Viral Video: ತಂಗಿಯ ಅಸ್ಥಿಪಂಜರ ಬ್ಯಾಂಕ್‌ಗೆ ತಂದಿದ್ದ ವ್ಯಕ್ತಿಗೆ 10 ಲಕ್ಷ ದೇಣಿಗೆ ಘೋಷಿಸಿದ ಅಲಖ್ ಪಾಂಡೆ

ಇಡೀ ದೇಶದ ಮನಕಲಕುವ ಘಟನೆ ಒಡಿಶಾದ ರಾಯಗಡ ಜಿಲ್ಲೆಯ ಪಟನಾ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಿಪಾಸಿ ಗ್ರಾಮದಲ್ಲಿ ನಡೆದಿತ್ತು. ತಮ್ಮ ಮೃತ ಸಹೋದರಿಯ ಬ್ಯಾಂಕ್ ಖಾತೆಯಲ್ಲಿಟ್ಟಿದ್ದ ಹಣವನ್ನು ಪಡೆಯಲು ಅವರ ತಮ್ಮ ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ತಮ್ಮ ಆಕೆಯ ಅಸ್ಥಿಪಂಜರವನ್ನೇ ಅಗೆದು ತೆಗೆದುಕೊಂಡು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದ್ದರು. ಸೋಮವಾರ ಮಧ್ಯಾಹ್ನ ಈ ಬೆಚ್ಚಿಬೀಳಿಸುವ ದೃಶ್ಯವೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ದೇಶದಾದ್ಯಂತ ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಚೀಲವೊಂದರಲ್ಲಿ ಅಸ್ಥಿಪಂಜರವನ್ನು ಹೊತ್ತುಕೊಂಡು ತಂದಿದ್ದ ವ್ಯಕ್ತಿಯನ್ನು ಕಂಡು ಬ್ಯಾಂಕ್ ಸಿಬ್ಬಂದಿ ಮತ್ತು ಗ್ರಾಹಕರು ಭಯಭೀತರಾಗಿದ್ದಾರೆ. ಆದರೆ ಇಡೀ ದೇಶವೇ ಈ ದೃಶ್ಯವನ್ನು ನೋಡಿ ಮಮ್ಮಲ ಮರುಗಿತ್ತು. ಇದೀಗ ಆ ವ್ಯಕ್ತಿಗೆ 10 ಲಕ್ಷ ರೂಪಾಯಿ ದೇಣಿಗೆ ನೀಡುವುದಕ್ಕೆ ಖ್ಯಾತ ಶಿಕ್ಷಣ ತಜ್ಞ ಅಲಖ್ ಪಾಂಡೆ ಅವರು ಮುಂದೆ ಬಂದಿದ್ದಾರೆ.

Physics Wallah (PW) ಸಂಸ್ಥಾಪಕ ಹಾಗೂ ಶಿಕ್ಷಣ ತಜ್ಞ ಅಲಖ್ ಪಾಂಡೆ ಅವರು, ಒಡಿಶಾದ ಕಿಯೋಂಜಾರ್ ಜಿಲ್ಲೆಯ ಬುಡಕಟ್ಟು ಜನಾಂಗದ ಜಿತು ಮುಂಡಾ ಅವರಿಗೆ ₹10 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಹೃದಯ ವಿದ್ರಾವಕ ಘಟನೆಯ ನಂತರ ಈ ದೇಣಿಗೆ ನೀಡಲಾಗಿದೆ.

Viral Video

2026ರ ಜನವರಿಯಲ್ಲಿ ನಿಧನರಾದ ತಮ್ಮ ಮೃತ ಸಹೋದರಿ ಕಲ್ರಾ ಮುಂಡಾ ಅವರ ಬ್ಯಾಂಕ್ ಖಾತೆಯಿಂದ ಸುಮಾರು 19,300 ರೂಪಾಯಿ ಹಣವನ್ನು ಹಿಂಪಡೆಯಲು ಜಿತು ಮುಂಡಾ ಅವರು ಪ್ರಯತ್ನಿಸುತ್ತಿದ್ದರು. ಆದರೆ ಬ್ಯಾಂಕ್ ಸಿಬ್ಬಂದಿ ಸಹಕಾರ ನೀಡಿರಲಿಲ್ಲ. ಖಾತೆದಾರರು ಇಲ್ಲದೆ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಹೀಗಾಗಿ ಖಾತೆದಾರರು ದೈಹಿಕವಾಗಿ ಹಾಜರಿರಬೇಕಾದ ಅವಶ್ಯಕತೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಸಾವಿನ ಪುರಾವೆಗಾಗಿ ಬ್ಯಾಂಕ್ ಅಧಿಕಾರಿಗಳಿಂದ ಪದೇ ಪದೇ ವಿನಂತಿಗಳಿಂದ ನಿರಾಶೆಗೆ ಒಳಗಾಗಿದ್ದ ಜಿತು ಅವರು ತಮ್ಮ ಸಹೋದರಿಯ ಅಸ್ಥಿಪಂಜರವನ್ನೇ ಬ್ಯಾಂಕ್‌ಗೆ ತೆಗೆದುಕೊಂಡು ಬಂದಿದ್ದರು.

ತಂಗಿಯ ಅಸ್ಥಿಪಂಜರವನ್ನೇ ತೆಗೆದುಕೊಂಡು ಮಾಲಿಪೋಸಿಯಲ್ಲಿರುವ ಒಡಿಶಾ ಗ್ರಾಮೀಣ ಬ್ಯಾಂಕ್‌ಗೆ ಜಿತು ಬಂದಿದ್ದರು. ಈ ಘಟನೆಯ ನಂತರ ಬ್ಯಾಂಕ್ ಅಧಿಕಾರಿಗಳು ತಮಗೆ ಕಾನೂನು ದಾಖಲೆಗಳು ಮಾತ್ರ ಬೇಕಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಅಂತಿಮವಾಗಿ ಅವರಿಗೆ ಹಣವನ್ನು ಬಿಡುಗಡೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದರು.

ಡಿಜಿಟಲ್ ಯುಗದಲ್ಲೂ ದುರಂತ

ಭಾರತವು ಡಿಜಿಟಲ್ ಯುಗದಲ್ಲಿ. ಬಹುತೇಕ ಹಣಕಾಸು ವ್ಯವಹಾರವು ಇದೀಗ ಡಿಜಿಟಲೀಕರಣಗೊಂಡಿದೆ. ಆದರೆ ಇಂದಿಗೂ ಎಲ್ಲರಿಗೂ ಈ ಡಿಜಿಟಲ್ ವಹಿವಾಟು ಸಂಪೂರ್ಣವಾಗಿ ತಲುಪಿಲ್ಲ ಎನ್ನುವುದಕ್ಕೆ ಅಥವಾ ಇನ್ನೂ ಹಲವರಿಗೆ ಡಿಜಿಟಲ್ ಹೊರತಾದ ಈ ಹಿಂದಿನ ಬ್ಯಾಂಕ್ ಮಾದರಿ ಹಾಗೂ ಸಹಕಾರ ಅವಶ್ಯವಿದೆ ಎನ್ನುವುದನ್ನು ಈ ಘಟನೆ ಮತ್ತೊಮ್ಮೆ ಸಾಬೀತು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+