ದೆಹಲಿ ಹಿಂಸಾಚಾರ: ಎದೆ ನಡುಗಿಸುವ ನಾಲ್ಕು ವಿಡಿಯೋಗಳು
ನವದೆಹಲಿ, ಫೆಬ್ರವರಿ 25: ಸಿಎಎ-ಎನ್‌ಆರ್‌ಸಿ ಪರ ಮತ್ತು ವಿರುದ್ಧ ಪ್ರತಿಭಟನೆಗಳೆರಡೂ ಎಲ್ಲೆ ಮೀರಿ ಹಿಂಸಾಚಾರದ ರೂಪ ತಳೆದಿವೆ. ದೆಹಲಿಯಲ್ಲಿ ಕೆಲವುದಿನಗಳಿಂದ ನಡೆಯುತ್ತಿರುವ ಹಿಂಸಾಚಾರ ಎಲ್ಲೆ ಮೀರಿದ್ದು, ಈಗಾಗಲೇ ಏಳು ಮಂದಿ ಸಾವನ್ನಪ್ಪಿದ್ದಾರೆ.
Recommended Video
ಸಾಮಾಜಿಕ ಜಾಲತಾಣಗಳಲ್ಲಿ ದೆಹಲಿ ಹಿಂಸಾಚಾರದ ಅಸಂಖ್ಯ ಚಿತ್ರ, ವಿಡಿಯೋ, ಪೋಸ್ಟ್‌ಗಳು ಹರಿದಾಡುತ್ತಿವೆ. ಚಿತ್ರಗಳನ್ನು, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುವ ಬಹುತೇಕರು ಚಿತ್ರದ ಮೂಲಕ ಹಿಂಸಾಚಾರದ ಹೊಣೆಯನ್ನು ಒಂದು ಸಮುದಾಯ ಅಥವಾ ಒಂದು ಸಿದ್ದಾಂತ ಪಾಲಿಸುವವರ ಮೇಲೆ ದಾಟಿಸುವ ಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ ದೆಹಲಿ ಹಿಂಸಾಚಾರದ್ದು ಎಂದು ಹೇಳಲಾಗುತ್ತಿರುವ ಕೆಲವು ವಿಡಿಯೋಗಳು ಭಾರಿ ವೈರಲ್ ಆಗಿವೆ.
ಒಂದರಲ್ಲಿ ಕೆಂಪು ಬಣ್ಣದ ಟಿ-ಶರ್ಟ್ ಧರಿಸಿರುವ ಯುವಕನೊಬ್ಬ ಹಾಡು ಹಗಲೇ ಬಂದೂಕು ಹಿಡಿದುಕೊಂಡು ಲಾಠಿ ಹಿಡಿದ ಒಬ್ಬ ಪೊಲೀಸನತ್ತ ಗುರಿ ಹಿಡಿದು ಮುಂದೆ ಬಂದಿದ್ದಾನೆ. ಆತನನ್ನು ಪೊಲೀಸ್ ಪ್ರಶ್ನೆ ಮಾಡಿದಾಗ, ಪೊಲೀಸ್ ಅನ್ನು ತಳ್ಳಿ, ಪಕ್ಕಕ್ಕೆ ಶೂಟ್ ಮಾಡಿದ್ದಾನೆ.
