ಮದುವೆಯಲ್ಲಿ ಸಂಬಂಧಿಕರನ್ನು ಮೆಚ್ಚಿಸಲು ಯುವತಿ ಮಾಡಿದ್ದೇನು?
ನವದೆಹಲಿ, ಅಕ್ಟೋಬರ್ 8: ಮದುವೆಯಲ್ಲಿ ಸಂಬಂಧಿಕರನ್ನು ಮೆಚ್ಚಿಸಲು ಒಳ್ಳೆಯ ಊಟ ಹಾಕಿಸುತ್ತಾರೆ, ಉತ್ತಮ ರೀತಿಯಲ್ಲಿ ಮಾತನಾಡುತ್ತಾರೆ ಆದರೆ ಕಾರು ಕಳ್ಳತನ ಮಾಡಿ ಮೆಚ್ಚಿಸುವುದನ್ನು ನೀವೆಲ್ಲಾದರೂ ನೋಡಿದ್ದೀರಾ ಆಶ್ಚರ್ಯವೆನಿಸಿದರೂ ಇದು ಸತ್ಯ.
ದೆಹಲಿಯ ಯುವತಿಯೊಬ್ಬಳು ಮದುವೆಯಲ್ಲಿ ಸಂಬಂಧಿಕರನ್ನು ಮೆಚ್ಚಿಸಲು ಕಾರೊಂದನ್ನು ದರೋಡೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
26 ವರ್ಷದ ಸಪ್ನ ಹಾಗೂ ವಂಶ್ ವರ್ಮಾ ಬಂಧಿತ ಆರೋಪಿಗಳು, ಇವರು ನೈಋತ್ಯ ದೆಹಲಿಯ ಲಾಜ್ ಪತ್ ನಗರದ ನಿವಾಸಿಗಳಾಗಿದ್ದಾರೆ, ಕಾರು ಕಳ್ಳತನ ಮಾಡುವಾಗ ಉಪಯೋಗಕ್ಕೆ ಬರಲಿ ಎಂದು ಪಿಸ್ತೂಲ್ ಒಂದನ್ನೂ ಕೂಡ ಖರೀದಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅ.3ರಂದು ಇಬ್ಬರು ಯುವತಿಯರು ಮತ್ತು ಒಬ್ಬ ಯುವಕ ಮೂಲ್ಚಾಂದ್ ಬಳಿ ಕ್ಯಾಬ್ ಚಾಲಕನಿಗೆ ಗನ್ ಪಾಯಿಂಟ್ನಿಂದ ಬೆದರಿಸಿ ಕಾರನ್ನು ದರೋಡೆ ಮಾಡಿದ್ದರು. ಕಾರು ದರೋಡೆ ಮಾಡಿದ ನಂತರ ವರ್ಮಾ ಮನೆಗೆ ತೆರಳಿ ಕಾರಿನ ನಂಬರ್ ಪ್ಲೇಟ್ ಬದಲಿಸಿದ್ದಾರೆ. ನಂತರ ಅಲ್ಲಿಂದ ಸಪ್ನಾಳ ಸಂಬಂಧಿಗಳ ಮನೆಗೆ ತೆರಳಿದ್ದಾರೆ. ಕಾರಿನಲ್ಲಿ ಅಳವಡಿಸಿದ್ದ ಜಿಪಿಎಸ್ನಿಂದ ಕಾರನ್ನು ಟ್ರೇಸ್ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸಪ್ನ ಹೇಳಿದ್ದಿಷ್ಟು: ನಾನು ಬಡ ಕುಟುಂಬದವಳು, 2009ರಲ್ಲಿ ನನ್ನ ಮದುವೆಯಾಗಿತ್ತು, ಆದರೆ ಗಂಡನ ಜತೆ ಮನಸ್ತಾಪವಾದ್ದರಿಂದ ಆತನನ್ನು ಬಿಟ್ಟು ವಂಶ್ ಜತೆ ಡೆಹ್ರಾಡೂನ್ನಲ್ಲಿ ವಾಸವಿದ್ದೆ.
ನನ್ನ ಊರಿನಲ್ಲಿ (ಜಾರ್ಖಂಡ್) ಸೋದರನ ಮದುವೆ ಇದ್ದರಿಂದ ನಮ್ಮ ಕುಟುಂಬದವರನ್ನು ಮೆಚ್ಚಿಸಲು ಗೆಳೆಯ ವಂಶ್ ಮತ್ತು ಕಾಜಲ್ ಜತೆ ಸೇರಿ ಈ ಕೃತ್ಯ ಎಸಗಿದೆ ಎಂದು ಹೇಳಿಕೆ ನೀಡಿದ್ದಾಳೆ.












Click it and Unblock the Notifications