ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಚುನಾವಣೆ; ಎಎಪಿಗೆ ಶಕ್ತಿ ತಂದ 'TINA' ಪ್ರಚಾರ ತಂತ್ರ!

|
Google Oneindia Kannada News

ನವದೆಹಲಿ, ಫೆಬ್ರವರಿ 11 : ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಆಮ್ ಆದ್ಮಿ ಪಕ್ಷ ಮುನ್ನಡೆಯನ್ನು ಕಾಯ್ದುಕೊಂಡಿದೆ. ಕೇಂದ್ರ ಸರ್ಕಾರದಲ್ಲಿ ಅವರದ್ದೇ ಸರ್ಕಾರವಿದ್ದರೂ ದೆಹಲಿಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುತ್ತಿದೆ.

ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಗೆ ಹಿನ್ನಡೆಯಾಗಲಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ದೆಹಲಿ ಗದ್ದುಗೆಯನ್ನು ಪುನಃ ಪಡೆಯಲಿದೆ ಎಂದು ಹೇಳಿದ್ದವು. ಎಎಪಿ ಈಗ ಮುನ್ನಡೆ ಕಾಯ್ದುಕೊಂಡಿದೆ.

2015ಕ್ಕೆ ಹೋಲಿಸಿದರೆ ಆಮ್ ಆದ್ಮಿ ಪಕ್ಷಕ್ಕೆ 17 ಕ್ಷೇತ್ರಗಳಲ್ಲಿ ಹಿನ್ನಡೆ2015ಕ್ಕೆ ಹೋಲಿಸಿದರೆ ಆಮ್ ಆದ್ಮಿ ಪಕ್ಷಕ್ಕೆ 17 ಕ್ಷೇತ್ರಗಳಲ್ಲಿ ಹಿನ್ನಡೆ

ದೆಹಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ತಕ್ಷಣ ಅರವಿಂದ್ ಕೇಜ್ರಿವಾಲ್ ಚುನಾವಣಾ ಪ್ರಚಾರದ ರೂಪುರೇಷೆ ತಯಾರು ಮಾಡಿದ್ದರು. ಯೋಜನೆಯಂತೆ ಪ್ರಚಾರ ನಡೆಸಿದ್ದು ಆಮ್‌ ಆದ್ಮಿ ಪಕ್ಷಕ್ಕೆ ಮುನ್ನಡೆ ತಂದು ಕೊಟ್ಟಿದೆ.

ದೆಹಲಿ ಚುನಾವಣೆ ಎಕ್ಸಿಟ್ ಪೋಲ್ ಫಲಿತಾಂಶದೆಹಲಿ ಚುನಾವಣೆ ಎಕ್ಸಿಟ್ ಪೋಲ್ ಫಲಿತಾಂಶ

'TINA' ಎಂಬ ಹೆಸರಿನಲ್ಲಿ ಅರವಿಂದ್ ಕೇಜ್ರಿವಾಲ್ ಪ್ರಚಾರದ ತಂತ್ರವನ್ನು ರೂಪಿಸಿದ್ದರು. ಇದು ಪ್ರತಿಪಕ್ಷ ಬಿಜೆಪಿಗೆ ಸರಿಯಾದ ಏಟು ಕೊಟ್ಟಿದೆ. 'TINA' ಎಂಬುದರ ವಿಸ್ತೃತ ರೂಪ There Is No Alternative ಎಂಬುದಾಗಿದೆ.

ಕೇಜ್ರಿವಾಲ್ ಎದುರಿಸಲು 240 ಸಂಸದರನ್ನು ದೆಹಲಿ ರಸ್ತೆಗೆ ಇಳಿಸಿದ ಬಿಜೆಪಿಕೇಜ್ರಿವಾಲ್ ಎದುರಿಸಲು 240 ಸಂಸದರನ್ನು ದೆಹಲಿ ರಸ್ತೆಗೆ ಇಳಿಸಿದ ಬಿಜೆಪಿ

ನಿಮ್ಮ ಸಿಎಂ ಅಭ್ಯರ್ಥಿ ಯಾರು?

ನಿಮ್ಮ ಸಿಎಂ ಅಭ್ಯರ್ಥಿ ಯಾರು?

'TINA' ಎಂಬ ಹೆಸರಿನಲ್ಲಿ ಪ್ರಚಾರ ಆರಂಭಿಸಿದ ಎಎಪಿ ಬಿಜೆಪಿಗೆ ಕೇಳಿದ್ದು ಒಂದೇ ಪ್ರಶ್ನೆ. ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು?. ಸಿಎಂ ಅಭ್ಯರ್ಥಿ ಘೋಷಣೆ ಮಾಡದೆ ಬಿಜೆಪಿ ಚುನಾವಣೆಗೆ ಹೋಯಿತು. 2015ರಲ್ಲಿ ಪಕ್ಷ ಕಿರಣ್ ಬೇಡಿ ಅವರನ್ನು ಸಿಎಂ ಎಂದು ಘೋಷಿಸಿ ಬಳಿಕ ಜನರ ಮುಂದೆ ಹೋಗಿತ್ತು. ಆದರೆ, ಅಧಿಕಾರ ಮಾತ್ರ ಸಿಗಲಿಲ್ಲ.

