿ: ಬೆಂಬಲಿಗರಿಗೆ ಕೇಜ್ರಿವಾಲ್ ಸಲಹೆ

Recommended Video

      Delhi election results 2020 :Kejriwal asks AAP supporters not to burst crackers | AAP | Delhi

      ನವದೆಹಲಿ, ಫೆಬ್ರವರಿ 11: ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಎಎಪಿ ಮುನ್ನಡೆ ಸಾಧಿಸಿದೆ. ಅನೇಕ ಕಡೆ ಈಗಾಗಲೇ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದಾರೆ. ಆದರೆ ಎಎಪಿ ಸಂಭ್ರಮಚಾರಣೆ ನಡೆಯುವ ಸ್ಥಳಗಳಲ್ಲಿ ಪಟಾಕಿ ಸದ್ದು ಕೇಳುವಂತಿಲ್ಲ.

      ಗೆಲುವಿನ ಸಂಭ್ರಮಾಚರಣೆ ವೇಳೆ ಮಾಲಿನ್ಯಕಾರಕ ಪಟಾಕಿಗಳನ್ನು ಬಳಸದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಎಎಪಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

      ಪಟಾಕಿ ಸಿಡಿಸಿ ವಾಯು ಮತ್ತು ಶಬ್ಧಮಾಲಿನ್ಯ ಮಾಡುವ ಬದಲು ಮಾಲಿನ್ಯರಹಿತವಾಗಿ ಸಂಭ್ರಮಾಚರಣೆ ಮಾಡುವಂತೆ ಕೇಜ್ರಿವಾಲ್ ಸಲಹೆ ನೀಡಿದ್ದಾರೆ. ಹೀಗಾಗಿ ಸಿಹಿ ಹಂಚಿಕೆ, ನೃತ್ಯ, ಮೆರವಣಿಗೆಯಂತಹ ಸಂಭ್ರಮಗಳಿಗೆ ಸಿದ್ಧತೆ ನಡೆಸಲಾಗಿದೆ. ಕೆಲವು ಕಡೆ ಈಗಾಗಲೇ ಸಂಭ್ರಮ ಆಚರಣೆಗಳು ನಡೆಯುತ್ತಿವೆ.

      Dont Burst Crackers Kejriwal Asks AAP Workers Victory Celebrations

      ದೆಹಲಿ ಚುನಾವಣೆ; ಎಎಪಿಗೆ ಶಕ್ತಿ ತಂದ 'TINA' ಪ್ರಚಾರ ತಂತ್ರ!

      ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಏರಲಿವೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಹೇಳಿವೆ. ಯಾವ ಸಮೀಕ್ಷೆಯೂ ಅತಂತ್ರ ಅಥವಾ ವಿಭಿನ್ನ ಫಲಿತಾಂಶದ ಸುಳಿವು ನೀಡಿಲ್ಲ. ಒಟ್ಟಾರೆ ಸಮೀಕ್ಷೆಗಳ ಸಮೀಕ್ಷೆಯಲ್ಲಿಯೂ ಎಎಪಿ 55 ಸೀಟುಗಳೊಂದಿಗೆ ಸರಳ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎನ್ನಲಾಗಿದೆ. 2015ರ ವಿಧಾನಸಭೆ ಚುನಾವಣೆಯಲ್ಲಿ 70 ಸೀಟುಗಳಲ್ಲಿ 67ರಲ್ಲಿ ಗೆದ್ದಿದ್ದ ಎಎಪಿಗೆ, ಬಿಜೆಪಿಯಿಂದ ತಕ್ಕಮಟ್ಟಿನ ಪ್ರತಿಸ್ಪರ್ಧೆ ಎದುರಾಗುವ ನಿರೀಕ್ಷೆಯಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+