• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈಶಾನ್ಯ ದೆಹಲಿ ಗಲಭೆ; ಶಾರೂಕ್ ಖಾನ್ ಬಂಧನ

|

ಲಕ್ನೋ, ಮಾರ್ಚ್ 03 : ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ವೇಳೆ ಪೊಲೀಸರಿಗೆ ಪಿಸ್ತೂಲ್ ತೋರಿಸಿದ್ದ ಶಾರೂಕ್ ಖಾನ್ ಬಂಧಿಸಲಾಗಿದೆ. ಶಾರೂಕ್ ಖಾನ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಮಂಗಳವಾರ ಉತ್ತರ ಪ್ರದೇಶದ ಬರೇಲಿಯಲ್ಲಿ ದೆಹಲಿ ಪೊಲೀಸರು ಶಾರೂಕ್ ಖಾನ್ ಬಂಧಿಸಿದ್ದಾರೆ. 8 ದಿನಗಳ ಬಳಿಕ ಆರೋಪಿ ಬಂಧನವಾಗಿದ್ದು, ದೆಹಲಿಗೆ ಕರೆದುಕೊಂಡು ಹೋಗಲಾಗುತ್ತಿದೆ. ದೆಹಲಿಯ ನಿವಾಸಿಯಾದ ಆತ ತಲೆಮರೆಸಿಕೊಂಡಿದ್ದ.

ದೆಹಲಿಯ ಗಲಭೆ; ಬಿಜೆಪಿ ನಾಯಕನ ಮನೆಗೆ ಬೆಂಕಿ

33 ವರ್ಷದ ಶಾರೂಕ್ ಖಾನ್ ಈಶಾನ್ಯ ದೆಹಲಿಯ ಜರ್ಫಾಬಾದ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧ ಹೋರಾಟ ನಡೆಯುವಾಗ ಪೊಲೀಸರಿಗೆ ಪಿಸ್ತೂಲ್ ತೋರಿಸಿದ್ದ. ಪೊಲೀಸರು ಆತನ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದರು.

ದೆಹಲಿ ಗಲಭೆ; 167 ಎಫ್‌ಐಆರ್, 885 ಜನರ ಬಂಧನ

ಫೆಬ್ರವರಿ 24ರಂದು ದೆಹಲಿಯಲ್ಲಿ ಗಲಭೆ ನಡೆಯುವಾಗ ಶಾರೂಕ್ ಖಾನ್ ಕಂಟ್ರಿ ಮೇಡ್ ಪಿಸ್ತೂಲ್ ಹಿಡಿದು ರಸ್ತೆಗೆ ಇಳಿದಿದ್ದ. ಪೊಲೀಸರು ಎದರು ಬಂದರೂ ಅವರಿಗೆ ಪಿಸ್ತೂಲ್ ತೋರಿಸಿದ್ದ, ಬಳಿಕ ಖಾಲಿ ಜಾಗಕ್ಕೆ ಗುಂಡು ಹಾರಿಸಲು ಪ್ರಯತ್ನ ನಡೆಸಿದ್ದ.

ದೆಹಲಿ ಗಲಭೆ; ವರದಿ ನೀಡಲು ಕಾಂಗ್ರೆಸ್‌ನಿಂದ ಸಮಿತಿ ರಚನೆ

ಶಾರೂಕ್ ಖಾನ್ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶಾರೂಕ್ ಬಂಧಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿತ್ತು.

English summary
Shahrukh Khan the man who pointed a gun at a policeman during Delhi violence has been arrested after 8 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X