ರಿಕ್ಷಾ ಖರೀದಿಸಲು ಮಗಳನ್ನೇ ಮಾರಿದ ಇವನೆಂಥ ಅಪ್ಪ!

Subscribe to Oneindia Kannada

ನವದೆಹಲಿ, ಮಾರ್ಚ್, 29: ಹಣಕ್ಕಾಗಿ ಮಕ್ಕಳನ್ನು ಮಾರಿಕೊಳ್ಳುವವರು ದೇಶದಲ್ಲಿ ಇದ್ದಾರೆ. ಅದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ. ಬಾಲಕಿಯನ್ನು ಹಣಕ್ಕೋಸ್ಕರ ಮದುವೆ ಮಾಡಿಕೊಟ್ಟ ಅಪ್ಪ ಮತ್ತು ಮದುವೆಯಾದ ಗಂಡ ಇಬ್ಬರು ಸದ್ಯ ಪೊಲೀಸರ ವಶದಲ್ಲಿದ್ದಾರೆ.

ದೇಶದಲ್ಲಿ ಬಾಲ್ಯವಿವಾಹ ತೆಡೆಗೆ ಹೋರಾಟ ನಡೆಯಲು ಆರಂಭವಾಗಿ ಅದೆಷ್ಟೋ ದಶಕಗಳೆ ಉರುಳಿದ್ದರೂ ಅನಿಷ್ಟ ಪದ್ಧತಿ ಮರೆಯಾಗಿಲ್ಲ. ರಾಷ್ಟ್ರ ರಾಜಧಾನಿಯಲ್ಲೇ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.[ಮೋದಿ ರಾಜ್ಯದಲ್ಲಿ ಮತ್ತೆ ಹುಟ್ಟಿಕೊಂಡ 'ಲವ್ ಜಿಹಾದ್']

girl

15 ವರ್ಷದ ಬಾಲಕಿಯನ್ನು 35 ವರ್ಷದವವನೊಂದಿಗೆ ಬಲವಂತವಾಗಿ ಮದುವೆ ಮಾಡಿಸಲಾಗಿದೆ. ಮದುವೆಯಾದ ಪುಣ್ಯಾತ್ಮನಿಗೆ ಎರಡು ಮಕ್ಕಳು ಸಹ ಇವೆ. ಹಣದ ಆಸೆಗೆ ಬಿದ್ದ ಹುಡುಗಿಯ ಅಪ್ಪ ಮಗಳನ್ನು 60 ಸಾವಿರ ರು. ಗೆ ಮದುವೆ ಮಾಡಿ ಕೊಟ್ಟಿದ್ದಾನೆ.

ವಾಯುವ್ಯ ದೆಹಲಿಯ ಭಲ್ಸ್ವಾ ಡೈರಿಯ ರಿಕ್ಷಾ ಚಾಲಕ ಒಬ್ಬ ತನ್ನ ಮಗಳನ್ನು ಹಣಕ್ಕೆ ಮಾರಿಕೊಂಡಿದ್ದಾನೆ. ಘಟನೆ ನಡೆದ ಮೇಲೆ ಬಾಲಕಿ ತನ್ನ ಅಪ್ಪನ ವಿರುದ್ಧವೇ ದೂರು ದಾಖಲಿಸಿದ್ದಾಳೆ. ನದುವೆಯಾಗಲು ತಿರಸ್ಕಾರ ಮಾಡಿದ್ದಕ್ಕೆ ಗಂಡನ ಮನೆಯವರು ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾಳೆ.[2 ಹೆಂಡತಿ ಅಥವಾ ಜೈಲು, ನಿಮ್ಮ ಆಯ್ಕೆ ಯಾವುದು?]

ರಿಕ್ಷಾ ಚಾಲಕ ತಂದೆ ಮತ್ತೊಂದು ರಿಕ್ಷಾ ಖರೀದಿ ಮಾಡಲು ಇಂಥ ಹೀನ ಕೆಲಸ ಮಾಡಿದ್ದಾನೆ. ಫೆಬ್ರವರಿಯಲ್ಲೇ ಈ ಬಗ್ಗೆ ದೂರು ದಾಖಲಾಗಿತ್ತು. ಹುಡುಗಿಯ ದೂರು ಆಧರಿಸಿ ಪೊಲೀಸರು ಆಕೆಯ ತಂದೆ ಮತ್ತು ಗಂಡನನ್ನು ಬಂಧಿಸಿದ್ದಾರೆ. ಮದುವೆಯಾದ ಮೇಲೆ ಬಾಲಕಿ ತನ್ನ ತಂದೆಯ ಮನೆಗೆ ಓಡಿ ಬಂದಿದ್ದಳು. ಅವಳನ್ನು ಮತ್ತೆ ವಾಪಸ್ ಕಳಿಸಲು ತಂದೆ 20 ಸಾವಿರ ಹಣ ಹೆ್ಚುವರಿ ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿರುಕುಳ ಸಹಿಸದ ಬಾಲಕಿ ತನ್ನ ಹಿರಿಯ ಅಕ್ಕನ ಮನೆಗೆ ತೆರಳಿದ ನಂತರ ಪೊಲೀಸರ ರಕ್ಷಣೆ ಕೋರಿದ್ದಾಳೆ. ಆದರೆ ಬಾಲಕಿ ಅಕ್ಕ ಈ ಮದುವೆ ಬಗ್ಗೆ ತನಗೇನು ಗೊತ್ತಿಲ್ಲ ಎಂದು ಹೇಳಿದ್ದಾಳೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
While the country still continues to fight child marriages, here comes a shocking news from the country's capital. A 15-year-old minor girl was forced to marry a 35-year-old father of two kids. The girl's father forced her to marry the man who is elder to her by 20 years in exchange of Rs 60,000 and an e-rickshaw at north-west Delhi's Bhalswa Dairy.
Please Wait while comments are loading...