ಡಿ.ಕೆ.ಶಿವಕುಮಾರ್ ಜಾಮೀನು ಪ್ರಯತ್ನ-2: ಸಿಗುವುದೇ ಯಶಸ್ಸು?
ನವದೆಹಲಿ, ಸೆಪ್ಟೆಂಬರ್ 17: ಇಡಿ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಕಸ್ಟಡಿ ಸಮಯ ಇಂದಿಗೆ ಅಂತ್ಯವಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಜೊತೆಗೆ ಅವರ ಜಾಮೀನು ಅರ್ಜಿ ಇಂದು ವಿಚಾರಣೆಗೆ ಬರಲಿದೆ.
ಸೆಪ್ಟೆಂಬರ್ 3 ರಿಂದ ಇಡಿ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಕಸ್ಟಡಿ ಅವಧಿಯನ್ನು ನಾಲ್ಕು ದಿನಗಳ ವಿಸ್ತರಣೆ ಮಾಡಿ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 13 ರಂದು ಆದೇಶ ಹೊರಡಿಸಿತ್ತು.
ಡಿ.ಕೆ.ಶಿವಕುಮಾರ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಗೆ ನಿನ್ನೆ ಇಡಿ ತಕರಾರು ಸಲ್ಲಿಸಿದ್ದು, ಜಾಮೀನು ಅರ್ಜಿಯೂ ಸಹ ಇಂದು ವಿಚಾರಣೆಗೆ ಬರಲಿದೆ.

ಡಿ.ಕೆ.ಶಿವಕುಮಾರ್ ಅವರ ಪರವಾಗಿ ಅಭಿಷೇಕ್ ಮನು ಸಿಂಘ್ವಿ ಹಾಗೂ ತಂಡ ಇಂದು ವಾದ ಮಂಡಿಸಲಿದೆ. ಡಿ.ಕೆ.ಶಿವಕುಮಾರ್ ಬಂಧನ ಆದಂದಿನಿಂದಲೂ ಇವರೇ ವಾದ ಮಾಡುತ್ತಿದ್ದಾರೆ. ಇಡಿ ಪರ ಕರ್ನಾಟಕ ಮೂಲಕ ನಟರಾಜ್ ವಾದಿಸುತ್ತಿದ್ದಾರೆ.
ಸಂಜೆ 4 ಗಂಟೆ ವೇಳೆಗೆ ವಿಚಾರಣೆ ಪ್ರಾರಂಭವಾಗಲಿದ್ದು, ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಕೋರ್ಟ್ ಆವರಣ ತಲುಪಿದ್ದು, ಕೆಲವೇ ನಿಮಿಷಗಳಲ್ಲಿ ವಿಚಾರಣೆ ಆರಂಭವಾಗಲಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ಸಿಗುತ್ತದೆಯೋ ಅಥವಾ ಜೈಲು ಪಾಲಾಗುತ್ತಾರೆಯೋ ಕಾದು ನೋಡಬೇಕಿದೆ.












Click it and Unblock the Notifications