ದೆಹಲಿಯಿಂದ ಮೀರತ್ಗೆ ಈಗ 45 ನಿಮಿಷದ ಪ್ರಯಾಣ: ಎಕ್ಸ್ಪ್ರೆಸ್ವೇ ಸಂಚಾರಕ್ಕೆ ಮುಕ್ತ
ನವದೆಹಲಿ, ಏಪ್ರಿಲ್ 1: ಬಹುಕಾಲದಿಂದ ಕಾಯುತ್ತಿದ್ದ ದೆಹಲಿ-ಮೀರತ್ ಎಕ್ಸ್ಪ್ರೆಸ್ವೇ ಹೆದ್ದಾರಿ ಗುರುವಾರದಿಂದ ಸಂಚಾರಕ್ಕೆ ಮುಕ್ತವಾಗಿದೆ. ಪ್ರಸ್ತುತ ಮೀರತ್ ಮತ್ತು ದೆಹಲಿ ನಡುವಿನ ಓಡಾಟಕ್ಕೆ ಎರಡೂವರೆ ಗಂಟೆಗೂ ಅಧಿಕ ಸಮಯ ತಗುಲುತ್ತಿದೆ. ಆದರೆ ಈ ಎಕ್ಸ್ಪ್ರೆಸ್ವೇದಿಂದಾಗಿ ಕೇವಲ 45 ನಿಮಿಷಗಳಲ್ಲಿಯೇ ಪ್ರಯಾಣವನ್ನು ಮುಗಿಸಬಹುದು.
ಎರಡು ನಗರಗಳನ್ನು ಸಂಪರ್ಕಿಸುವ ಈ ಮಹತ್ವಾಕಾಂಕ್ಷಿ ಯೋಜನೆ ಪೂರ್ಣಗೊಂಡಿದ್ದು, ಗುರುವಾರದಿಂದ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. 'ದೆಹಲಿಯಿಂದ ಮೀರತ್ಗೆ ತೆರಳುವ ಪ್ರಯಾಣದ ಸಮಯವನ್ನು ತಗ್ಗಿಸುವುದಾಗಿ ನೀಡಿದ್ದ ನಮ್ಮ ಭರವಸೆಯನ್ನು ನಾವು ಈಡೇರಿಸಿದ್ದೇವೆ' ಎಂದು ರಸ್ತೆ ಹಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.

'ದೆಹಲಿ ಮೀರತ್ ಎಕ್ಸ್ಪ್ರೆಸ್ವೇ ಈಗ ಪೂರ್ಣಗೊಂಡಿದೆ ಮತ್ತು ಸಂಚಾರಕ್ಕೆ ತೆರೆದುಕೊಂಡಿದೆ. ದೆಹಲಿ-ಮೀರತ್ ನಡುವಿನ ಪ್ರಯಾಣದ ವೇಳೆಯನ್ನು 2.5 ಗಂಟೆಯಿಂದ 45 ನಿಮಿಷಕ್ಕೆ ತಗ್ಗಿಸುವ ನಮ್ಮ ಭರವಸೆಯನ್ನು ಈಡೇರಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.
Delhi Meerut Expressway has now been completed & opened to traffic. We have full filled our promise of reducing travel time between Delhi - Meerut from 2.5 hours to 45 minutes. #PragatiKaHighway pic.twitter.com/OgFyOJ5QLs
— Nitin Gadkari (@nitin_gadkari) April 1, 2021
ಮೀರತ್ ಮತ್ತು ದೆಹಲಿ ನಡುವಿನ 96 ಕಿಮೀ ದೂರದ 14 ಲೇನ್ನ ಎಕ್ಸ್ಪ್ರೆಸ್ವೇನಲ್ಲಿ ಪ್ರಯಾಣದ ಸಮಯವು ಕೇವಲ 45 ನಿಮಿಷಕ್ಕೆ ತಗ್ಗಲಿದೆ. ಪ್ರಸ್ತುತ ಮೀರತ್ನಿಂದ ದೆಹಲಿ ತಲುಪಲು ಎನ್ಎಚ್ 58ರ ಮೂಲಕ ಪ್ರಯಾಣಿಸಬೇಕಿದ್ದು, 70 ಕಿಮೀ ದೂರದ ಸಂಚಾರಕ್ಕೆ ಸುಮಾರು ಮೂರು ಗಂಟೆ ಸಮಯ ಬೇಕಾಗುತ್ತಿದೆ.
ಈ ಎಕ್ಸ್ಪ್ರೆಸ್ ವೇ ಹೆದ್ದಾರಿಯು ಮುಜಫ್ಫರ್ನಗರ, ಸಹರಾನ್ಪುರ, ಹರಿದ್ವಾರ ಮತ್ತು ಡೆಹರಾಡೂನ್ನಿಂದ ದೆಹಲಿಗೆ ಇರುವ ಪ್ರಯಾಣದ ಸಮಯವನ್ನು ಕೂಡ ಕಡಿಮೆ ಮಾಡಲಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications