ಸಾವನ್ನಪ್ಪಿದ ಯುವಕನ ಬಳಿ 30 ಪೇಜ್ ಸೂಸೈಡ್ ನೋಟ್

Posted By:
Subscribe to Oneindia Kannada

ನವದೆಹಲಿ, ಮೇ 12: ಸಂಸತ್ ಭವನದ ಸಮೀಪದಲ್ಲೇ ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ವಿಜಯ್ ಚೌಕ್ ಗೆ ಹತ್ತಿರವಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮಧ್ಯಪ್ರದೇಶದ ಶಿವಪುರಿಯ ನಿವಾಸಿಯಾದ ಈ ಯುವಕನ ಬಳಿ ಸೂಸೈಡ್ ನೋಟ್ ಹಾಗೂ ಬ್ಯಾಗ್ ವೊಂದು ಪತ್ತೆಯಾಗಿದೆ.

Delhi: Youth found hanging from tree near Parliament

ಮರಣೋತ್ತರ ಪರೀಕ್ಷೆಗಾಗಿ ಯುವಕನ ಶವವನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ನೀಡಲಾಗಿದ್ದು, ಅಟಾಪ್ಸಿ ವರದಿ ಬಂದ ಬಳಿಕ ಸಾವಿನ ಬಗ್ಗೆ ಇನ್ನಷ್ಟು ಮಾಹಿತಿ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಅತ್ಯಂತ ಹೆಚ್ಚು ಭದ್ರತೆ ಹೊಂದಿರುವ ವಿಜಯ್ ಚೌಕ್ ಹಾಗೂ ಸಂಸತ್ತಿನ ಸಮೀಪದಲ್ಲೇ ಇಂಥ ಕೃತ್ಯ ಜರುಗಿರುವುದು ಹುಬ್ಬೇರುವಂತೆ ಮಾಡಿದೆ.

ನೀಲಿ ಅಂಗಿ ಹಾಗೂ ಜೀನ್ಸ್ ಪ್ಯಾಂಟ್ ತೊಟ್ಟಿದ್ದ ವ್ಯಕ್ತಿಯನ್ನು 39 ವರ್ಷ ವಯಸ್ಸಿನ ರಾಮ್ ದಯಾಳ್ ವರ್ಮಾ ಎಂದು ಗುರುತಿಸಲಾಗಿದ್ದು, ಸಾಲದ ಸಮಸ್ಯೆಯಿಂದ ಬಳಲುತ್ತಿದ್ದ, ಹೀಗಾಗಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, 30 ಪುಟಗಳ ಆತ್ಮಹತ್ಯಾ ಪತ್ರದ ವಿವರಗಳನ್ನು ಅರ್ಥ ಮಾಡಿಕೊಳ್ಳಲು ಇನ್ನು ಹೆಚ್ಚಿನ ಸಮಯ ಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A youth allegedly committed suicide by hanging himself from a tree at high security Vijay Chowk area near Parliament in New Delhi on Thursday.
Please Wait while comments are loading...