• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಸಿರಾಡಿದರೆ ಎಚ್ಚರ: ದೆಹಲಿಯಲ್ಲಿ ಆಪಾಯಕಾರಿ ಮಟ್ಟಕ್ಕೆ ತಲುಪಿದ ಗಾಳಿ!

|
Google Oneindia Kannada News

ನವದೆಹಲಿ, ನವೆಂಬರ್ 12: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಮಿತಿ ಮೀರಿದೆ. ನಗರದಲ್ಲಿ ಕಳಪೆ ಗುಣಮಟ್ಟದ ಗಾಳಿಯಿಂದಾಗಿ ರಕ್ಷಿಸಿಕೊಳ್ಳುವುದಕ್ಕೆ ಶೇ.30ರಷ್ಟು ವಾಹನಗಳ ಬಳಕೆಯನ್ನು ಕಡಿತಗೊಳಿಸಬೇಕು ಎಂದು ಖಾಸಗಿ ಮತ್ತು ಸರ್ಕಾರಿ ಕಚೇರಿಗಳಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಸಲಹೆ ನೀಡಿದೆ. ಇದರ ಜೊತೆಗೆ ಮನೆಯಿಂದಲೇ ಕೆಲಸ ಮಾಡುವುದು, ಕಾರ್‌ಪೂಲಿಂಗ್ ಮಾಡುವುದು ಮತ್ತು ಪ್ರಾದೇಶಿಕ ಚಟುವಟಿಕೆಗಳನ್ನು ಉತ್ತಮಗೊಳಿಸಲು ತಿಳಿಸಿದೆ.

ಶುಕ್ರವಾರ ದೆಹಲಿಯಲ್ಲಿನ ಗಾಳಿಯ ಗುಣಮಟ್ಟ ಹದಗೆಡುವುದನ್ನು ನಿರ್ಬಂಧಿಸಲು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಅನುಷ್ಠಾನ ಸಭೆ ನಡೆಸಲಾಗಿತ್ತು. ಸಭೆಯ ನಂತರದಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯಿತು. ದೆಹಲಿಯಲ್ಲಿ ತೀವ್ರ ವಾಯು ಗುಣಮಟ್ಟ ಸೂಚ್ಯಂಕ (AQI) ಮಟ್ಟವನ್ನು ಗಮನಿಸಲಾಗಿದೆ. ಪ್ರಸ್ತುತ ಹವಾಮಾನ ಪರಿಸ್ಥಿತಿಗಳು ಮಾಲಿನ್ಯಕಾರಕಗಳ ಪ್ರಸರಣಕ್ಕೆ ಹೆಚ್ಚು ಪ್ರತಿಕೂಲವಾಗಿದೆ. ಬೆಳೆಗೆ ಬೆಂಕಿ ಹಚ್ಚುವ ನೆರೆಯ ರಾಜ್ಯಗಳ ಕ್ರಮದಿಂದ ಇಂಥ ಪರಿಸ್ಥಿತಿ ನಿರ್ಮಾಣವಾಗಿರುವ ಸಂಭವ ಹೆಚ್ಚಾಗಿದೆ ಎಂಬುದನ್ನು ಗಮನಿಸಲಾಗಿದೆ.

ಅಪಾಯಕಾರಿ ಹಂತಕ್ಕೆ ತಲುಪಿದ ದೆಹಲಿಯ ವಾಯು ಗುಣಮಟ್ಟಅಪಾಯಕಾರಿ ಹಂತಕ್ಕೆ ತಲುಪಿದ ದೆಹಲಿಯ ವಾಯು ಗುಣಮಟ್ಟ

ದೆಹಲಿಯ ಜನರು ತಮ್ಮ ಸಾಮಾನ್ಯವಾಗಿ ಹೊರಗೆ ತಿರುಗಾಡುವುದನ್ನು ಕಡಿಮೆಗೊಳಿಸಬೇಕು. ನಗರದಲ್ಲಿ ಅಪಾಯಕಾರಿ ಹಂತಕ್ಕೆ ತಲುಪಿರುವ ಗಾಳಿಗೆ ಒಡ್ಡಿಕೊಳ್ಳದಿರಲು ಸಾಧ್ಯವಾದಷ್ಟು ಪ್ರಯತ್ನಿಸಬೇಕು ಎಂದು ಸೂಚಿಸಲಾಗಿದೆ. ಕಳೆದ ನವೆಂಬರ್ 8ರ ಆದೇಶದಲ್ಲಿ ಸೂಚಿಸಿರುವಂತೆ ವಾಯು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಕಠಿಣಗೊಳಿಸಲು ಶುಕ್ರವಾರದ ಸಭೆಯಲ್ಲಿ ನಿರ್ಧರಿಸಲಾಗಿದೆ.

