ದೆಹಲಿಯು ಶೀಘ್ರ ಭಾರತದ ಕೊರೊನಾ ರಾಜಧಾನಿಯಾಗಲಿದೆ: ಹೈಕೋರ್ಟ್
ನವದೆಹಲಿ, ನವೆಂಬರ್ 05: ದೆಹಲಿಯಲ್ಲಿ ಕೊರೊನಾದ ಮೂರನೇ ಅಲೆ ಆರಂಭವಾಗಿದೆ, ನಿತ್ಯ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದು, ಆಮ್ ಆದ್ಮಿ ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಹೀಗೆಯೇ ಮುಂದುವರೆದರೆ ದೆಹಲಿ ಒಂದು ದಿನ ಕೊರೊನಾ ರಾಜಧಾನಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದೆ, ಕೊರೊನಾ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ.
ದೆಹಲಿ ಮುನ್ಸಿಪಾಲಿಟಿಯ ವಿವಿಧ ವರ್ಗದ ನೌಕರರಿಗೆ ವೇತನ ಹಾಗೂ ಪಿಂಚಣಿ ನೀಡದ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ದೂರಿನ ವಿಚಾರಣೆ ವೇಳೆ ಪೀಠ ಈ ಅಸಮಾಧಾನ ವ್ಯಕ್ತಪಡಿಸಿದೆ.

ಸಾಂಕ್ರಾಮಿಕರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಗೋಜಲು ಮಾಡಿಕೊಂಡಿದೆ.ನಗರ ಸಧ್ಯದಲ್ಲೇ ಕೊರೊನಾ ರಾಜಧಾನಿಯಾಗಿ ಪರಿವರ್ತನೆಯಾಗಲಿದೆ ಎಂದು ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಸುಬ್ರಮಣಿಯಂ ಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ 24 ಗಂಟೆಯಲ್ಲಿ 50,209 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 83,64,086ಕ್ಕೆ ಏರಿಕೆಯಾಗಿದೆ. ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಕಳೆದ 24 ಗಂಟೆಯಲ್ಲಿ 704 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿ ಮೃತಪಟ್ಟ ಒಟ್ಟು ಕೋವಿಡ ಸೋಂಕಿತರ ಸಂಖ್ಯೆ 1,24,315.
ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣ: ಕೇಂದ್ರ ಸಚಿವರ ಮೆಚ್ಚುಗೆ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 5,27,962. ಕಳೆದ 24 ಗಂಟೆಗಳಿಗೆ ಹೋಲಿಕೆ ಮಾಡಿದರೆ 5,825 ರಷ್ಟು ಕಡಿಮೆಯಾಗಿದೆ. ಇದುವರೆಗೂ 77,11,809 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 24 ಗಂಟೆಯಲ್ಲಿ 55,331 ಜನರು ಡಿಸ್ಚಾರ್ಜ್ ಆಗಿದ್ದಾರೆ.












Click it and Unblock the Notifications