ದೆಹಲಿ ಸಿಎಂ ಸೇರಿ 21 ಶಾಸಕರ ವಿರುದ್ಧ ಚಾರ್ಜ್ ಶೀಟ್?

ನವದೆಹಲಿ, ಜೂ.17: ಆಮ್ ಅದ್ಮಿ ಪಕ್ಷಕ್ಕೆ ಯಾಕೋ ಟೈಂ ಚೆನ್ನಾಗಿಲ್ಲ. ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮಾರ್ ನಕಲಿ ಪದವಿ ಪ್ರಮಾಣ ಪತ್ರ ವಿವಾದ, ಸೋಮನಾಥ್ ಭಾರ್ತಿ ಫ್ಯಾಮಿಲಿ ಪ್ರಾಬ್ಲಂ, ಗವರ್ನರ್ ಜೊತೆ ಸಿಎಂ ತಿಕ್ಕಾಟ ಕಣ್ಮುಂದೆ ಇರುವಾಗಲೇ ಮತ್ತೊಂದು ಸಮಸ್ಯೆ ಎದುರಾಗಿದೆ.

ಅರವಿಂದ್ ಕೇಜ್ರಿವಾಲ್ ಸೇರಿದಂತೆ 21 ಆಪ್ ಶಾಸಕರ ವಿರುದ್ಧ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಹಾಕಲು ದೆಹಲಿ ಪೊಲೀಸರು ಸಜ್ಜಾಗಿದ್ದಾರೆ. [ಪತಿ ಸೋಮನಾಥ್ ಕಿರುಕುಳದ ಕಥೆ ಬಿಚ್ಚಿಟ್ಟ ಲಿಪಿಕಾ]

Delhi Police to file charge-sheet against 21 AAP MLAs

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ರಾಜಕೀಯ ಸಂಬಂಧ 6 ಪ್ರಕರಣಗಳು ಸೇರಿದಂತೆ 25ಕ್ಕೂ ಅಧಿಕ ಕ್ರಿಮಿನಲ್ ಕೇಸುಗಳು ಬಾಕಿ ಉಳಿದಿವೆ. ನಕಲಿ ಪದವಿ, ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ನಂತರ ನಕಲಿ ಮದ್ಯ ಸಂಗ್ರಹದಲ್ಲೂ ಎಎಪಿ ಮುಖಂಡರ ಹೆಸರು ತಗುಲಿ ಹಾಕಿಕೊಂಡಿದೆ.

ಅಕ್ರಮ ಮದ್ಯ ಸಂಗ್ರಹ ಆರೋಪ ಹೊತ್ತಿರುವ ನರೇಶ್ ಬಲಿಯನ್, ಸಾರ್ವಜನಿಕ ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪ ದೆಹಲಿ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅವರ ಮೇಲಿದೆ.


ದೆಹಲಿ ಪೊಲೀಸರ ಚಾರ್ಜ್ ಶೀಟ್ ಬಗ್ಗೆ ಆಪ್ ಮುಖಂಡ ಅಶುತೋಷ್ ಪ್ರತಿಕ್ರಿಯಿಸಿ. ಲಲಿತ್ ಮೋದಿಗೆ ಸಹಾಯ ಮಾಡಿ, ವಿವಾದಕ್ಕೀಡಾಗಿರುವ ಸುಷ್ಮಾ ಸ್ವರಾಜ್ ಪ್ರಕರಣದಿಂದ ದೇಶದ ಜನತೆಯ ಗಮನವನ್ನು ಬೇರೆಡೆ ಹರಿಸಲು ಬಿಜೆಪಿ ಈ ಕುತಂತ್ರ ಅನುಸರಿಸುತ್ತಿದೆ ಎಂದಿದ್ದಾರೆ. ದೆಹಲಿ ಪೊಲೀಸರು ಕೂಡಾ ರಾಜಕೀಯ ತಂತ್ರದ ದಾಳವಾಗಿ ಆಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+