ದೆಹಲಿ ಮಾಲಿನ್ಯ ನಿಯಂತ್ರಣಕ್ಕೆ ಈ ಕ್ರಮಗಳು ಅಗತ್ಯ

ದೆಹಲಿ ಮಾಲಿನ್ಯ ನಿಯಂತ್ರಣಕ್ಕೆ ಈ ಕ್ರಮಗಳು ಅಗತ್ಯ

ವಾಯು ಮಾಲಿನ್ಯ ಬಿಕ್ಕಟ್ಟನ್ನು ನಿಯಂತ್ರಿಸಲು ದೆಹಲಿ-ಎನ್‌ಸಿಆರ್‌ನಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ ಜಾರಿಗೊಳಿಸಿದ 'ತೀವ್ರ' ಕ್ರಮಗಳನ್ನು ತಕ್ಷಣವೇ ಜಾರಿಗೆ ತರಲು ಉಪಸಮಿತಿ ರಚಿಸಲಾಗಿದೆ. ಎಲ್ಲಾ ಹಾಟ್ ಮಿಕ್ಸ್ ಪ್ಲಾಂಟ್‌ಗಳು ಮತ್ತು ಸ್ಟೋನ್ ಕ್ರಷರ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಜನಸಂದಣಿಯಿಲ್ಲದ ಸಮಯದಲ್ಲಿ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಭಿನ್ನ ದರಗಳನ್ನು ಜಾರಿಗೊಳಿಸುವ ಮೂಲಕ ಸಾರ್ವಜನಿಕ ಸಾರಿಗೆ ಸೇವೆಗಳಿಗೆ ಉತ್ತೇಜನ ನೀಡಲಾಗಿದೆ.

ಕಲ್ಲಿದ್ದಲು ಆಧಾರಿತ ಘಟಕಗಳ ಕಾರ್ಯಾಚರಣೆಯನ್ನು ಕಡಿಮೆ ಮಾಡುವುದು. ಅನಿಲ ಆಧಾರಿತ ಸ್ಥಾವರಗಳಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡುವುದಕ್ಕೆ ಸೂಚಿಸಲಾಗಿದೆ. ಇದರ ಜೊತೆಗೆ 'ಮಧ್ಯಮ', 'ಕಳಪೆ' ಮತ್ತು 'ಅತ್ಯಂತ ಕಳಪೆ' ವರ್ಗಗಳ ಅಡಿಯಲ್ಲಿ ಕ್ರಮಗಳನ್ನು ಜಾರಿಗೊಳಿಸಲಾಗಿದೆ. "ಸಂಬಂಧಿತ ಏಜೆನ್ಸಿಗಳು, ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ ಪ್ರಕಾರ 'ತುರ್ತು' ವಿಭಾಗದ ಅಡಿಯಲ್ಲಿ ಕ್ರಮಗಳ ಅನುಷ್ಠಾನಕ್ಕೆ ಸಂಪೂರ್ಣ ಸಿದ್ಧವಾಗಿರಬೇಕು," ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ರಾಷ್ಟ್ರ ರಾಜಧಾನಿಯಲ್ಲಿ ವಾಯುವಿನ ಗುಣಮಟ್ಟ

ರಾಷ್ಟ್ರ ರಾಜಧಾನಿಯಲ್ಲಿ ವಾಯುವಿನ ಗುಣಮಟ್ಟ

ಶುಕ್ರವಾರದ ಹೊತ್ತಿಗೆ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು "ಅತ್ಯಂತ ಕಳಪೆ" ಮಟ್ಟದಿಂದ ಸುಧಾರಿಸಿದಂತೆ ಗೋಚರಿಸಿತು. ರಾಷ್ಟ್ರ ರಾಜಧಾನಿಯನ್ನು ಆವರಿಸಿರುವ ಹೊಗೆ ಮತ್ತು ಮಬ್ಬಿನ ದಟ್ಟವಾದ ಪದರದಿಂದ ಜನರು ಜಾಗೃತರಾದರು. ಸಿಸ್ಟಂ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (SAFAR) ಪ್ರಕಾರ ದೆಹಲಿಯಲ್ಲಿ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 390 ಆಗಿತ್ತು. ಸಂಜೆ 4 ರ ಹೊತ್ತಿಗೆ ದೆಹಲಿಯಲ್ಲಿ 24-ಗಂಟೆಗಳ ಸರಾಸರಿ AQI 471 ಆಗಿತ್ತು. ಇದು ಈ ಋತುವಿನಲ್ಲೇ ಅತ್ಯಂತ ಕಳಪೆ ಗುಣಮಟ್ಟ ಎಂದು ದಾಖಲಾಗಿದ್ದು, ಗುರುವಾರ ಅದೇ ವಾಯು ಗುಣಮಟ್ಟ ಸೂಚ್ಯಂಕ 411 ಆಗಿತ್ತು.

ಉಸಿರಾಡುವ ಗಾಳಿ ಗುಣಮಟ್ಟ ಹೀಗೆ ಇರಬೇಕು

ಉಸಿರಾಡುವ ಗಾಳಿ ಗುಣಮಟ್ಟ ಹೀಗೆ ಇರಬೇಕು

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹಾಳಾಗಿ ಹೋಗಿದ್ದು, ಇಲ್ಲಿ ಗಾಳಿಯೇ ವಿಷಾನಿಲವಾಗಿ ಪರಿವರ್ತನೆ ಆಗಿ ಬಿಟ್ಟಿದೆ. ಹಾಗಿದ್ದರೆ ಗಾಳಿಯ ಗುಣಮಟ್ಟದ ಪ್ರಮಾಣ ಎಷ್ಟಿರಬೇಕು ಎಂದು ನೋಡುವುದಾದರೆ,

- 00-50 ಉತ್ತಮ

- 51-100 ತೃಪ್ತಿದಾಯಕ

- 101-200 ಮಧ್ಯಮ

- 201-300 ಕಳಪೆ

- 301-400 ಅತಿಕಳಪೆ

- 401-500 ಅಪಾಯಕಾರಿ

- 500 ನಂತರ ಅತಿ ಅಪಾಯಕಾರಿ

ಸದ್ಯ ದೆಹಲಿಯಲ್ಲಿನ ವಾಯುಮಾಲಿನ್ಯದ ಪ್ರಮಾಣ ಅತಿ ಅಪಾಯಕಾರಿ ಮಟ್ಟವನ್ನೂ ಕೂಡಾ ಮೀರಿ ಹೋಗಿದೆ.

ಉಸಿರಾಟ, ಶ್ವಾಸಕೋಶ ಸಮಸ್ಯೆಗೆ ತುತ್ತಾಗುವ ಭೀತಿಯಲ್ಲಿ ಜನ

ಉಸಿರಾಟ, ಶ್ವಾಸಕೋಶ ಸಮಸ್ಯೆಗೆ ತುತ್ತಾಗುವ ಭೀತಿಯಲ್ಲಿ ಜನ

ಕಳೆದ ಎರಡು ಮೂರು ದಿನಕ್ಕೆ ಹೋಲಿಸಿದರೆ ದೆಹಲಿಯಲ್ಲಿ ಇಂದು ಮತ್ತೆ ವಾತಾವರಣ ಹದಗೆಟ್ಟು ಹೋಗಿದೆ. ವಾಯು ಮಾಲಿನ್ಯದಿಂದ ಗಾಳಿ ಗುಣಮಟ್ಟ ಮತ್ತಷ್ಟು ಹಾಳಾಗಿರುವ ಬಗ್ಗೆ ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಆಂಡ್ ವೆದರ್ ಫಾರಕಾಸ್ಟಿಂಗ್ ಆಂಡ್ ರಿಸರ್ಚ್ ತಿಳಿಸಿದೆ. ಅಲ್ಲದೇ ಜನರಲ್ಲಿ ವಾಯುಮಾಲಿನ್ಯದಿಂದ ಉಸಿರಾಟ ತೊಂದರೆ, ಶ್ವಾಸಕೋಶದ ಸಮಸ್ಯೆ ಹಾಗೂ ಹೃದಯಾಘಾತದ ಭೀತಿಯನ್ನು ಎದುರಿಸುತ್ತಾರೆ.

English summary
Delhi Record Worst Air Quality; Offices Advised To Cut Down Vehicle Use in City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X