ಅತಿ ಹೆಚ್ಚು ಸಾಲ ಮಾಡಿದ್ದು ಮೋದಿ ಸಾಧನೆ : ದಿಗ್ವಿಜಯ್
ನವದೆಹಲಿ, ಅ.18 : "ಗುಜರಾತ್ ಇತರ ರಾಜ್ಯಗಳಿಗೆ ಮಾದರಿಯಾಗಲು ಸಾಧ್ಯವಿಲ್ಲ. ದೇಶದಲ್ಲಿ ಅತಿ ಹೆಚ್ಚು ಸಾಲ ಹೊಂದಿರುವ ರಾಜ್ಯ ಗುಜರಾತ್' ಎಂದು ಹೇಳುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ. ಮೋದಿ ಪ್ರಧಾನಿಯಾದರೆ ದೇಶಕ್ಕೂ ಇದೇ ಸ್ಥಿತಿ ಬರುತ್ತದೆ ಎಂದು ಕುಟುಕಿದ್ದಾರೆ.
ನವದೆಹಲಿಯಲ್ಲಿ ಶುಕ್ರವಾರ ಮಾತನಾಡಿದ ದಿಗ್ವಿಜಯ್ ಸಿಂಗ್, ನರೇಂದ್ರ ಮೋದಿ ಗುಜರಾತ್ ರಾಜ್ಯ ದೇಶಕ್ಕೆ ಮಾದರಿ ಎಂದು ಹೇಳುತ್ತಾರೆ. ಆದರೆ, ದೇಶದಲ್ಲಿ ಅತಿ ಹೆಚ್ಚು ಸಾಲ ಹೊಂದಿರುವ ರಾಜ್ಯ ಗುಜರಾತ್, ಇದು ಬೇರೆ ರಾಜ್ಯಗಳಿಗೆ ಹೇಗೆ ಮಾದರಿ ಆಗುತ್ತದೆ? ಎಂದು ಪ್ರಶ್ನಿಸಿದರು. ನರೇಂದ್ರ ಮೋದಿ ಪ್ರಧಾನಿಯಾದರೆ ದೇಶವೂ ಸಾಲದಲ್ಲಿ ಮುಳುಗುತ್ತದೆ ಎಂದು ಹೇಳಿದರು.

ಗುಜರಾತ್ ಸರ್ಕಾರ ಅತೀ ಹೆಚ್ಚು ಸಾಲವನ್ನು ಹೊಂದಿದೆ. ಇದರ ಹೊಣೆ ಪ್ರತಿಯೊಬ್ಬ ಗುಜರಾತ್ ಜನರ ಮೇಲಿದೆ. ರಾಜ್ಯದಲ್ಲಿನ ಪ್ರತಿ ಪ್ರಜೆಯೂ ದೇಶದ ಇನ್ನಿತರ ರಾಜ್ಯಗಳಲ್ಲಿರುವ ಪ್ರಜೆಗಳಿಗಿಂತ ಹೆಚ್ಚಿನ ಸಾಲ ಪಾವತಿ ಮಾಡಬೇಕಾಗಿದೆ ಎಂದು ದಿಗ್ವಿಜಯ್ ವಿಶ್ಲೇಷಿಸಿದ್ದಾರೆ.
ಗುಜರಾತ್ ಅಭಿವೃದ್ಧಿ ಬಗ್ಗೆ ಮಾತನಾಡುವ ಮೋದಿ, ಸಾಲದ ಬಗ್ಗೆ ಪ್ರತಿಕ್ರಿಯೆ ನೀಡಬೇಕು ಎಂದು ದಿಗ್ವಿಜಯ್ ಸಿಂಗ್ ಆಗ್ರಹಿಸಿದ್ದಾರೆ. ಗುಜರಾತ್ ಅಭಿವೃದ್ಧಿಯಾಗಿರುವುದು ಅಲ್ಲಿನ ಜನರಿಂದ ಮೋದಿಯಿಂದಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿಂಗ್ ಹೇಳಿದರು.
ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವ ಟಾಪ್ 5 ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ ಹೆಸರಿಲ್ಲ. ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವ 7 ರಾಜ್ಯಗಳ ಪೈಕಿ 5 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಆದರೂ ಮೋದಿ ಗುಜರಾತ್ ಮಾದರಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ ಸಿಂಗ್ ತಿಳಿಸಿದ್ದಾರೆ.
Gujarat Govt has highest per capita Debt Liability which means every citizen of Gujarat has more debt to pay than citizen of any other State
— digvijaya singh (@digvijaya_28) October 18, 2013
Gujarat Model of Development has been trumpeted by Modi Acolytes.I am going to put some facts sourced from Planning Commission ,one each day
— digvijaya singh (@digvijaya_28) October 17, 2013












Click it and Unblock the Notifications