— राजदेव सुथार(बीकानेर)TPN🇮🇳 (@PushpendraHind3) February 25, 2020 |
ಶೂಟ್ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ
ಹೀಗೆ ಶೂಟ್ ಮಾಡಿದ ಕೆಂಪು ಟೀ ಶರ್ಟ್ ವ್ಯಕ್ತಿಯ ಹೆಸರು ಶಾರುಖ್ ಖಾನ್ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
|
ಅರೆಜೀವವಾದ ಯುವಕರ ಮೇಲೆ ಪೊಲೀಸರ ದೌರ್ಜನ್ಯ
ಮತ್ತೊಂದು ವಿಡಿಯೋದಲ್ಲಿ ಏಟು ತಿಂದು ಅರೆಜೀವವಾಗಿರುವ, ಬಟ್ಟೆ ಹರಿದು, ಗಾಯಗೊಂಡು ರಕ್ತ ಒಸರುತ್ತಿರುವ ಐದು ಮಂದಿ ಯುವಕರು ರಸ್ತೆಯ ಮೇಲೆ ಮಲಗಿದ್ದಾರೆ, ಅವರನ್ನು ಪೊಲೀಸರು ಸುತ್ತುವರೆದಿದ್ದಾರೆ. ಒಬ್ಬ ಪೊಲೀಸ್ ಯುವಕನ ವಿಡಿಯೋ ಮಾಡುತ್ತಿದ್ದರೆ, ಮತ್ತೊಬ್ಬ ಹೊಡೆಯುತ್ತಿದ್ದಾನೆ, ಮತ್ತೊಬ್ಬ 'ವಂದೆ ಮಾತರಂ ಹಾಡು' ಎಂದು ಒತ್ತಾಯಿಸುತ್ತಿದ್ದಾನೆ, ಯುವಕನೊಬ್ಬ ಹುಚ್ಚನಂತೆ 'ಜನಗಣಮನ ಹೇಳುತ್ತಿದ್ದಾನೆ'. ಈ ವಿಡಿಯೋ ದೆಹಲಿಯ ಹಿಂಸಾಚಾರದ್ದೇ ಎಂಬ ಬಗ್ಗೆ ಇನ್ನೂ ಸ್ಪಷ್ಟಗೊಂಡಿಲ್ಲ.
|
'ಮುಸ್ಲೀಮರನ್ನು ಕೊಂದಾಗ ರಾಮನ ಹೆಸರು ಹೇಳುತ್ತೇವೆ'
ಮತ್ತೊಂದು ವಿಡಿಯೋ ಇನ್ನೂ ಭಯಾನಕವಾಗಿದ್ದು, ಯುವತಿಯೊಬ್ಬಳು ಈ ವಿಡಿಯೋ ಮಾಡಿದ್ದಾಳೆ. ವಿಡಿಯೋದಲ್ಲಿ ಚಿತ್ರ ಅಸ್ಪಷ್ಟವಾಗಿದೆ ಆದರೆ ದ್ವನಿ ಸ್ಪಷ್ಟವಾಗಿದೆ, 'ಜಬ್ ಮುಲ್ಲೆ ಕಾಟೇ ಜಾಯೇಂಗೆ ರಾಮ್ ರಾಮ್ ಚಿಲ್ಲಾಯೇಂಗೆ' (ರಾಮನ ಹೆಸರು ಕೂಗುತ್ತಾ ಮುಸ್ಲೀಮರನ್ನು ಕಡಿಯುತ್ತೇವೆ) ಎಂದು ವ್ಯಕ್ತಿಯೊಬ್ಬ ಜೋರಾಗಿ ಕೂಗುತ್ತಿದ್ದಾನೆ.
|
ಬೆಂಕಿ ಹಚ್ಚುವ ಗುಂಪು ಅಲ್ಲಾ ಹು ಅಕ್ಬರ್ ಘೋಷಣೆ
ಮನೆಯೊಂದರ ಮೇಲಿನಿಂದ ರೆಕಾರ್ಡ್ ಮಾಡಿದ ವಿಡಿಯೋದಲ್ಲಿ ದೊಡ್ಡ ಯುವಕರ ಗುಂಪೊಂದು ಬೀದಿಯ ಅಂಚಿನಲ್ಲಿ ನಿಂತಿದೆ, 'ನಾರೇ ಏ ತಟ್ಬೀರ್, ಅಲ್ಲಾಹು ಅಕ್ಬರ್' ಘೋಷಣೆಗಳನ್ನು ಕೂಗಲಾಗುತ್ತಿದೆ. ಆ ಗುಂಪು ನಿಂತಿರುವ ಸ್ವಲ್ಪ ಮುಂದೆ ಬೈಕ್ ಒಂದು ಹೊತ್ತಿ ಉರಿಯುತ್ತಿದೆ, ಮೂವರು ವ್ಯಕ್ತಿಗಳು ತೀವ್ರವಾಗಿ ಗಾಯಗೊಂಡ ವ್ಯಕ್ತಿಯೊಬ್ಬನನ್ನು ಆ ಗುಂಪಿನ ವಿರುದ್ಧ ದಿಕ್ಕಿಗೆ ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿದ್ದಾರೆ.

