ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Disqualified MLA Supreme Court Plea Hearing: ಉಪಚುನಾವಣೆಗೆ ತಡೆ, ಅನರ್ಹ ಶಾಸಕರು ನಿರಾಳ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 26: ನಿನ್ನೆ ಅರ್ಧಕ್ಕೆ ನಿಂತಿದ್ದ ಅನರ್ಹ ಶಾಸಕರ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್‌ನಲ್ಲಿ ಮುಂದುವರೆದಿದೆ.

ಕಾಂಗ್ರೆಸ್ ಪಕ್ಷದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸುದೀರ್ಘವಾಗಿ ವಾದ ಮಂಡನೆ ಮಾಡುತ್ತಿದ್ದು, ಅನರ್ಹರು ದುರುದ್ದೇಶದಿಂದ ಪಕ್ಷ ತ್ಯಜಿಸಿದ್ದಾರೆ ಆದ್ದರಿಂದ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ವಾದಿಸಿದ್ದಾರೆ.

ನಿನ್ನೆ ಅನರ್ಹ ಶಾಸಕರ ಪರವಾಗಿ ಮುಕುಲ್ ರೊಹ್ಟಗಿ ಅವರು ಸುದೀರ್ಘ ವಾದ ಮಂಡಿಸಿ, ಅನರ್ಹ ಶಾಸಕರಿಗೆ ಉಪಚುನಾವಣೆ ಸ್ಪರ್ಧಿಸಲು ಅವಕಾಶ ಕೊಡಬೇಕು ಎಂದು ವಾದಿಸಿದ್ದರು. ಸಮಯದ ಅಭಾವದಿಂದ ಇಂದು ವಾದ ಮಂಡಿಸುವುದಾಗಿ ಕಾಂಗ್ರೆಸ್ ಹೇಳಿತ್ತು.

Disqualified MLA Supreme Court Congress JDS By Election Live Updates In Kannada

ಇದೇ ದಿನ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಪರ ವಕೀಲರು ತಮ್ಮ ವಾದ ಮಂಡಿಸಲಿದ್ದಾರೆ.

Newest FirstOldest First
4:12 PM, 26 Sep

ನಿನ್ನೆಯೇ ಮುಕುಲ್ ರೊಹ್ಟಗಿ ಅವರು ಅನರ್ಹ ಶಾಸಕರ ಪರವಾಗಿ ವಾದ ಮಂಡಿಸಿದ್ದರು. ಇಂದು ಕಪಿಲ್ ಸಿಬಲ್ ಅವರು ಕಾಂಗ್ರೆಸ್ ಪರ ವಾದ ಮಂಡಿಸಿದ್ದರು.
4:05 PM, 26 Sep

ಇಂದು ವಿಚಾರಣೆ ನಡೆಸಿದ ನ್ಯಾಯಾಲಯವು ಉಪಚುನಾವಣೆಗೆ ತಡೆ ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 22 ಕ್ಕೆ ಮುಂದೂಡಿದೆ.
4:04 PM, 26 Sep

ಉಚ್ಛ ನ್ಯಾಯಾಲಯದ ಆದೇಶದಿಂದಾಗಿ ಅಕ್ಟೋಬರ್ 21 ರಂದು ನಡೆಯಬೇಕಿದ್ದ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ರದ್ದು ಮಾಡಲಾಗಿದೆ.
4:04 PM, 26 Sep

ಅನರ್ಹ ಶಾಸಕರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಉಪಚುನಾವಣೆಗೆ ತಡೆ ನೀಡಿ ಆದೇಶ ಹೊರಡಿಸಿದೆ.
4:02 PM, 26 Sep

15 ಕ್ಷೇತ್ರಗಳ ಉಪಚುನಾವಣೆಗೆ ತಡೆ
3:55 PM, 26 Sep

ಕಪಿಲ್ ಸಿಬಲ್ ಅವರು ತಮ್ಮ ವಾದ ಮಂಡನೆ ಅಂತ್ಯ ಮಾಡಿದರು. ಈಗ ಸ್ಪೀಕರ್ ಪರ ವಕೀಲ ತುಷಾರ್ ಮೆಹ್ತಾ ಅವರು ವಾದ ಮಂಡನೆ ಆರಂಭಿಸಿದರು.
3:52 PM, 26 Sep

ಶಾಸಕ ಶ್ರೀಮಂತ ಪಾಟೀಲ್ ಅವರು ಹೃದಯಾಘಾತವಾಗಿದೆ ಎಂದು ಹೇಳಿ ಆಸ್ಪತ್ರೆಗೆ ತೆರಳಿದರು. ಅವರು ಮೊದಲು ಚೆನ್ನೈಗೆ ತೆರಳಿ, ಅಲ್ಲಿಂದ ಮುಂಬೈಗೆ ತೆರಳಿ ಆಸ್ಪತ್ರೆಯಲ್ಲಿ ದಾಖಲಾದರು. ಅವರು ಕಳುಹಿಸಿದ್ದ ಪತ್ರದಲ್ಲಿ ಆಸ್ಪತ್ರೆಯ ವಿವರಗಳು ಇರಲಿಲ್ಲ, ಉತ್ತರಕ್ಕಾಗಿ ಕೇಳಿದರೆ ಸೂಕ್ತ ಉತ್ತರ ನೀಡಲಿಲ್ಲ ಹಾಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ- ಕಪಿಲ್ ಸಿಬಲ್
Advertisement
3:44 PM, 26 Sep

ಶಂಕರ್ ಕೆಪಿಜೆಪಿಯ ಏಕೈಕ ಶಾಸಕ ಆಗಿದ್ದರಿಂದ ಅವರು ಒಪ್ಪಿ ವಿಲೀನ ಮಾಡಿದ್ದರಿಂದ ಪ್ರಕ್ರಿಯೆ ಪೂರ್ಣವಾಗಿದೆ. ಇದನ್ನು ಸ್ಪೀಕರ್ ಒಪ್ಪಿಯೇ ಅವರಿಗೆ ಕಾಂಗ್ರೆಸ್ ಪಕ್ಷದ ಜಾಗದಲ್ಲಿಯೇ ಆಸನದ ವ್ಯವಸ್ಥೆ ಮಾಡಿದ್ದರು ಎಂದು ಕಪಿಲ್ ಸಿಬಲ್ ವಾದಿಸಿದರು.
3:43 PM, 26 Sep

ಆರ್.ಶಂಕರ್ ಕುರಿತು ವಾದ ವಿವಾದ ನಡೆಯುತ್ತಿದ್ದು, ಆರ್.ಶಂಕರ್ ತಮ್ಮ ಪಕ್ಷವನ್ನು ವಿಲೀನ ಮಾಡಿ ಕಾಂಗ್ರೆಸ್‌ನವರಾಗಿದ್ದಾರೆ ಎಂದು ಕಪಿಲ್ ಸಿಬಲ್ ವಾದಿಸಿದರೆ. ಶಂಕರ್ ಪರ ವಕೀಲರು ಪಕ್ಷವನ್ನು ವಿಲೀನ್ ಮಾಡಿಲ್ಲ ಎಂದು ವಾದಿಸುತ್ತಿದ್ದಾರೆ.
3:33 PM, 26 Sep

ರಾಜೀನಾಮೆ ಸಲ್ಲಿಸಿದ ಮೊದಲ ದಿನ ಸ್ಪೀಕರ್ ಕಚೇರಿಯಲ್ಲಿಯೇ ಇದ್ದರು, ಆ ನಂತರ ಅವರು ಆಸ್ಪತ್ರೆಗೆ ತೆರಳಿದಾಗ ಇವರು ರಾಜೀನಾಮೆ ನೀಡಲು ಬಂದರು, ಸ್ಪೀಕರ್ ಇಲ್ಲದನ್ನು ನೋಡಿ, ನಾವು ಬರುವುದು ಗೊತ್ತಾಗಿ ಸ್ಪೀಕರ್ ಹೊರಗೆ ಹೋಗಿದ್ದಾರೆ ಎಂದು ಹೇಳಿದರು- ಕಪಿಲ್ ಸಿಬಲ್
3:32 PM, 26 Sep

ಅನರ್ಹ ಶಾಸಕರು ತಾವು ಈಗಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇರುವುದಾಗಿ ಹೇಳುತ್ತಾರೆ. ಹಾಗಿದ್ದರೆ ವ್ಹಿಪ್ ನೀಡಿದಾಗ ಅವರೇಕೆ ಬರಲಿಲ್ಲ, ಕಾಂಗ್ರೆಸ್‌ನ ಬೇರೆ ಸಭೆಗಳಿಗೆ ಏಕೆ ಬರಲಿಲ್ಲ- ಕಪಿಲ್ ಸಿಬಲ್
3:31 PM, 26 Sep

ರಾಜ್ಯಸಭೆಯ ಸದಸ್ಯರೊಬ್ಬರು ರಾಜೀನಾಮೆ ನೀಡಿದ ಶಾಸಕರನ್ನು ಒಟ್ಟಿಗೆ ವಿಶೇಷ ವಿಮಾನದಲ್ಲಿ ಮುಂಬೈಗೆ ಕರೆದುಕೊಂಡು ಹೋಗಿ ಪಂಚತಾರಾ ಹೊಟೆಲ್‌ನಲ್ಲಿ ಇರಿಸಿದ್ದರು, ಇದು ಏನನ್ನು ಸೂಚಿಸುತ್ತದೆ- ಕಪಿಲ್ ಸಿಬಲ್ ಪ್ರಶ್ನೆ
Advertisement
3:28 PM, 26 Sep

ಶಾಸಕ ಪ್ರವೇಶಿಸಿದ್ದ ವಿಧಾನಸಭೆ ಅವಧಿಯು ಮುಗಿಯುವವರೆಗೆ ಅನರ್ಹತೆ ಜಾರಿಯಲ್ಲಿರುತ್ತದೆ. ಈಗ ಉಪಚುನಾವಣೆಗೆ ಅವಕಾಶ ನೀಡಿದರೆ ರಾಜೀನಾಮೆಗೂ ಅನರ್ಹತೆಗೂ ವ್ಯತ್ಯಾಸ ಇರುವುದಿಲ್ಲ- ಕಪಿಲ್ ಸಿಬಲ್
3:25 PM, 26 Sep

