• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿ ಗಲಭೆ; ಸರ್ಕಾರದ ಸಂತ್ರಸ್ತರ ಕೇಂದ್ರಕ್ಕೆ ಜನರ ಮೆಚ್ಚುಗೆ

|

ನವದೆಹಲಿ, ಮಾರ್ಚ್ 04 : ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ನೂರಾರು ಜನರು ಮನೆ ಕಳೆದುಕೊಂಡಿದ್ದಾರೆ. ಕಳೆದ 24 ಗಂಟೆಯಲ್ಲಿ ಸುಮಾರು 1 ಸಾವಿರ ಜನರು ಮುಸ್ತಾಫಾಬಾದ್‌ನಲ್ಲಿನ ಸಂತ್ರಸ್ತರ ಕೇಂದ್ರಕ್ಕೆ ಸೇರಿದ್ದಾರೆ ಎಂದು ದೆಹಲಿ ಸರ್ಕಾರ ಹೇಳಿದೆ.

ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧ ಹೋರಾಟಗಾರರ ನಡುವೆ ಆರಂಭವಾದ ಘರ್ಷಣೆ ನಂತರ ಕೋಮು ಗಲಭೆಯ ಸ್ವರೂಪ ಪಡೆದಿತ್ತು. ಹಿಂಸಾಚಾರದಲ್ಲಿ 47 ಜನರು ಮೃತಪಟ್ಟಿದ್ದರು. ಹಲವಾರು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ.

ಈಶಾನ್ಯ ದೆಹಲಿ ಗಲಭೆ; ಶಾರೂಕ್ ಖಾನ್ ಬಂಧನ

ದೆಹಲಿ ಸರ್ಕಾರ ಗಲಭೆಯಿಂದ ಸಂತ್ರಸ್ತರಾದವರಿಗೆ ನೆರವಾಗಲು ಕೇಂದ್ರಗಳನ್ನು ಆರಂಭಿಸಿದೆ. ಈ ಕೇಂದ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕವಾಗಿದ್ದು, ಕಳೆದ 24 ಗಂಟೆಯಲ್ಲಿ ಸುಮಾರು 1 ಸಾವಿರ ಜನರು ಕೇಂದ್ರಕ್ಕೆ ಸೇರಿದ್ದಾರೆ.

ದೆಹಲಿ ಹಿಂಸಾಚಾರ; ಚರಂಡಿಯಲ್ಲಿ 11 ಶವಗಳು ಪತ್ತೆ

ಸಂತ್ರಸ್ತರಿಗಾಗಿ ಆರಂಭಿಸಿರುವ ಕೇಂದ್ರದಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ನೀಡಲಾಗಿದೆ. ವೈದ್ಯರು, ಔಷಧಿಗಳು, ಆಹಾರ, ಬಟ್ಟೆ, ಶೌಚಾಲಯ, ಬೆಡ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ದೆಹಲಿ ಗಲಭೆ; 167 ಎಫ್‌ಐಆರ್, 885 ಜನರ ಬಂಧನ

ವೈದ್ಯಕೀಯ ನೆರವು ನೀಡಲಾಗುತ್ತಿದೆ

ವೈದ್ಯಕೀಯ ನೆರವು ನೀಡಲಾಗುತ್ತಿದೆ

ಮುಸ್ತಾಫಾಬಾದ್‌ ಸಂತ್ರಸ್ತರ ಕೇಂದ್ರದಲ್ಲಿ ಜನರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ವಿವಿಧ ಎನ್‌ಜಿಓಗಳ ಸಹಾಯದಿಂದ ಕೇಂದ್ರದಲ್ಲಿ ವೈದ್ಯಕೀಯ ನೆರವು ನೀಡಲಾಗುತ್ತಿದೆ. ತುರ್ತು ಸಂದರ್ಭಕ್ಕೆ ಬೇಕಾದ ಔಷಧಗಳನ್ನು ಸಂಗ್ರಹ ಮಾಡಲಾಗಿದೆ.

1000ಕ್ಕೂ ಅಧಿಕ ಜನರು ಸೇರ್ಪಡೆ

1000ಕ್ಕೂ ಅಧಿಕ ಜನರು ಸೇರ್ಪಡೆ

ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಿಂದ ಸಂತ್ರಸ್ತರಾದ ಶಿವಪುರಿ, ಮುಸ್ತಾಫಾಬಾದ್ ಸೇರಿದಂತೆ ಅಕ್ಕ-ಪಕ್ಕದ ಪ್ರದೇಶಗಳ 1 ಸಾವಿರ ಜನರು ಕಳೆದ 24 ಗಂಟೆಯಲ್ಲಿ ಕೇಂದ್ರಕ್ಕೆ ಸೇರ್ಪಡೆಗೊಂಡಿದ್ದಾರೆ. ಕೇಂದ್ರದಲ್ಲಿ ಜನರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ.

436 ಪ್ರಕರಣ ದಾಖಲು

436 ಪ್ರಕರಣ ದಾಖಲು

ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಕುರಿತು 436 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಇದುವರೆಗೂ 1400 ಜನರನ್ನು ವಶಕ್ಕೆ ಪಡೆಯಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿ 45 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಕಳೆದ ಆರು ದಿನಗಳಿಂದ ಯಾವುದೇ ಹಿಂಸಾಚಾರದ ಪ್ರಕರಣಗಳು ವರದಿಯಾಗಿಲ್ಲ.

ದೆಹಲಿ ಸರ್ಕಾರದಿಂದ ಕೇಂದ್ರ ಆರಂಭ

ದೆಹಲಿ ಸರ್ಕಾರದಿಂದ ಕೇಂದ್ರ ಆರಂಭ

ದೆಹಲಿ ಸರ್ಕಾರ ಗಲಭೆಗೆ ಪ್ರಚೋದನೆ ನೀಡುವಂತಹ ಭಾಷಣ ಮಾಡಿದರೆ, ಸಾಹಿತ್ಯಗಳನ್ನು ಹಂಚಿದರೆ ದೂರು ಕೊಡಲು ಕೇಂದ್ರವನ್ನು ತೆರೆದಿದೆ. ಪೋನ್ ನಂಬರ್ ಮತ್ತು ಈ-ಮೇಲ್ ಐಡಿಯನ್ನು ಜನರಿಗಾಗಿ ನೀಡಿದೆ.

English summary
Over 1,000 moved in Mustafabad relief camp in 24 hours. Relief camp has witnessed a massive response from the riot-affected victims of Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X