ಚಿತೆಯಿಂದೆದ್ದ ಮಗು! ಇದು ಪವಾಡವಲ್ಲ, ವೈದ್ಯರ ಬೇಜವಾಬ್ದಾರಿ!

Posted By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಡಿಸೆಂಬರ್ 02: ಬದುಕಿದ್ದ ಮಗುವನ್ನು ಸತ್ತಿದೆ ಎಂದು ಘೋಷಿಸಿ, ಅಂತ್ಯಸಂಸ್ಕಾರದ ಸಮಯದಲ್ಲಿ ಇದ್ದಕ್ಕಿದ್ದಂತೆ ಮಗು ಚಲನವಲನ ಆರಂಭಿಸಿದ ವಿಚಿತ್ರ ಘಟನೆ ದೆಹಲಿಯ ಶಾಲಿಮರ್ ಬಾಗ್ ನಲ್ಲಿ ನಡೆದಿದೆ.

ಇದೇನು ಪವಾಡವಾ ಅಂದ್ರೆ ಖಂಡಿತ ಅಲ್ಲ, ಬೇಜವಾಬ್ದಾರಿ ವೈದ್ಯರು ಮಾಡಿದ ಅಚಾತುರ್ಯ ಇದು! ನವೆಂಬರ್ 30 ರಂದು 20 ವರ್ಷದ ವರ್ಷ ಎಂಬ ಮಹಿಳೆ ದೆಹಲಿಯ ಶಾಲಿಮರ್ ಬಾಗ್ ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.

ಹಣಕ್ಕಾಗಿ ಹೆಣಕ್ಕೆ ಚಿಕಿತ್ಸೆ ನೀಡಿ 18 ಲಕ್ಷ ರೂ.ಬಿಲ್ಲು ಕೇಳಿತೇ ಫೋರ್ಟೀಸ್?!

Delhi: Max hospital declares twins dead, family finds boy alive just before last rites

ಹುಟ್ಟಿದ ಕೆಲವೇ ಗಂಟೆಗಳಲ್ಲಿ ಹೆಣ್ಣು ಮತ್ತು ಗಂಡು ಇಬ್ಬರೂ ಮಕ್ಕಳು ಮೃತರಾಗಿದ್ದಾರೆಂದು ಘೋಷಿಸಿ, ಮಕ್ಕಳನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ ಕುಟುಂಬಕ್ಕೆ ಕೈಗೊಪ್ಪಿಸಿದರು. ದುಃಖತಪ್ತರಾದ ಕುಟುಂಬದ ಜನರು ಮಕ್ಕಳ ಅಂತ್ಯಸಂಸ್ಕಾರ ಮಾಡುವುದಕ್ಕೆಂದು ತೆರಳಿದ್ದಾಗ, ಬಂಧುಗಳೊಬ್ಬರ ತೊಡೆ ಮೇಲಿದ್ದ ಗಂಡು ಮಗು ಇದ್ದಕ್ಕಿದ್ದಂತೇ ಕೈಕಾಲು ಆಡಿಸುವುದಕ್ಕೆ ಶುರುಮಾಡಿತ್ತು. ಉಸಿರಾಡುತ್ತಿರುವುದೂ ಗಮನಕ್ಕೆ ಬಂತು. ಇದರಿಂದ ದಿಗ್ಭ್ರಮೆಗೊಂಡ ಕುಟುಂಬಸ್ತರು ಮಗುವಿನ ದೇಹಕ್ಕೆ ಸುತ್ತಿದ್ದ ಪ್ಲಾಸ್ಟಿಕ್ ಅನ್ನು ತೆಗೆದು ಹತ್ತಿರದ ಆಸ್ಪತ್ರೆಗೆ ತೆರಳಿದಾಗ ಮಗು ಬದುಕಿದೆ ಎಂಬುದು ತಿಳಿದಿದೆ. ಸದ್ಯಕ್ಕೆ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವೈರಲ್ ಜ್ವರಕ್ಕೆ ಡೆಂಗ್ಯೂ ಚಿಕಿತ್ಸೆ: ಮಗುವಿನ ಸಾವಿನ 6 ವರ್ಷದ ಮೇಲೆ FIR ದಾಖಲು

ಬೇಜವಾಬ್ದಾರಿ ವರ್ತನೆಗಾಗಿ ಮ್ಯಾಕ್ಸ್ ಆಸ್ಪತ್ರೆಯ ಮೇಲೆ ದೂರು ದಾಖಲಿಸಲಾಗಿದ್ದು, ಆಸ್ಪತ್ರೆಯ ಬೇಜವಾಬ್ದಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಮಂತ್ರಿ ಪ್ರಕಾಶ್ ಜಾವ್ಡೇಕರ್, ದೆಹಲಿ ಸರ್ಕಾರಕ್ಕೆ ಸೂಚಿಸಿದ್ದಾರೆ.(ಸಾಂದರ್ಭಿಕ ಚಿತ್ರ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Delhi hospital declared premature twins dead and handed them over to the parents. However the parents who were about to perform the last rites found that one of them was alive. The police have now registered a case against the Max Hospital in Shalimar Bagh on the basis of a complaint filed by the family.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