ಕೆಪಿಜೆಪಿಯಿಂದ ಗೆದ್ದಿದ್ದ ಆರ್.ಶಂಕರ್ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿದ ನಂತರವೇ ಅವರು ಸಚಿವರಾಗಿದ್ದರು. ಸ್ಪೀಕರ್ ಅವರೇ ತೃಪ್ತಿದಾಯಕ ದಾಖಲೆ ಸಲ್ಲಿಸುವಂತೆ ಹೇಳಿದ್ದರು- ಕಪಿಲ್ ಸಿಬಲ್
3:24 PM, 26 Sep

ತಮಿಳುನಾಡಿನ ಪ್ರಕರಣ ಉಲ್ಲೇಖಿಸಿದ ಕಪಿಲ್ ಸಿಬಲ್, ನ್ಯಾಯಾಲಯವು ಸ್ಪೀಕರ್ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದನ್ನು ಉಲ್ಲೇಖಿಸಿದರು.
3:20 PM, 26 Sep

ವಿಶ್ವಾಸಮತ ಯಾಚನೆ ವೇಳೆ ಎಲ್ಲ ಶಾಸಕರು ಸದನದಲ್ಲಿ ಹಾಜರಿರಬೇಕು, ಈ ಸಂದರ್ಭದಲ್ಲಿ ಹೊರಡಿಸುವ ವ್ಹಿಪ್ ಎಲ್ಲ ಶಾಸಕರಿಗೂ ಅನ್ವಯವಾಗುತ್ತದೆ. ಆದರೆ ಅದನ್ನು ಉಲ್ಲಂಘಿಸಿ ಈ ಶಾಸಕರು ಗುಂಪಿನಲ್ಲಿ ತೆರಳಿ ರಾಜೀನಾಮೆ ನೀಡಿದ್ದಾರೆ- ಕಪಿಲ್ ಸಿಬಲ್
3:16 PM, 26 Sep

ರಾಜೀನಾಮೆಯ ಪೂರ್ಣ ಪ್ರಕ್ರಿಯೆಯನ್ನು ಸ್ಪೀಕರ್ ಅವರು ರೆಕಾರ್ಡ್ ಮಾಡಿಸಿದ್ದಾರೆ. ಅದನ್ನು ಪರಿಶೀಲನೆ ಮಾಡಬೇಕಾಗಿದೆ. ತಜ್ಞರ ವರದಿ ಸಹ ಪಡೆಯಬೇಕಾಗಿದೆ - ಕಪಿಲ್ ಸಿಬಲ್
3:15 PM, 26 Sep

ಸಂವಿಧಾನದ 10 ನೇ ಅನುಚ್ಛೇಧದ ಅನ್ವಯ ಶಾಸಕರನ್ನು ಅನರ್ಹಗೊಳಿಸಲಾಗಿದೆ. ಅನರ್ಹ ಮಾಡಬೇಕಾದರೆ ಎಲ್ಲ ನಿಯಮಗಳನ್ನು ಅನುಸರಿಸಲಾಗಿದೆ-ಕಪಿಲ್ ಸಿಬಲ್
3:08 PM, 26 Sep

ಒಂದು ಪಕ್ಷದಿಂದ ಟಿಕೆಟ್ ಪಡೆದು ಆಯ್ಕೆಯಾದ ಮೇಲೆ ಅವರು ಸರ್ಕಾರದ ಭಾಗ ಅವರಿಗೆ ವ್ಹಿಪ್ ನೀಡಿದೆ ಎಂಬ ಕಾರಣಕ್ಕೆ ಅಲ್ಲದಿದ್ದರೂ ಸರ್ಕಾರ ಉಳಿಸಿಕೊಳ್ಳಲಾದರೂ ವಿಶ್ವಾಸಮತ ಯಾಚನೆಗೆ ಹಾಜರಾಗಬೇಕು- ಕಪಿಲ್ ಸಿಬಲ್
3:07 PM, 26 Sep

ಪಂಕ್ಷಾತರ ಸಂವಿಧಾನಿಕ ಪಾಪ. ಅನರ್ಹತೆ ಆಗುವಂತ ತಪ್ಪು ಮಾಡಿ ಅನರ್ಹ ಆದವರಿಗೆ ಶಿಕ್ಷ ನೀಡದಿದ್ದರೆ ಅನರ್ಹ ಮಾಡಿದ್ದಕ್ಕೆ, ಅನರ್ಹತೆ ಮಾಡುವ ಅಧಿಕಾರ ನೀಡಿದ್ದಕ್ಕೆ ಅರ್ಥವಿರುವುದಿಲ್ಲ- ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್

English summary
Disqualified MLAs application hearing going on in Supreme court today. Kapil Sibal argued in favor of Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X