ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗೂ ಮುನ್ನ ಎಎಪಿಗೆ ಅರ್ಧಶತಕ ಸಂಭ್ರಮ!

By Mahesh
|
Google Oneindia Kannada News

ನವದೆಹಲಿ, ಫೆ.4: ಆಮ್ ಆದ್ಮಿ ಪಕ್ಷ ತಾನು ಹಾಕಿರುವ ಲೆಕ್ಕಾಚಾರ, ಗುಪ್ತ ಮಾಹಿತಿ ಸಂಗ್ರಹ, ಆಂತರಿಕ ಚುನಾವಣಾ ಸಮೀಕ್ಷೆ ವರದಿ ಬಹಿರಂಗ ಪಡಿಸಿ ಎಲ್ಲರ ಹುಬ್ಬೇರಿಸಿದೆ. ಚುನಾವಣೆಗೆ ಮೂರು ದಿನ ಇರುವಾಗ ಎಎಪಿ ತನ್ನ ಸಮೀಕ್ಷೆಯಲ್ಲಿ ಹಾಫ್ ಸೆಂಚುರಿ ಬಾರಿಸಿದೆ. ಈ ಮೂಲಕ ತನ್ನ ಬೆನ್ನು ತಾನೇ ಚಪ್ಪರಿಸಿಕೊಂಡಿದೆ.

70 ಜನ ಸದಸ್ಯರನ್ನು ಹೊಂದಬಹುದಾದ ಅಸೆಂಬ್ಲಿಗೆ ಈ ಬಾರಿ 51 ಜನ ಆಮ್ ಆದ್ಮಿ ಪಕ್ಷದವರೇ ಶಾಸಕರಾಗಿರುತ್ತಾರೆ ಎಂದು ಎಎಪಿಯ ಆಂತರಿಕ ಸಮೀಕ್ಷೆ ಹೇಳುತ್ತಿದೆ. ತನ್ನ ಪ್ರಮುಖ ಎದುರಾಳಿ ಬಿಜೆಪಿಗೆ 15 ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ 4 ಸ್ಥಾನ ಸಿಗಲಿದೆಯಂತೆ.ಫೆ.5 ಚುನಾವಣಾ ಪ್ರಚಾರಕ್ಕೆ ಕೊನೆ ದಿನವಾಗಿದ್ದು, ಫೆ.7ರಂದು ಮತದಾನ ನಡೆಯಲಿದೆ. [ನಾಲ್ಕು ಸಮೀಕ್ಷೆಗಳಲ್ಲೂ ಎಎಪಿ ಮುಂದೆ]

AAP internal survey gives itself 51 seats,15 to BJP

ಎಎಪಿ ನಡೆಸಿದ ಆಂತರಿಕ ಚುನಾವಣಾ ಸಮೀಕ್ಷೆಯ ಫಲಿತಾಂಶದ ಬಗ್ಗೆ ಎಎಪಿ ಮುಖಂಡ ಯೋಗೇಂದ್ರ ಯಾದವ್ ಅವರು ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು. [ಗುಪ್ತಚರ ಇಲಾಖೆ ಸ್ಫೋಟಕ ವರದಿ]

ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಿ ಯಾರನ್ನು ಕಾಣಲು ಬಯಸುತ್ತೀರಿ? ಎಂಬ ಪ್ರಶ್ನೆಗೆ ಶೇ 53ರಷ್ಟು ಮತದಾರರು ಅರವಿಂದ್ ಕೇಜ್ರಿವಾಲ್ ಅವರ ಹೆಸರನ್ನು ಹೇಳಿದ್ದಾರೆ. ಶೇ 24ರಷ್ಟು ಮಂದಿ ಬಿಜೆಪಿಯ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಅವರನ್ನು ಹೆಸರಿಸಿದ್ದಾರೆ.

ಶೇಕಡಾವಾರು ಮತ ಹಂಚಿಕೆ ಪಾಲಿನಲ್ಲೂ ಆಮ್ ಆದ್ಮಿ ಪಕ್ಷ ಮುಂದಿದ್ದು, ಶೇ 46ರಷ್ಟು ಮತಗಳಿಸಲಿದೆಯಂತೆ. ಬಿಜೆಪಿಗೆ ಶೇ 33 ಹಾಗೂ ಕಾಂಗ್ರೆಸ್ಸಿಗೆ ಶೇ 11ರಷ್ಟು ಮತ ಸಿಗಲಿದೆ. ಮಿಕ್ಕ ಮತಗಳು ಇತರೆ ಪಕ್ಷಗಳಿಗೆ ಸಲ್ಲಲಿದೆ. [ದೆಹಲಿ ಚುನಾವಣೆ 2015: ಅಂಕಿ ಅಂಶ ಪಕ್ಷಿನೋಟ]

ಮಂಗಳವಾರ ಪ್ರಕಟವಾದ ಸಮೀಕ್ಷೆಗಳಲ್ಲಿ ಬಿಜೆಪಿಯನ್ನು ಹಿಂದಿಕ್ಕಿ ಎಎಪಿ ಪಕ್ಷ ಮುನ್ನಡೆ ಸಾಧಿಸಿತ್ತು. ಇಂಡಿಯಾ ಟುಡೇ -ಸಿಸೆರೋ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಎಎಪಿಗೆ 38-46 ಸೀಟು, ಬಿಜೆಪಿಗೆ 19-25 ಸೀಟು, ಕಾಂಗ್ರೆಸ್ಸಿಗೆ 3-7 ಸೀಟು ಸಿಗುವ ಸಾಧ್ಯತೆಯಿದೆ ಎನ್ನಲಾಗಿತ್ತು.

English summary
Delhi polls 2015: Three days before the Assembly polls, the Aam Aadmi Party has predicted its victory in the State election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X