• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಗಾರು ಆರಂಭದ ಬಳಿಕ ದೆಹಲಿಯಲ್ಲಿ ದಾಖಲೆಯ ಮಳೆ: ಟ್ರಾಫಿಕ್ ಜಾಮ್

|
Google Oneindia Kannada News

ನವದೆಹಲಿ, ಆಗಸ್ಟ್ 13: ದೆಹಲಿಯಲ್ಲಿ ಗುರುವಾರ ಬೆಳಗ್ಗೆ ಅತ್ಯಧಿಕ ಮಳೆಯಾಗಿದೆ. ಎಲ್ಲೆಲ್ಲೂ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಬುಧವಾರ ಮಧ್ಯರಾತ್ರಿಯಿಂದಲೇ ಮಳೆ ಆರಂಭವಾಗಿದೆ. ಗುರುವಾರ ಬೆಳಗ್ಗೆಯೂ ಮಳೆ ಮುಂದುವರೆದಿದೆ. ಮುಂಗಾರು ಆರಂಭವಾದ ಬಳಿಕ ಅತಿ ಹೆಚ್ಚು ಮಳೆ ದಾಖಲಾಗಿದೆ.

ಕರ್ನಾಟಕದ ಕರಾವಳಿ ಭಾಗದಲ್ಲಿ ತಗ್ಗಿದ ವರುಣನ ಆರ್ಭಟಕರ್ನಾಟಕದ ಕರಾವಳಿ ಭಾಗದಲ್ಲಿ ತಗ್ಗಿದ ವರುಣನ ಆರ್ಭಟ

ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಬೆಳಗ್ಗೆ 8.30ರವರೆಗೆ ನಗರದಲ್ಲಿ ಅಯನಗರದಲ್ಲಿ 99.2 ಮಿ.ಮೀ ಮಳೆ ಸುರಿದಿದೆ. ಪಲಮ್ ಹಾಗೂ ರಿಡ್ಜ್ ಹವಾಮಾನ ಕೇಂದ್ರದಲ್ಲಿ 96.6 ಮಿ.ಮೀ ಹಾಗೂ 84.6 ಮಿ.ಮೀನಷ್ಟು ಮಳೆಯಾಗಿದೆ.

ಸಫ್ದರ್‌ಜುಂಗ್‌ನಲ್ಲಿ ಮಳೆಯ ಪ್ರಮಾಣವೆಷ್ಟು?

ಸಫ್ದರ್‌ಜುಂಗ್‌ನಲ್ಲಿ ಮಳೆಯ ಪ್ರಮಾಣವೆಷ್ಟು?

ಸಫ್ದರ್‌ಜುಂಗ್‌ನಲ್ಲಿ 68 ಮಿ.ಮೀ ದಾಖಲೆಯ ಮಳೆಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಹೊಸ ರೈಲ್ವ ನಿಲ್ದಾಣ ಅಂಡರ್‌ಪಾಸ್‌ನಲ್ಲಿ ನೀರು ನಿಂತಿದೆ.

ದೆಹಲಿಯ ಹವಾಮಾನ ಹೇಗಿರಲಿದೆ?

ದೆಹಲಿಯ ಹವಾಮಾನ ಹೇಗಿರಲಿದೆ?

ಹವಾಮಾನ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ ಇಂದು ಮೋಡಕವಿದ ವಾತಾವರಣ ಮುಂದುವರೆಯಲಿದೆ. ಹಾಗೆಯೇ ಭಾರಿ ಮಳೆಯಾಗುವ ಸಾಧ್ಯತೆಯೂ ಇದೆ.

ಬುಧವಾರದವರೆಗೆ ಬಂದ ಮಳೆಯ ಪ್ರಮಾಣ

ಬುಧವಾರದವರೆಗೆ ಬಂದ ಮಳೆಯ ಪ್ರಮಾಣ

ಆಗಸ್ಟ್ 12ರವರೆಗೆ ನಗರದಲ್ಲಿ ಶೇ.72 ಮಳೆಯಾಗಿದೆ. ಇದು ಪ್ರತಿವರ್ಷ ಆಗಸ್ಟ್‌ನಲ್ಲಿ ಸುರಿಯುವ ಮಳೆಗಿಂತ ಇದು ಕಡಿಮೆಯಾಗಿದೆ. ಕಳೆದ 10 ವರ್ಷಗಳಲ್ಲ ಇಷ್ಟು ಕಡಿಮೆ ಮಳೆ ಬಂದಿರುವ ದಾಖಲೆ ಇಲ್ಲ. ಈ ಮುಂಗಾರಿನಲ್ಲಿ ದೆಹಲಿಯಲ್ಲಿ ಶೇ.35ರಷ್ಟು ಕಡಿಮೆ ಮಳೆಯಾಗಿದೆ.

ಮುಂದಿನ ಮೂರು ದಿನ ಮಳೆ ಪ್ರಮಾಣ ಹೇಗಿರಲಿದೆ?

ಮುಂದಿನ ಮೂರು ದಿನ ಮಳೆ ಪ್ರಮಾಣ ಹೇಗಿರಲಿದೆ?

ಮುಂದಿನ ಮೂರು ದಿನ ಮೋಡಕವಿದ ವಾತಾವರಣ ಮುಂದುವರೆಯಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಪ್ರದೇಶದಲ್ಲಿ ಚಂಡಮಾರುತದ ಭೀತಿ ಇದೆ. ಅರಬ್ಬಿ ಸಮುದ್ರದಿಂದ ನೈಋತ್ಯ ಮಾರುತಗಳು ಬಂಗಾಳಕೊಲ್ಲಿಯತ್ತ ಸಾಗಿದೆ. ಇವಲ್ಲವೂ ಹೆಚ್ಚು ತೇವಾಂಶವನ್ನು ಹೊಂದಿದೆ.

English summary
Heavy rain greeted Delhi residents to a pleasant morning Thursday, helping the city bring down its rain deficiency for the monsoon season, the lowest in 10 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X