ಪ್ರತಿದಿನ ಸಿಎಂ ಬಗ್ಗೆ ಚರ್ಚೆ

ಪ್ರತಿದಿನ ಸಿಎಂ ಬಗ್ಗೆ ಚರ್ಚೆ

ಆಮ್ಮ ಆದ್ಮಿ ಪಕ್ಷ ಚುನಾವಣಾ ಪ್ರಚಾರದಲ್ಲಿ ಒಂದಲ್ಲ ಒಂದು ಕಡೆ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಬಿಜೆಪಿಗೆ ಪ್ರತಿದಿನ ಪ್ರಶ್ನೆಯನ್ನು ಕೇಳುತ್ತಲೇ ಬಂದಿತು. ಬಿಜೆಪಿ ಕಾಲೆಳೆಯಲು ಪಕ್ಷದ ಸಿಎಂ ಅಭ್ಯರ್ಥಿ ಎಂಬ ವಿಡಿಯೋವೊಂದನ್ನು ಮಾಡಿ ಬಿಡುಗಡೆ ಮಾಡಿತ್ತು.

ರಾಷ್ಟ್ರವೇ ಬೇರೆ, ರಾಜ್ಯವೇ ಬೇರೆ

ರಾಷ್ಟ್ರವೇ ಬೇರೆ, ರಾಜ್ಯವೇ ಬೇರೆ

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನರು ಬೆಂಬಲ ಕೊಟ್ಟಿದ್ದಾರೆ. ದೆಹಲಿಯ 7 ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಗೆದ್ದಿದೆ. ಆದರೆ, ರಾಷ್ಟ್ರದ ಚುನಾವಣೆಯೇ ಬೇರೆ, ಸ್ಥಳೀಯ ಚುನಾವಣೆಯೇ ಬೇರೆ ಎಂಬುದು ಹಲವು ಬಾರಿ ಸಾಬೀತಾಗಿದೆ. ಎಎಪಿ ಪ್ರಚಾರದಲ್ಲಿ ಸ್ಥಳೀಯ ವಿಷಯಗಳನ್ನು ಮುಂದಿಟ್ಟುಕೊಂಡಿತು.

ಪ್ರಚಾರ ತಂತ್ರ ಬದಲಿಸಿದ್ದ ಬಿಜೆಪಿ

ಪ್ರಚಾರ ತಂತ್ರ ಬದಲಿಸಿದ್ದ ಬಿಜೆಪಿ

ಬಿಜೆಪಿ ದೆಹಲಿ ಚುನಾವಣಾ ಪ್ರಚಾರ ತಂತ್ರದಲ್ಲಿ ಬದಲಾವಣೆ ಮಾಡಿತ್ತು. ಪೌರತ್ವ ತಿದ್ದುಪಡೆ ಕಾಯ್ದೆ ವಿರೋಧಿಸಿ ದೆಹಲಿಯ ಶಾಹಿನ್ ಬಾಗ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಪ್ರಚಾರದಲ್ಲಿ ಬಳಸಿಕೊಂಡಿತು. ಆದರೆ, ದೆಹಲಿ ಜನರು ಲೋಕಸಭಾ ಚುನಾವಣೆಯಲ್ಲಿ ಬೆಂಬಲ ಕೊಟ್ಟಿದ್ದರು ಎಂಬುದನ್ನು ಮರೆಯಿತು.

ಕಾಂಗ್ರೆಸ್ ಪರಿಗಣಿಸಲೇ ಇಲ್ಲ

ಕಾಂಗ್ರೆಸ್ ಪರಿಗಣಿಸಲೇ ಇಲ್ಲ

ದೆಹಲಿಯ ಚುನಾವಣೆಯಲ್ಲಿ ಎಎಪಿ ಮತ್ತು ಬಿಜೆಪಿ ನಡುವಿನ ಪೈಪೋಟಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಯಾರೂ ಪರಿಣಿಸಲೇ ಇಲ್ಲ. ಪ್ರಚಾರದ ಸಂದರ್ಭದಿಂದಲೇ ಕಾಂಗ್ರೆಸ್ 3ನೇ ಸ್ಥಾನಕ್ಕೆ ಹೋಗಿತ್ತು. ಹೋರಾಡುವ ಉತ್ಸಾಹವನ್ನೇ ಕಾಂಗ್ರೆಸ್ ತೋರಿಸಲಿಲ್ಲ. ಕಾಂಗ್ರೆಸ್ ಪ್ರಚಾರ ತಂತ್ರವೇ ಬೇರೆಯಾಗಿತ್ತು. ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೆಸರಿನಲ್ಲಿ ಪಕ್ಷ ಮತ ಕೇಳಿತು.

English summary
In Delhi Assembly Elections 2020 Aam Admi Party built its campaign around the TINA factor. This meant 'there is no alternative'. Delhi election counting underway and AAP has early leads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X