• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಧಾನಿ ಮೋದಿ ತಮ್ಮ ವೇತನದಲ್ಲಿ ತಾಯಿಗೆ ಹಣ ಕೊಡುತ್ತಾರಾ?

|

ನವದೆಹಲಿ, ಏಪ್ರಿಲ್ 24: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವೇತನದ ಕೆಲವು ಭಾಗವನ್ನು ತಮ್ಮ ತಾಯಿ ಹೀರಾ ಬೆನ್ ಅವರಿಗೆ ನೀಡುತ್ತಾರಾ?

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಕುತೂಹಲದ ಪ್ರಶ್ನೆಗೆ ನರೇಂದ್ರ ಮೋದಿ ಅವರು ಉತ್ತರಿಸಿದ್ದಾರೆ.

ಮಮತಾ ಬ್ಯಾನರ್ಜಿ ಮೋದಿಗೆ ವರ್ಷಕ್ಕೆರಡು ಕುರ್ತಾ ಕಳಿಸೋದು ಗೊತ್ತಾ?

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಬದುಕಿನ, ಜನಸಾಮಾನ್ಯರಿಗೆ ಗೊತ್ತಿಲ್ಲದ ಹಲವು ಸಂಗತಿಗಳನ್ನು ಮೋದಿ ಹಂಚಿಕೊಂಡರು.

ತಾಯಿ ಹೀರಾಬೆನ್ ಅವರಿಗೆ ನಿಮ್ಮ ವೇತನದ ಒಂದಷ್ಟು ಭಾಗವನ್ನು ನೀಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, "ಇಂದಿಗೂ ನನ್ನ ತಾಯಿಯೇ ನನಗೆ ಹಣ ನೀಡುತ್ತಾರೆ. ನಾನು ಕೊಟ್ಟರೆ ಅವರು ತೆಗೆದುಕೊಳ್ಳುವುದಿಲ್ಲ. ಅವರಿಗೆ ಈಗ ಹಣದ ಅಗತ್ಯವಿಲ್ಲ. ನಾನು ಅಲ್ಲಿಗೆ ಹೋದರೆ, ನನ್ನನ್ನು ಆಶೀರ್ವದಿಸಿ ಅವರೇ ಸಾವಿರ, ಎರಡು ಸಾವಿರ ರೂ. ಹಣ ನೀಡಿ ಕಳಿಸುತ್ತಾರೆ. ಅಗತ್ಯವಿದ್ದರೆ ಖಂಡಿತ ಕೊಡುತ್ತೇನೆ" ಎಂದು ಮೋದಿ ಹೇಳಿದರು.

ನರೇಂದ್ರ ಮೋದಿ ಸನ್ಯಾಸಿಯಾಗದೆ, ಪ್ರಧಾನಿಯಾಗಿದ್ದು ಹೇಗೆ?

ತೀರಾ ಚಿಕ್ಕ ವಯಸ್ಸಿನಲ್ಲೇ ತಾವು ಕುಟುಂಬವನ್ನು ಬಿಟ್ಟು ಹೊರಗೆ ಬಂದಿದ್ದರಿಂದ ತಮಗೆ ಕುಟುಂಬದ ಬಗೆಗಿನ ವ್ಯಾಮೋಹ ಕಡಿಮೆಯಾಯಿತು. ನಂತರ ರಾಜಕೀಯಕ್ಕೆ ಬಂದ ಮೇಲೆ ಕುಟುಂಬಕ್ಕಾಗಿ ಸಮಯ ನೀದುವುದೂ ಕಡಿಮೆಯಾಯಿತು ಎಂದು ಮೋದಿ ಹೇಳಿದರು.

English summary
Does PM Narendra Modi give a part of his salary to his mother Heeraben? PM Modi answers to Bollywood star Akshay Kumar's this question in an interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X