2030ಕ್ಕೆ ರ ಹೊತ್ತಿಗೆ ಏಡ್ಸ್ ಮುಕ್ತ ಪೀಳಿಗೆ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 1: ಡಿಸೆಂಬರ್ 1 ವಿಶ್ವ ಏಡ್ಸ್ ದಿನ. ಇದು ಏಡ್ಸ್ ನಿಂದ ಪ್ರಾಣತೆತ್ತವರ ದಿನವೂ ಹೌದು. ಇದು ಸರ್ಕಾರ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿಗೆ ಏಡ್ಸ್ ಜಾಗೃತಿ ಮೂಡಿಸಲು ಇರುವ ಅವಕಾಶವೂ ಹೌದು. ಮಾನವ ಜೀವನವನ್ನು ಉತ್ತಮಗೊಳಿಸಿ 2030ರ ವೇಳೆಗೆ ಏಡ್ಸ್ ಮುಕ್ತ ಪೀಳಿಗೆ ನಿರ್ಮಾಣದ ಅವಶ್ಯಕತೆಯಿದೆ.

2030ರ ವೇಳೆಗೆ ಏಡ್ಸ್ ಹೇಗೆ ಮುಕ್ರವಾಗಿಸಬಹುದು ಎಂಬುದರ ಬಗ್ಗೆ ಅಮೇರಿಕಾ ರಾಯಭಾರತ್ವ ಭಾರತ ಸರ್ಕಾರ ಸೇರಿದಂತೆ ಅನೇಕ ಸಾಮುದಾಯಿಕ ಸಂಘಟನೆಗಳು, ವಕೀಲರು, ತಂತ್ರಜ್ಞರು ರೊಂದಿಗೆ ನವೆಂಬರ್ 30 ರಂದು ಚರ್ಚೆ ನಡೆಸಿದೆ.[ಏಡ್ಸ್ ಮನೋರೋಗಕಾರಿ, ಅರಿತರೆ ಸಹಕಾರಿ]

Demonetisation: 41% feel Modi government not planned well, Survey by The New Indian Express

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ರಾಯಭಾರಿ ಮೇರಿಕೇ ಕಾರ್ಲ್ಸನ್ ಈ ಸಾಂಕ್ರಾಮಿಕ ರೋಗದ ವಿರುದ್ಧ ಪ್ರಭಲವಾಗಿ ಹೋರಾಡಲು ಮತ್ತು ತಮ್ಮ ಗುರಿ ಸಾದಿಸಲು ಎಲ್ಲರ ಸಹಕಾರ ಅಗತ್ಯ, ಜೊತೆಗೆ ಭಾರತದಲ್ಲಿಯೂ ಏಡ್ಸ್ ಮುಕ್ತ ರಾಷ್ಟ್ರವನ್ನಾಗಿ ಮಾಡಲಾಗುತ್ತದೆ ಎಂದು ಹೇಳಿದರು.

ಏಡ್ಸ್ ನಿರ್ಮೂಲನೆಗೆ ಪ್ರೆಸಿಡೆನ್ಸಿ ಎಮರ್ಜೆನ್ಸಿ ಪ್ಲಾನ್ ಫಾರ್ ಏಡ್ಸ್ ರಿಲೀಫ್ (ಪಿಇಪಿಎಫ್ಎಆರ್) ಎಂಬ ಸಂಸ್ಥೆ ಸ್ಥಾಪಿಸಿ ಅಮೆರಿಕ ಸಂಯುಕ್ತ ಸಂಸ್ಥಾನ ಹೆಚ್ಚು ಹೂಡಿಕೆಯನ್ನು ಮಾಡಿದೆ, ಭಾರತ 300 ಮಿಲಿಯನ್ ಅಮೆರಿಕ ಡಾಲರ್ ಅನ್ನು ಕಾರ್ಯಕ್ರಮಕ್ಕೆ ನೀಡಿದ್ದು, ಈ ಹಣದಿಂದ ಒಟ್ಟಾಗಿ ಏಡ್ಸ್ ಸೊಂಕಿನ ವಿರುದ್ಧ ಮಾನವಜೀವನ ಉತ್ತಮಗೊಳಿಸಲು ದೇಶಗಳು ಕರಾರನ್ನು ಮಾಡಿಕೊಂಡಿವೆ.[ಡಿಸೆಂಬರ್ 1 ಏಡ್ಸ್ ದಿನಾಚರಣೆ : ಒಂದಿಷ್ಟು ಉಪಯುಕ್ತ ಮಾಹಿತಿ]

ಪ್ರಸ್ತುತ ಭಾರತ ಸರ್ಕಾರವು ಏಡ್ಸ್ ವಿರುದ್ಧ ಮಾನವ ಜೀವನ ಸುಧಾರಿಸಲು ಶ್ರಮಿಸುತ್ತಿದ್ದು, 2001 ರಿಂದಾಚೆಗೆ ಶೇ.66 ರಷ್ಟು ಎಚ್ ಐವಿ ಪೀಡಿತರು ಕಡಿಮೆಯಾಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದ್ದು, ಇದರಂತೆಯೇ ಪ್ರಪಂಚದಲ್ಲಿ ಭಾರತದ ರಾಷ್ಟ್ರೀಯ ಏಡ್ಸ್ ನಿಮೂರ್ಲನಾ ಕಾರ್ಯಕ್ರಮವು ಒಳ್ಳೆಯ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
To commemorate World AIDS Day, the U.S. Embassy on November 30, 2016 invited representatives from the Government of India, community-based organizations, technical partners, advocates and patients to participate in a discussion on how we can work together to end AIDS by 2030.
Please Wait while comments are loading...