ಮೋದಿ ಬಳಿ ಮಸ್ತಕಾಭಿಷೇಕಕ್ಕೆ 500 ಕೋಟಿ ಕೇಳಿದ ದೇವೇಗೌಡ

Subscribe to Oneindia Kannada

ನವದೆಹಲಿ, ಫೆಬ್ರವರಿ 3: ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ನರೇಂದ್ರ ಮೊದಿಯವರನ್ನು ಶುಕ್ರವಾರ ದೆಹಲಿಯಲ್ಲಿ ಭೇಟಿಯಾಗಿದ್ದರು. ಈ ವೇಳೆ ಪ್ರಧಾನಿ ಬಳಿ ಗೌಡರು ಶ್ರವಣಬೆಳಗೊಳ ಮಸ್ತಕಾಭಿಷೇಕಕ್ಕೆ 500 ಕೋಟಿ ನೀಡುವಂತೆ ಕೇಳಿಕೊಂಡಿದ್ದಾರೆ.

ಸಂಸದ ಮುದ್ದೇಹನುಮೇಗೌಡ ಜತೆ ಪ್ರಧಾನಿಯನ್ನು ಭೇಟಿಯಾದ ದೇವೇಗೌಡರು ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆಯೂ ಮನವಿ ಮಾಡಿದ್ದಾರೆ.[ಮೋದಿಜೀ, ಫಾರ್ಮರ್ಸ್ ಇಂಡಿಯಾ ಯೋಜನೆ ತನ್ನಿ: ದೇವೇಗೌಡ]

Devegowda demanded Rs. 500 cores to Shravanbelagola Mastakabhisheka

"ಈಗಾಗಲೇ ಕೃಷಿ ವಿಜ್ಞಾನಿಗಳು ಹಾಗೂ ಪರಿಸರ ತಜ್ಞರು ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ರೂಪಾಯಿ ಬೆಂಬಲ ಬೆಲೆ ನೀಡುವಂತೆ ಶಿಫಾರಸ್ಸು ಮಾಡಿದ್ದಾರೆ. ಅದರಂತೆ ಕೇಂದ್ರ ಬೆಂಬಲ ಬೆಲೆ ನೀಡಬೇಕು ಎಂದು ಹೇಳಿದ್ದೇನೆ. ತೆಂಗು ಬೆಳೆಗಾರರ ಸಮಸ್ಯೆಗಳು, ಅವರಿಗೆ ನೀಡಬೇಕಾಗಿರುವ ನೆರವುಗಳ ಬಗ್ಗೆಯೂ ಮಾನ್ಯ ಪ್ರಧಾನಿಯವರಿಗೆ ಮನವರಿಕೆ ಮಾಡಿದ್ದೇನೆ," ಎಂದು ಪ್ರಧಾನಿ ಭೇಟಿ ನಂತರ ದೇವೇಗೌಡರು ಸುದ್ದಿಗಾರರಿಗೆ ತಿಳಿಸಿದರು. ಶೀಘ್ರದಲ್ಲಿ ತೆಂಗು ಬೆಳೆಗಾರರ ಸಮಸ್ಯೆ ಪರಿಹಾರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.[ಬಿಎಸ್ವೈ ಅವರೇ , ನಾವೇನು ಕಡುಬು ತಿಂತಾ ಇರ್ತೀವಾ: ದೇವೇಗೌಡ]

Devegowda demanded Rs. 500 cores to Shravanbelagola Mastakabhisheka

ಮುಂದಿನ ವರ್ಷ ಅಂದರೆ 2018ರ ಫೆಬ್ರವರಿ18ರಿಂದ ಶ್ರವಣಬೆಳಗೊಳ ಮಸ್ತಕಾಭಿಷೇಕ ಆರಂಭವಾಗಲಿದೆ. ಭೇಟಿ ವೇಳೆ ಮಸ್ತಕಾಭಿಷೇಕಕ್ಕೆ ದೇವೇಗೌಡರು ಪ್ರಧಾನಿಯವರನ್ನು ಆಹ್ವಾನಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Prime Minister H D Devegowda met Prime Minister Narendra Modi today in New Delhi, demanded supportive price for coconut and Rs. 500 crores for Shravanabelagola Masthakabhisheka.
Please Wait while comments are loading...