'ಪೊಲೀಸರು ನಮ್ಮೊಂದಿಗಿದ್ದಾರೆ' ಎಂದು ಸೆಲ್ಫಿ ವಿಡಿಯೋ
ಮತ್ತೊಂದು ಭಯಾನಕ ವಿಡಿಯೋದಲ್ಲಿ ಯುವಕನೊಬ್ಬ 'ಜೈ ಶ್ರೀರಾಮ್' ಘೋಷಣೆ ಕೂಗುತ್ತಾ ಕಲ್ಲು ತೂರಾಟ ಮಾಡುತ್ತಿದ್ದಾನೆ. ಮುಸ್ಲೀಮರ ಬಗ್ಗೆ ತೀರಾ ಅವಾಚ್ಯ ಶಬ್ದಗಳನ್ನು ಬಳಸುತ್ತಿರುವ ಆತ, ಅವರೆನ್ನಾ (ಮುಸ್ಲೀಮರನ್ನು) ನಿರ್ನಾಮ ಮಾಡುತ್ತೇವೆ ಎನ್ನುತ್ತಿದ್ದಾನೆ. ಸೆಲ್ಫಿ ವಿಡಿಯೋ ಮಾಡಿರುವ ಆತ, 'ನಮ್ಮೊಂದಿಗೆ ಪೊಲೀಸರು ಇದ್ದಾರೆ' ಎಂದು ಲಾಠಿ ಹಿಡಿದು ಕಲ್ಲು ತೂರಾಟ ಮಾಡುತ್ತಿರುವವರ ಜೊತೆ ನಿಂತಿರುವ ಪೊಲೀಸರನ್ನು ತೋರಿಸುತ್ತಾನೆ. ತೀರಾ ಅವಾಚ್ಯ ಶಬ್ದಗಳಿರುವ ಆ ವಿಡಿಯೋವನ್ನು ಇಲ್ಲಿ ನೀಡುತ್ತಿಲ್ಲ.

ಸತ್ಯ ಯಾವುದೆಂದು ನಿರ್ಧಾರ ಮಾಡಲಾಗದ ಸ್ಥಿತಿ
ದೆಹಲಿ ಹಿಂಸಾಚಾರದ ಕುರಿತ ಸಾವಿರಾರು ಚಿತ್ರಗಳು ಟ್ವಿಟ್ಟರ್, ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ. ದೆಹಲಿ ಹಿಂಚಾರಕ್ಕೆ ಸಾಮಾಜಿಕ ಜಾಲತಾಣ ತುಪ್ಪ ಸುರಿಯುತ್ತಿದೆ. ಒಂದು ಧರ್ಮದವರು ಮತ್ತೊಂದು ಧರ್ಮವನ್ನು ದೋಷಿಯನ್ನಾಗಿ ಬಿಂಬಿಸುವ ಪ್ರಯತ್ನಗಳನ್ನು ಚಿತ್ರಗಳು, ವಿಡಿಯೋಗಳ ಮೂಲಕ ಮಾಡುತ್ತಿರುವುದು ಸ್ಪಷ್ಟ. ಸತ್ಯ ಯಾವುದೆಂದು ನಿರ್ಧಾರ ಮಾಡಲಾಗದ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಸಭ್ಯ, ಶಾಂತಿಪ್ರಿಯ ನಾಗರೀಕನಾದವನು ಈ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಿಂದ ದೂರ ಇರುವುದೇ ಒಳಿತು.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications