ದೆಹಲಿ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಕಿರಣ್ ಬೇಡಿ
ನವದೆಹಲಿ, ಜ.15: ಮಾಜಿ ಐಪಿಎಸ್ ಅಧಿಕಾರಿ, ಭ್ರಷ್ಟಾಚಾರ ವಿರೋಧ ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಕಿರಣ್ ಬೇಡಿ ಅವರು ಗುರುವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ದೆಹಲಿ ಚುನಾವಣೆಗೆ ದಿನಗಣನೆ ಆರಂಭವಾಗುವ ಸಂದರ್ಭದಲ್ಲಿ ಕಿರಣ್ ಬೇಡಿ ಅವರ ಸೇರ್ಪಡೆ ಕುತೂಹಲ ಕೆರಳಿಸಿದೆ.
ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಿರಣ್ ಬೇಡಿ ಅವರು ಕಮಲ ಪಕ್ಷ ಸೇರಿದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ಅರುಣ್ ಜೇಟ್ಲಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.ಚುನಾವಣೆಗೂ ಮುನ್ನ ಬೇಡಿ ಅವರ ಸೇರ್ಪಡೆ ಬಿಜೆಪಿ ದೆಹಲಿ ಘಟಕಕ್ಕೆ ಹೆಚ್ಚಿನ ಬಲ ತಂದಿದೆ ಎಂದು ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.

ದೆಹಲಿ ಸಿಎಂ ಪಟ್ಟಕ್ಕೆ ಬೇಡಿ?: ಕಿರಣ್ ಬೇಡಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಯಾವ ಕ್ಷೇತ್ರ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯನ್ನು ಸದ್ಯಕ್ಕೆ ಘೋಷಿಸುತ್ತಿಲ್ಲ. ಬೇಡಿ ಅವರು ಸಿಎಂ ಸ್ಥಾನ ಅಭ್ಯರ್ಥಿಯೇ ಅಲ್ಲವೇ ಎಂಬುದನ್ನು ಸಂಸದೀಯ ಮಂಡಳಿ ನಿರ್ಧರಿಸಲಿದೆ ಎಂದರು.
ಭ್ರಷ್ಟಾಚಾರ ವಿರೋಧಿ ಆಂದೋಲನ ಹುಟ್ಟು ಹಾಕಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಆಪ್ತ ಬಳಗದಲ್ಲಿ ಕಿರಣ್ ಬೇಡಿ ಅವರು ಒಬ್ಬರಾಗಿದ್ದಾರೆ.
Delhi will get a stable,honest,hardworking,inclusive, sensitive,trusting,progressive,experienced governance. Thanku @PMOIndia+BJP leadership
— Kiran Bedi (@thekiranbedi) January 15, 2015 ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಅವರು ಕೈಗೊಂಡ ಹಲವು ಜನಪರ ಯೋಜನೆಯನ್ನು ಕಿರಣ್ ಬೇಡಿ ಅವರು ಹೊಗಳಿದ್ದರು.
Meanwhile, in chess, @kiranbedi's entry into the BJP before Delhi elections is called this: Check. and Mate.
— Chetan Bhagat (@chetan_bhagat) January 15, 2015 ದೆಹಲಿಗೆ ಗುಜರಾತ್ ಮಾದರಿ ಆಡಳಿತದ ಅವಶ್ಯಕತೆಯಿದೆ. ನಾನು ಸಿಎಂ ಆಗಲು ಸಿದ್ಧ ಎಂದು ಕಿರಣ್ ಬೇಡಿ ಅವರು ಟ್ವೀಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಕಿರಣ್ ಬೇಡಿ ಅವರ ಬಿಜೆಪಿ ಸೇರ್ಪಡೆಯನ್ನು ಹಲವಾರು ಗಣ್ಯರು ಸ್ವಾಗತಿಸಿದ್ದಾರೆ.












Click it and Unblock the Notifications