ದೆಹಲಿಯಲ್ಲಿ 3.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ಕನಿಷ್ಠ ತಾಪಮಾನ

ನವದೆಹಲಿ, ಡಿಸೆಂಬರ್ 29: ದೆಹಲಿಯಲ್ಲಿ ಕನಿಷ್ಠ ತಾಪಮಾನ 3.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಸೋಮವಾರ ಕನಿಷ್ಠ ತಾಪಮಾನ 5.6 ಡಿಗ್ರಿ ಸೆಲ್ಸಿಯಸ್‌ಗೆ ಇತ್ತು, ಆದರೆ ಮಂಗಳವಾರ 3.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.ನಗರದಲ್ಲಿ ಮುಂದಿನ ಮೂರು ದಿನಗಳ ಕಾಲ ಶೀತ ಅಲೆಯ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಆಯಾನಗರ ಮತ್ತು ಲೋಧಿ ರಸ್ತೆಯಲ್ಲಿ ಕ್ರಮವಾಗಿ 2.6 ಮತ್ತು 2.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಸಫ್ದರ್ಜಂಗ್ ವೀಕ್ಷಣಾಲಯ ಹೇಳಿದೆ.

ಪಂಜಾಬಿನಲ್ಲಿ ಮಂಜು ಕವಿದಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹಾಗೆಯೇ ಕನಿಷ್ಠ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್, ಗರಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Delhi Weather: Cold Wave Grips City, Minimum Temperature At 3.5 Degrees

ದೆಹಲಿಯಲ್ಲಿ ಬೆಳಗ್ಗೆ 8.30ರವೇಳೆಗೆ 3.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದು, ಮುಂದಿನ 24 ಗಂಟೆಯೊಳಗೆ 2 ಡಿಗ್ರಿ ಸೆಲ್ಸಿಯಸ್‌ಗೆ ಇಳಿದರೂ ಆಶ್ಚರ್ಯವಿಲ್ಲ ಎನ್ನಲಾಗಿದೆ. ಇನ್ನೂ ಒಂದು ತಿಂಗಳು ಭೀಕರ ಚಳಿ ಕಾಡುವ ಸೂಚನೆ ಇದೆ. ಇತ್ತೀಚಿಗೆ ಕಾಣಿಸಿಕೊಂಡಿದ್ದ ಚಂಡಮಾರುತಗಳೂ ಕೂಡ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಹವಾಮಾನ ಇಲಾಖೆ ನೀಡಿರುವ ಡಿಸೆಂಬರ್‌ನಿಂದ ಫೆಬ್ರವರಿವರೆಗಿನ ಚಳಿಗಾಲದ ಮುನ್ಸೂಚನೆಯಲ್ಲಿ ಇನ್ನೂ ಒಂದು ತಿಂಗಳು ಚಳಿಯ ತೀವ್ರತೆ ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದೆ.

ಇತ್ತೀಚಿಗೆ ಕಾಣಿಸಿಕೊಂಡಿದ್ದ ಬುರೇವಿ ಚಂಡಮಾರುತದ (Burevi Cyclone) ಪ್ರಭಾವದಿಂದಾಗಿ ಕಳೆದ ವಾರ ರಾಜ್ಯದಲ್ಲಿ ಮೋಡದ ವಾತಾವರಣ ಕಂಡು ಬಂದಿತ್ತು.

ರಾಜ್ಯದ ಹಲವೆಡೆ ಮಳೆಯಾಗಿತ್ತು. ಆ ಸಂದರ್ಭದಲ್ಲಿ ಚಳಿ ವಾಡಿಕೆಗಿಂತ ಕೊಂಚ ಕಡಿಮೆಯೇ ಇತ್ತು. ಇದೀಗ ರಾಜ್ಯದಲ್ಲಿ ಒಣಹವೆ ಮುಂದುವರೆಯಲ್ಲಿದ್ದು ಚಳಿಯ ಪ್ರಮಾಣವೂ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+